ಈರುಳ್ಳಿ ರಫ್ತು ನಿಷೇಧ: 1 ವಾರದಲ್ಲಿ 40 ಲಕ್ಷ ನಷ್ಟ; ಬೆಂಗಳೂರಿನ ರಫ್ತುದಾರರ ಅಳಲು!

ಈರುಳ್ಳಿ ರಫ್ತು ನಿಷೇಧ ಹೇರಿದ ಮೇಲೆ ಬೆಂಗಳೂರಿನ ಈರುಳ್ಳಿ ರಫ್ತುದಾರದು ಒಂದು ವಾರದಲ್ಲಿ ಬರೊಬ್ಬರಿ 40 ಲಕ್ಷ ನಷ್ಟ ಎದುರಿಸಿದ್ದಾರೆ. 
ಈರುಳ್ಳಿ ರಫ್ತು ನಿಷೇಧ: 1 ವಾರದಲ್ಲಿ 40 ಲಕ್ಷ ನಷ್ಟ: ಬೆಂಗಳೂರಿನ ರಫ್ತುದಾರರ ಕಣ್ಣಲ್ಲಿ ನೀರು
ಈರುಳ್ಳಿ ರಫ್ತು ನಿಷೇಧ: 1 ವಾರದಲ್ಲಿ 40 ಲಕ್ಷ ನಷ್ಟ: ಬೆಂಗಳೂರಿನ ರಫ್ತುದಾರರ ಕಣ್ಣಲ್ಲಿ ನೀರು

ಈರುಳ್ಳಿ ರಫ್ತು ನಿಷೇಧ ಹೇರಿದ ಮೇಲೆ ಬೆಂಗಳೂರಿನ ಈರುಳ್ಳಿ ರಫ್ತುದಾರದು ಒಂದು ವಾರದಲ್ಲಿ ಬರೊಬ್ಬರಿ 40 ಲಕ್ಷ ನಷ್ಟ ಎದುರಿಸಿದ್ದಾರೆ. 

ಈಗಾಗಲೇ ತಮ್ಮ ಬಳಿ ಉಳಿದಿದ್ದ ದಾಸ್ತಾನು ಒಂದು ವಾರಕ್ಕಿಂತ ಹೆಚ್ಚು ಇಟ್ಟರೆ ಕೆಡುತ್ತದೆ, ಈ ಕಾರಣಕ್ಕಾಗಿ ಅರ್ಧ ಬೆಲೆಗೆ ಅವುಗಳನ್ನು ಸ್ಥಳೀಯ ಮಟ್ಟದಲ್ಲಿ ಮಾರಾಟ ಮಾಡಲಾಗಿದ್ದು, ತೀವ್ರ ನಷ್ಟ ಉಂಟಾಗಿದೆ ಎನ್ನುತ್ತಾರೆ ಯಶವಂತಪುರ ಎಪಿಎಂಸಿ ಯಾರ್ಡ್ ಬಳಿ ಇರುವ ಕೆ.ವೆಂಕಟೇಶ &  ಕೋ. ನ ಮಾಲಿಕರಾದ ಎಸ್. ಆನಂದನ್.

ಸೆ.14 ರಂದು ಮಳೆಯ ಕಾರಣದಿಂದಾಗಿ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಈರುಳ್ಳಿ ಬೆಳೆ ಅಭಾವ ಎದುರಾಗಿದ್ದು, ವಿದೇಶಿ ವ್ಯಾಪಾರಗಳ ಪ್ರಧಾನ ನಿರ್ದೇಷಕರು ಈರುಳ್ಳಿ ರಫ್ತು ಮಾಡುವುದಕ್ಕೆ ನಿರ್ಬಂಧ ವಿಧಿಸಿದ್ದರು. ಇದು ಈರುಳ್ಳಿ ಬೆಲೆ ಏರಿಕೆಗೆ ಕಾರಣವಾಗಿತ್ತು. "ನಾನು ಚಳ್ಳಕೆರೆ, ಚಿತ್ರದುರ್ಗ ಹಾಗೂ ಸುತ್ತಮುತ್ತಲ ಪ್ರದೇಶಗಳಿಂದ ಈರುಳ್ಳಿ ಖರೀದಿಸುತ್ತೇನೆ, ಒಂದು ವಾರದಲ್ಲಿ 40 ಲಕ್ಷ ನಷ್ಟ ಎದುರಿಸಿದ್ದೇನೆ. 

ಶ್ರೀಲಂಕಾ, ಬಾಂಗ್ಲಾದೇಶ, ಬಹ್ರೈನ್, ಮಲೇಷ್ಯಾ, ವಿಯೆಟ್ನಾಮ್, ಹಾಂಗ್ ಕಾಂಗ್ 1,74,000  ಕಿಲೋಗ್ರಾಮ್ ನಷ್ಟು ಈರುಳ್ಳಿ ಚೆನ್ನೈ ಪೋರ್ಟ್ ಗೆ 2 ಲಕ್ಷ ಕೆಜಿ ಕೋಲ್ಕತ್ತಾ ಪೋರ್ಟ್ ಗೆ 2 ಲಕ್ಷ ಕೆ.ಜಿ, 1,50,000 ಕೆಜಿಯಷ್ಟು ಟುಟಿಕಾರಿನ್ ನಲ್ಲಿ ಸಿಲುಕಿಕೊಂಡಿದೆ.

ಕೇವಲ ರಫ್ತುದಾರರಷ್ಟೇ ಅಲ್ಲದೇ ದೇಶೀ ಮಾರುಕಟ್ಟೆಗೆ ಸೀಮಿತವಾಗಿ ರೈತರಿಗೂ ಸಹ ಇದರಿಂದ ನಷ್ಟ ಉಂಟಾಗಲಿದೆ ಎನ್ನುತ್ತಾರೆ ಶ್ರೀ ಎನ್ಎನ್ ಎಂಟರ್ಪ್ರೈಸಸ್ ನ ಸಂದೀಪ್ ಎನ್ ವಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com