ಡ್ರಗ್ಸ್ ಕೇಸ್: ಆದಿತ್ಯ ಆಳ್ವ ದೇಶ ಬಿಟ್ಟು ಹೋಗದಂತೆ ತಡೆಯಲು ಸಿಸಿಬಿ ಲುಕ್ ಔಟ್ ನೋಟಿಸ್

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಆರನೇ ಆರೋಪಿಯಾಗಿರುವ ಆದಿತ್ಯ ಆಳ್ವ ದೇಶ ಬಿಟ್ಟು ಪರಾರಿಯಾಗದಂತೆ ತಡೆಯಲು ಸಿಸಿಬಿ ಪೊಲೀಸರು ಲುಕ್ ಔಟ್ ನೋಟಿಸ್ ನೀಡಿದ್ದಾರೆ.
ಆದಿತ್ಯ ಆಳ್ವ
ಆದಿತ್ಯ ಆಳ್ವ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಆರನೇ ಆರೋಪಿಯಾಗಿರುವ ಆದಿತ್ಯ ಆಳ್ವ ದೇಶ ಬಿಟ್ಟು ಪರಾರಿಯಾಗದಂತೆ ತಡೆಯಲು ಸಿಸಿಬಿ ಪೊಲೀಸರು ಲುಕ್ ಔಟ್ ನೋಟಿಸ್ ನೀಡಿದ್ದಾರೆ.

ಡ್ರಗ್ಸ್ ಪ್ರಕರಣದ ಆರನೇ ಆರೋಪಿಯಾಗಿರುವ ಆದಿತ್ಯ ಆಳ್ವ ದೇಶ ಬಿಟ್ಟು ಹೋಗುವ ಸಾಧ್ಯತೆಯಿರುವುದರಿಂದ ಲುಕ್ ಔಟ್ ನೋಟಿಸ್ ನೀಡಿರುವುದಾಗಿ ನಗರ ಪೊಲೀಸ್ ಆಯಕ್ತ ಕಮಲ್ ಪಂಥ್ ತಿಳಿಸಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಇದುವರೆಗೂ 10 ಮಂದಿಯನ್ನು ಬಂಧಿಸಲಾಗಿದ್ದು, ಇದರಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಕೂಡ ಸೇರಿದ್ದಾರೆ. ಸರ್ಕಾರಿ ಉದ್ಯೋಗಿ ಶಿವಪ್ರಕಾಶ್ ಚಪ್ಪಿ ಮತ್ತು ಪ್ರದಾನ ಆರೋಪಿ ಶೇಕ್  ಫಾಜಿಲ್ ತಲೆ ಮರೆಸಿಕೊಂಡಿದ್ದಾರೆ.  ಶ್ರೀಲಂಕಾದಲ್ಲಿ  ಕ್ಯಾಸಿನೋ ನಡೆಸುತ್ತಿರುವ ಫಾಜಿಲ್  ಶಾಸಕರೊಬ್ಬರ ಆಪ್ತನಾಗಿದ್ದಾನೆ.

ಇತ್ತೀಚೆಗೆ ಸಿಸಿಬಿ ಪೊಲೀಸರು ಆಳ್ವ ಒಡೆತನಕ್ಕೆ ಸೇರಿದ ಹೌಸ್ ಆಫ್ ಲೈಫ್ ಎಂಬ ರೆಸಾರ್ಟ್ ಮೇಲೆ ದಾಳಿ ನಡೆಸಿತ್ತು. ಮತ್ತು ಅಲ್ಲಿ ಕೆಲವು ವಸ್ತುಗಳನ್ನು ಸೀಜ್ ಮಾಡಿತ್ತು. ಬಾಲಿವುಡ್ ನಟ ವಿವೇಕ್ ಓಬೇರಾಯ್ ಅವರ ಬಾವ ಮೈದುನನಾಗಿರುವ ಆದಿತ್ಯ ಐಷಾರಾಮಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com