ಶೇ.40ರಷ್ಟು ವೇತನ ಕಡಿತದೊಂದಿಗೆ ಹೇಗೆ ಬದುಕಲು ಸಾಧ್ಯ: ಎಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕರ ಅಳಲು

ಶೇ.40ರಷ್ಟು ವೇತನ ಕಡಿತದೊಂದಿಗೆ ಹೇಗೆ ಬದುಕಲು ಸಾಧ್ಯ..? ಇದು ಎಂಜಿನಿಯರಿಂಗ್ ಕಾಲೇಜು ಫ್ರಾಧ್ಯಾಪಕರ ಅಳಲಾಗಿದ್ದು, ಬಹುತೇಕ ಖಾಸಗಿ ಕಾಲೇಜುಗಳ ಪ್ರಾಧ್ಯಾಪಕರ ಸಮಸ್ಯೆ ಇದೇ ಆಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಶೇ.40ರಷ್ಟು ವೇತನ ಕಡಿತದೊಂದಿಗೆ ಹೇಗೆ ಬದುಕಲು ಸಾಧ್ಯ..? ಇದು ಎಂಜಿನಿಯರಿಂಗ್ ಕಾಲೇಜು ಫ್ರಾಧ್ಯಾಪಕರ ಅಳಲಾಗಿದ್ದು, ಬಹುತೇಕ ಖಾಸಗಿ ಕಾಲೇಜುಗಳ ಪ್ರಾಧ್ಯಾಪಕರ ಸಮಸ್ಯೆ ಇದೇ ಆಗಿದೆ.

ಕೊರೋನಾ ಲಾಕ್ ಡೌನ್ ನಿಂದಾಗಿ ಕಾಲೇಜುಗಳು ಸ್ಥಗಿತವಾಗಿದ್ದು, ಅಂದಿನಿಂದ ಎಲ್ಲ ಕಾಲೇಜು ಆಡಳಿತ ಮಂಡಳಿಗಳು ಸಿಬ್ಬಂದಿಗಳು, ಶಿಕ್ಷಕರು ಮತ್ತು ಪ್ರಾಧ್ಯಾಪಕರಿಗೆ ವೇತನ ಕಡಿತ ಮಾಡಿವೆ. ಏಪ್ರಿಲ್ ನಿಂದ ಶೇ.40ರಷ್ಟು ವೇತನ ಕಡಿತವಾಗಿದ್ದು, ಸಾಕಷ್ಟು ಮಹಿಳಾ ಪ್ರಾಧ್ಯಾಪಕರು ಕೆಲಸವನ್ನೇ ತೊರೆದಿದ್ದಾರೆ.

