8 ವರ್ಷಗಳ ನಂತರ ಮಣಿಪ್ಪಾಡಿ ಸಮಿತಿ ವರದಿ ಸಲ್ಲಿಕೆ: ಹಲವು ಕಾಂಗ್ರೆಸ್ ನಾಯಕರು ಹೆಸರು

ಸುದೀರ್ಘ 8 ವರ್ಷಗಳ ನಂತರ ಅನ್ವರ್ ಮಣಿಪ್ಪಾಡಿ ಸಮಿತಿ ಬುಧವಾರ ವಿಧಾನಸಭೆಯಲ್ಲಿ ಸಲ್ಲಿಕೆ ಮಾಡಲಾಯಿತು. ವಕ್ಫ್ ಮಂಡಳಿ ಆಸ್ತಿ ದುರುಪಯೋಗ ಕುರಿತು ತನಿಖೆ ನಡೆಸಲು ಈ ಸಮಿತಿ ರಚಿಸಲಾಗಿತ್ತು.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಸುದೀರ್ಘ 8 ವರ್ಷಗಳ ನಂತರ ಅನ್ವರ್ ಮಣಿಪ್ಪಾಡಿ ಸಮಿತಿ ಬುಧವಾರ ವಿಧಾನಸಭೆಯಲ್ಲಿ ಸಲ್ಲಿಕೆ ಮಾಡಲಾಯಿತು. ವಕ್ಫ್ ಮಂಡಳಿ ಆಸ್ತಿ ದುರುಪಯೋಗ ಕುರಿತು ತನಿಖೆ ನಡೆಸಲು ಈ ಸಮಿತಿ ರಚಿಸಲಾಗಿತ್ತು.

ವರದಿಯಲ್ಲಿ ಅನೇಕ ಕಾಂಗ್ರೆಸ್ ನಾಯಕರ ಹೆಸರು ಉಲ್ಲೇಖಿಸಲಾಗಿದೆ,  ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಶಾಂತಿನಗರ ಶಾಸಕ ಹ್ಯಾರಿಸ್, ಮಾಜಿ ರಾಜ್ಯಸಭೆ ಸದಸ್ಯ ರೆಹಮಾನ್ ಖಾನ್, ತನ್ವೀರ್ ಸೇಠ್, ಮತ್ತು ದಿವಂಗತ ಜಾಫರ್ ಷರೀಫ್, ಸಿಎಂ ಇಬ್ರಾಹಿಂ ಮತ್ತು ರೋಷನ್ ಬೇಗ್ , ಧರಂ ಸಿಂಗ್, ಕಮರುಲ್ಲಾ ಇಸ್ಲಾಂ ಅವರ ಹೆಸರು ಹಗರಣದಲ್ಲಿ ಕೇಳಿ ಬಂದಿದೆ. 

ಇದೇ ವರದಿಯಲ್ಲಿ  ಅಲ್ಪ ಸಂಖ್ಯಾತ ಸಮುದಾಯದ ಹಲವು ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ಆಸ್ತಿ ದುರುಪಯೋಗ ಪಡಿಸಿಕೊಳ್ಳಲು ಸಹಾಯ ಮಾಡಿರುವ ಆರೋಪ ಕೇಳಿ ಬಂದಿದೆ.

ವಕ್ಫ್ ಆಸ್ತಿ ಹಗರಣ 2ಜಿ ಸ್ಕ್ಯಾಮ್ ಗಿಂತ ದೊಡ್ಡದಾಗಿದೆ, ಸುಮಾರು 2 ಲಕ್ಷ ಕೋಟಿ ರು ಆಸ್ತಿ ದುರುಪಯೋಗ ಪಡಿಸಿಕೊಳ್ಳಲಾಗಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಬೀದರ್, ಕೊಪ್ಪಳ, ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸುಮಾರು 2,700 ಎಕರೆ ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಅಥವಾ ಮಾರಲಾಗಿದೆ ಎಂದು ಎಂದು ವರದಿಯಲ್ಲಿ ತಿಳಿಸಿಲಾಗಿದೆ.

ವರದಿಯು ಕರ್ನಾಟಕ ರಾಜ್ಯ ಬೋರ್ಡ್ ಆಫ್ ವಕ್ಫ್‌ಗಳನ್ನು ಒಂದು ವರ್ಷ ಅಮಾನತುಗೊಳಿಸಲು ಮತ್ತು ಲೋಕಾಯುಕ್ತ ತನಿಖೆಗೆ ಶಿಫಾರಸು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com