ಕೋವಿಡ್-19 ಎಫೆಕ್ಟ್: ನಮ್ಮ ಮೆಟ್ರೋ ಕಾರ್ಡ್ ಸಿಂಧುತ್ವ ಅವಧಿ 10 ವರ್ಷಗಳಿಗೆ ಹೆಚ್ಚಳ

ಕೊರೋನಾ ಸಾಂಕ್ರಾಮಿಕದಿಂದಾಗಿ ನಗದು ವಹಿವಾಟು ನಿಯಂತ್ರಿಸುವ ಉದ್ದೇಶದಿಂದ ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ಕಾರ್ಡ್ ಗಳ ಸಿಂಧುತ್ವ ಅವಧಿಯನ್ನು 10 ವರ್ಷಗಳಿಗೆ ಹೆಚ್ಚಳ ಮಾಡಿದೆ.
ನಮ್ಮ ಮೆಟ್ರೋ ಕಾರ್ಡ್
ನಮ್ಮ ಮೆಟ್ರೋ ಕಾರ್ಡ್

ಬೆಂಗಳೂರು: ಕೊರೋನಾ ಸಾಂಕ್ರಾಮಿಕದಿಂದಾಗಿ ನಗದು ವಹಿವಾಟು ನಿಯಂತ್ರಿಸುವ ಉದ್ದೇಶದಿಂದ ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ಕಾರ್ಡ್ ಗಳ ಸಿಂಧುತ್ವ ಅವಧಿಯನ್ನು 10 ವರ್ಷಗಳಿಗೆ ಹೆಚ್ಚಳ ಮಾಡಿದೆ.

ಹೌದು.. ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಪ್ರಯಾಣಿಕರಿಗೆ ವಿತರಿಸಿರುವ ಸ್ಮಾರ್ಟ್‌ಕಾರ್ಡ್‌ ಅಥವಾ ನಮ್ಮ ಮೆಟ್ರೋ ಕಾರ್ಡ್ ಸಿಂಧುತ್ವ (ವ್ಯಾಲಿಡಿಟಿ) ಅವಧಿಯನ್ನು  10 ವರ್ಷಕ್ಕೆ ಏರಿಕೆ ಮಾಡಿದ್ದು, 2030ರ ಸೆಪ್ಟೆಂಬರ್‌ವರೆಗೂ ಕಾರ್ಡ್ ಅನ್ನು ಪ್ರಯಾಣಿಕರು ಬಳಕೆ ಮಾಡಬಹುದು  ಎಂದು ಹೇಳಿದೆ.

ಅಂತೆಯೇ ಪ್ರಸ್ತುತ ಅವಧಿ ಮುಗಿದಿರುವ ಸ್ಮಾರ್ಟ್‌ಕಾರ್ಡ್‌ಗಳನ್ನು ಪುನರ್‌ ಸಕ್ರಿಯಗೊಳಿಸಲು ಸದ್ಯ ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದೂ ನಿಗಮ ಸ್ಪಷ್ಟಪಡಿಸಿದೆ. ಈ ಹಿಂದೆ ಕಾರ್ಡ್‌ಗಳ ಊರ್ಜಿತತೆ ಅಥವಾ ಸಿಂಧುತ್ವ ಒಂದು ವರ್ಷದಾಗಿತ್ತು. ಇವುಗಳನ್ನು ಮೆಟ್ರೊ ನಿಲ್ದಾಣಗಳಲ್ಲಿಯೇ ಪುನರ್‌  ಕ್ರಿಯಗೊಳಿಸಬೇಕಾಗಿತ್ತು. ಹೀಗಾಗಿ ಕಾರ್ಡ್ ಪುನರ್ ಸಕ್ರಿಯಗೊಳಿಸಲು ಮೆಟ್ರೋ ನಿಲ್ದಾಣಗಳಲ್ಲಿ ಜನ ಸರತಿ ಸಾಲಲ್ಲಿ ನಿಲ್ಲಬೇಕಿತ್ತು. ಇದರಿಂದ ನಿಲ್ದಾಣಗಳಲ್ಲಿ ಜನದಟ್ಟಣೆಯಾಗುತ್ತಿತ್ತು. ಇದರಿಂದ ಪ್ರಯಾಣಿಕರೂ ಕೂಡ ಸಮಸ್ಯೆ ಎದುರಾಗುತ್ತಿತ್ತು. 

ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಜನದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ಮೆಟ್ರೋ ನಿಗಮ ಇದೀಗ ಮಹತ್ವದ ನಿರ್ಣಯ ಕೈಗೊಂಡಿದೆ. ನಗದು ವಹಿವಾಟು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಜನದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ಕಾರ್ಡ್ ಗಳ ಸಿಂಧುತ್ವ ಅವಧಿಯನ್ನು 10  ವರ್ಷಗಳಿಗೆ ಹೆಚ್ಚಳ ಮಾಡಿದೆ. ಅಂತೆಯೇ ಸ್ಮಾರ್ಟ್‌ಕಾರ್ಡ್‌ಗಳ ರಿಚಾರ್ಜ್‌ಗೂ ವಿವಿಧ ಆಯ್ಕೆಗಳನ್ನು ನೀಡಿರುವ ಬಿಎಂಆರ್‌ಸಿಎಲ್, ನಿಗಮದ ವೆಬ್‌ಸೈಟ್, ನೆಟ್‌ ಬ್ಯಾಂಕಿಂಗ್ ಮತ್ತು ನಿಗಮದ ಮೊಬೈಲ್‌ ಆ್ಯಪ್‌ ಮೂಲಕವೂ ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಿಕೊಳ್ಳಬಹುದು ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com