ಬೆಂಗಳೂರು: ಇಬ್ಬರು ಡ್ರಗ್ಸ್ ಪೆಡ್ಲರ್ ಗಳ ಬಂಧನ, 3.30 ಕೋಟಿ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರು ಮಹಾನಗರ ಪೊಲೀಸರು ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿ 3.30 ಕೋಟಿ ರೂ. ಮೌಲ್ಯದ 1 ಕೆಜಿ 280 ಗ್ರಾಂ, ಬ್ರೌನ್ ಶುಗರ್ ಸೇರಿದಂತೆ ನಿಷೇಧಿತ ಡ್ರಗ್ಸ್ ಗಳನ್ನು ವಶಪಡಿಸಿಕೊಂಡಿದ್ದಾರೆ.

Published: 23rd September 2020 03:33 PM  |   Last Updated: 23rd September 2020 05:15 PM   |  A+A-


Posted By : Raghavendra Adiga
Source : UNI

ಬೆಂಗಳೂರು: ಬೆಂಗಳೂರು ಮಹಾನಗರ ಪೊಲೀಸರು ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿ 3.30 ಕೋಟಿ ರೂ. ಮೌಲ್ಯದ 1 ಕೆಜಿ 280 ಗ್ರಾಂ, ಬ್ರೌನ್ ಶುಗರ್ ಸೇರಿದಂತೆ ನಿಷೇಧಿತ ಡ್ರಗ್ಸ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು 31 ವರ್ಷದ ರಾಜೂರಂ ಬಿಷ್ಣೋಯ್ ಮತ್ತು 21 ವರ್ಷದ ಸುನಿಲ್ ಕುಮಾರ್ ಎಂದು ಗುರುತಿಸಲಾಗಿದೆ.

ರಾಜಸ್ಥಾನ ಮೂಲದವರಾದ ಆರೋಪಿಗಳಿಂದ ವಶಕ್ಕೆ ಪಡೆಯಲಾದ ನಿಷೇಧಿತ ಡ್ರಗ್ಸ್ ಪೈಕಿ  475 ಗ್ರಾಂ ಅಫಿಮು,  25 ಎಲ್ಎಸ್ಡಿ ಸ್ಟ್ರಿಪ್ಸ್, 35 ಗ್ರಾಂ ಎಂಡಿಎಂಎ ಫಾಯಿಲ್ ರೋಲ್ ಗಳು. 3 ಮೊಬೈಲ್ ಫೋನ್,  2 ಮೋಟಾರ್ ಸೈಕಲ್, 3 ತೂಕದ ಯಂತ್ರಗಳು ಸೇರಿವೆ.

ಸಿಟಿ ಮಾರ್ಕೆಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ 

Stay up to date on all the latest ರಾಜ್ಯ news
Poll
Rohit Sharma

ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ಸಾಧನೆಯ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp