ಹಾವೇರಿ: ಎತ್ತಿನ ಬಂಡಿ ಸಮೇತ ನೀರುಪಾಲಾಗಿದ್ದ ಇಬ್ಬರು ಯುವಕರ ಶವ ಪತ್ತೆ

ಎರಡು ದಿನಗಳ ಹಿಂದೆ ಎತ್ತಿನ ಬಂಡಿ ಸಮೇತ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕರಿಬ್ಬರ ಶವ ಪತ್ತೆಯಾಗಿದೆ. 

Published: 23rd September 2020 01:35 PM  |   Last Updated: 23rd September 2020 01:35 PM   |  A+A-


ಮೃತ ಯುವಕರಾದ ಜಗದೀಶ್ ​ಐರಣಿ ಹಾಗೂ ಬೆಟ್ಟಪ್ಪ ಮಿಳ್ಳಿ

Posted By : Raghavendra Adiga
Source : Online Desk

ಹಾವೇರಿ: ಎರಡು ದಿನಗಳ ಹಿಂದೆ ಎತ್ತಿನ ಬಂಡಿ ಸಮೇತ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕರಿಬ್ಬರ ಶವ ಪತ್ತೆಯಾಗಿದೆ. 

ನದಿಯಲ್ಲಿ ಮರಳು ತರಲು ಹೋಗಿದ್ದ ರಾಣೇಬೆನ್ನೂರು ತಾಲೂಕಿನ ಅರೆಮಲ್ಲಾಪುರ ಗ್ರಾಮದ ಜಗದೀಶ್ ​ಐರಣಿ (25), ಬೆಟ್ಟಪ್ಪ ಮಿಳ್ಳಿ (25) ಎನ್ನುವವರ ಶವ ಇಂದು ಪತ್ತೆಯಾಗಿದೆ.    

ಸತತ ಎರಡು ದಿನಗಳ ಕಾಲ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದೊಂಡನೆ ಕಾರ್ಯಾಚರಣೆ ನಡೆದ ನಂತರ  9 ಕಿ.ಮೀ ಅಂತರದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದೆ. ಸಧ್ಯ ಮೃತ ಯುವಕರ ಕುಟುಂಬ, ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆ ಸಂಬಂಧ ರಾಣೇಬೆನ್ನೂರು ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Stay up to date on all the latest ರಾಜ್ಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp