ಕೊಳ್ಳೇಗಾಲ: ಗುಂಡಿ ಬಿದ್ದ ರಸ್ತೆಯಿಂದಾಗಿ ಶಾಲಾ ಮುಖ್ಯ ಶಿಕ್ಷಕ ದುರ್ಮರಣ

ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರ – ಮಧುವನಹಳ್ಳಿಯ ನಡುವಿನ ಗುಂಡಿಬಿದ್ದ ರಸ್ತೆಯಿಂದಾಗಿ ಮುಖ್ಯಶಿಕ್ಷಕರರೊಬ್ಬರು ಬೈಕಿನಿಂದ ಆಯಾತಪ್ಪಿ ಬಿದ್ದು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ನೆಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರ – ಮಧುವನಹಳ್ಳಿಯ ನಡುವಿನ ಗುಂಡಿಬಿದ್ದ ರಸ್ತೆಯಿಂದಾಗಿ ಮುಖ್ಯಶಿಕ್ಷಕರರೊಬ್ಬರು ಬೈಕಿನಿಂದ ಆಯಾತಪ್ಪಿ ಬಿದ್ದು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ನೆಡೆದಿದೆ.

ಮೃತರನ್ನು ತಾಲೂಕಿನ ಮಧುವನಹಳ್ಳಿ ಗ್ರಾಮದ ಮಹದೇವಶೆಟ್ಟಿ (೫೫) ಎಂದು ಗುರುತಿಸಲಾಗಿದೆ. ಇವರು ಹನೂರು ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿವರ್ಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಸಾವು ಆಹ್ವಾನಿಸುವ ಗುಂಡಿರಸ್ತೆಗಳು : ಕೊಳ್ಳೆಗಾಲದಿಂದ ಮಹದೇಶ್ವರಬೆಟ್ಟ, ಒಡೆಯರಪಾಳ್ಯ ಮಾರ್ಗಗಳನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದು ಸಿದ್ದಯ್ಯನಪುರ, ಮಧುವನಹಳ್ಳಿ ಗ್ರಾಮಗಳಲ್ಲಿ ಹಾದುಹೋಗಿದೆ. ಈ ರಸ್ತೆಯಲ್ಲಿ ಬಾರಿ ಪ್ರಮಾಣದಲ್ಲಿ ಗುಂಡಿಬಿದ್ದಿದ್ದು ಸಾವನ್ನು ಆಹ್ವಾನಿಸುತ್ತಿರುವ ರಸ್ತೆಯಾಗಿ ಪರಿಣಮಿಸಿದೆ ಇದರ ಪರಿಣಾಮ ಇಂದು ಕೆಲಸ ನಿಮಿತ್ತ ಬೈಕ್‌ನಲ್ಲಿ ಹೊಟಿದ್ದ ಮುಖ್ಯಶಿಕ್ಷಕ ಮಹದೇವಶೆಟ್ಟರು ಸಾವನ್ನಪ್ಪಿದ್ದಾರೆ.

ಯಾವಾಗಲು ವಾಹನಗಳಿಂದಲೇ ಗಿಜಿಗಿಡುವ ಈ ರಸ್ತೆಯು ವಾಹನ ಚಲಾಯಿಸಲು ಯೋಗ್ಯವಲ್ಲದ ರಸ್ತೆಯಾಗಿದೆ. ಈ ರಸ್ತೆಯು ಅಭಿವೃದ್ದಿ ಕಂಡು ಎಷ್ಟು ದಿನಗಳಾಗಿದ್ದಾವೋ, ಈ ರಸ್ತೆಯ ಮೂಲಕವೇ ಸರ್ಕಾರದ ಮಂತ್ರಿಯಾಗಿರುವ ಈಶ್ವರಪ್ಪ, ಸುರೇಶ್ ಕುಮಾರ್, ಅಧಿಕಾರಿಗಳು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದಾರೆ ಅದರೂ ಕೂಡ ಅಭಿವೃದ್ದಿಕಂಡಿಲ್ಲಾ. ರಸ್ತೆಯ ಗುಂಡಿಯನ್ನಾದರು ಮುಚ್ಚಿಸಿಲ್ಲ ಅಷ್ಟೇ ಯಾಕೆ ಹನೂರಿನ ಶಾಸಕರು ಪ್ರತಿದಿನ ಇದೆ ರಸ್ತೆಯಲ್ಲಿ ಓಡಾಡುತ್ತಾರೆ ಎನ್ನುವುದೇ ಸೂಜಿಗದ ಸಂಗತಿಯಾಗಿದೆ.

ಇನ್ನಾದರು ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರಸ್ತೆಯ ಗುಂಡಿಯನ್ನಾದರು ಮುಚ್ಚಿಸಿ ಸಾರ್ವಜನಿಕರು ಭಯವಿಲ್ಲದೆ ಓಡಾಡಲು ಸಹಕರಿಸಲಿ ಎನ್ನುವುದು ಮಧುವನಹಳ್ಳಿ ಗ್ರಾಮಸ್ಥರ ಆಗ್ರಹವಾಗಿದೆ. 

ವರದಿ: ಗುಳಿಪುರ ನಂದೀಶ
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com