ಹೌದು.. ಕೊರೋನಾ ಸಾಂಕ್ರಾಮಿಕದಿಂದಾಗಿ ಸಾಕಷ್ಟು ವಲಯಗಳು ನೆಲ ಕಚ್ಚಿದ್ದು, ಈ ಪೈಕಿ ಶಿಕ್ಷಣ ಕ್ಷೇತ್ರ ಕೂಡ ಒಂದಾಗಿದೆ. ವಿದ್ಯಾರ್ಥಿಳಿಲ್ಲದೇ, ಶಿಕ್ಷಣ ವ್ಯವಸ್ಥೆಗಳು ಕೆಲಸವಿಲ್ಲದೇ ನಷ್ಟ ಅನುಭವಿಸುವಂತಾಗಿದೆ. ಪೋಷಕರು ಶಾಲಾ-ಕಾಲೇಜು ಶುಲ್ಕ ಕಟ್ಟದೇ ಇರುವುದರಿಂದ ಶಾಲಾ-ಕಾಲೇಜುಗಳ ನಿರ್ವಹಣೆ  ಕಷ್ಟಕರವಾಗಿದೆ. ಇದರಿಂದ ಬಹುತೇಕ ಎಲ್ಲ ವಿದ್ಯಾಸಂಸ್ಥೆಗಳು ತಮ್ಮ ಸಿಬ್ಬಂದಿಗಳಿಗೆ ವೇತನ ಕಡಿತ ಮಾಡಿದ್ದು, ಇದರಿಂದ ಸಾಕಷ್ಟು ಶಿಕ್ಷಕರು, ಪ್ರಾಧ್ಯಾಪಕರು, ಸಿಬ್ಬಂದಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರ ಪ್ರಾಧ್ಯಪಕರು, ಶೇ.40ರಷ್ಟು ವೇತನ ಕಡಿತದೊಂದಿಗೆ ಹೇಗೆ ಬದುಕಲು ಸಾಧ್ಯ..? ದೇವರ ದಯೆ ನಾವು ಹೇಗೋ ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ಎಲ್ಲರಗೂ ಎರಡು ಆದಾಯ ಮೂಲಗಳಿರುತ್ತವೆ ಎಂದು ತಿಳಿಯಲು ಸಾಧ್ಯವಿಲ್ಲ.  ನಾನು ಪಿಎಚ್ಡಿ ಮಾಡಿದ್ದೇನೆ. ಆದರೆ ಶೇ.40ವೇತನ ಕಡಿತ ಮಾಡಲಾಗಿದೆ. 2018-19ರಲ್ಲಿ ಎಐಸಿಟಿಇ ನಿಯಮಗಳಿಂದಾಗಿ ಖಾಸಗಿ ಶಾಲೆಗಳ ಪ್ರಾಧ್ಯಾಪಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ನಿಯೋಜಿಸುವ ನಿಯಮದಿಂದಾಗಿ ಸಾಕಷ್ಟು ಪ್ರಾಧ್ಯಾಪಕರು ಉದ್ಯೋಗ  ಕಳೆದುಕೊಂಡಿದ್ದಾರೆ. ಉದ್ಯೋಗದಲ್ಲಿರುವ ಶಿಕ್ಷಕರಿಗೆ ಕೋವಿಡ್ ನಿಂದಾಗಿ ವೇತನ ಕಡಿತ ಬರೆ ಎಳೆಯಲಾಗಿದೆ. ಅಲ್ಲದೆ ಇನ್ನೂ ಕೆಲ ಶಿಕ್ಷಕರನ್ನು ಅನಿರ್ಧಿಷ್ಟಾವಧಿ ವೇತನ ಇಲ್ಲದ ರಜೆ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಸ್ಥಳೀಯ ಪರಿಶೀಲನಾ ಸಮಿತಿ ಎಐಸಿಟಿಇ ಗೆ ಪತ್ರಬರೆದಿದ್ದು, ಶಿಕ್ಷಕರ ಪರಿಸ್ಥಿತಿ ವಿವರಿಸಿದೆ. ಈ ಪತ್ರವನ್ನು ಸಿಎಂ ಕಚೇರಿ ಮತ್ತು ಪ್ರಧಾನಿ ಕಚೇರಿಗೆ ಕೂಡ ರವಾನಿಸಲಾಗಿದೆ ಎಂದು ಎಂಜಿನಿಯರಿಂಗ್ ಕಾಲೇಜುಗಳ ಅಧ್ಯಾಪಕರ ಸಂಘದ ಅಧ್ಯಕ್ಷ ರಾಜಶೇಖರ್ ಹೇಳಿದ್ದಾರೆ. 'ಶಿಕ್ಷಕರ ವೇತನ ಕಡಿತ ಅಥವಾ  ಉದ್ಯೋಗದಿಂದ ತೆಗೆದು ಹಾಕಿರುವ ಕಾಲೇಜು ಆಡಳಿತ ಮಂಡಳಿ ಕ್ರಮವನ್ನು ಕೂಡಲೇ ಹಿಂದಕ್ಕೆ ಪಡೆಯುವಂತೆ ಕೋರಿದ್ದಾರೆ. ವೇತನ ಕಡಿತ ಅಥವಾ ಉದ್ಯೋಗದಿಂದ ತೆಗೆದು ಹಾಕಲ್ಪಟ್ಟಿರುವ ಬಹುತೇಕರು ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.ಸರ್ಕಾರ ಕನಿಷ್ಠ ಎಐಸಿಟಿಇ ನಿಯಮವಾಳಿಗಳ ಅನುಸಾರ ವೇತನ  ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com