2 ವರ್ಷ ಪೂರೈಸಿದ 'ಆಯುಷ್ಮಾನ್ ಭಾರತ್'

ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಾ ಕವಚ ಎಂದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬಿಂಬಿಸಿಕೊಂಡಿರುವ 'ಆಯುಷ್ಮಾನ್ ಭಾರತ್' ಯೋಜನೆಯು ಸೋಮವಾರ ಎರಡು ವರ್ಷ ಪೂರೈಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಾ ಕವಚ ಎಂದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಬಿಂಬಿಸಿಕೊಂಡಿರುವ 'ಆಯುಷ್ಮಾನ್ ಭಾರತ್' ಯೋಜನೆಯು ಸೋಮವಾರ ಎರಡು ವರ್ಷ ಪೂರೈಸಿದೆ. 

ಕರ್ನಾಟಕದಲ್ಲಿ ಜಾರಿಗೆ ತಂದ ಬಳಿಕ ರಾಜ್ಯದಲ್ಲಿ ಯೋಜನೆಯನ್ನು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಎಂದು ಕರೆಯಲಾಗುತ್ತಿದೆ. 

ಈ ಯೋಜನೆಯು ರಾಜ್ಯದ 6.50 ಕೋಟಿ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದು, 115 ಲಕ್ಷ ಬಿಪಿಎಲ್ ಕುಟುಂಬಗಳಿಗೆ ನಗದುರಹಿತ ಚಿಕಿತ್ಸೆಯನ್ನು ನೀಡುತ್ತಿದೆ. ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ರೂ.5 ಲಕ್ಷ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. 19 ಲಕ್ಷ ಎಪಿಎಲ್‌ ಕುಟುಂಬಗಳಿಗೆ ಖಾಸಗಿ ಆಸ್ಪತ್ರೆ ಶುಲ್ಕದಲ್ಲಿ ಶೇ.30ರಷ್ಟನ್ನು ಸರ್ಕಾರವೇ ಪಾವತಿ ಮಾಡುತ್ತಿದೆ. ಪ್ರತಿ ಕುಟುಂಬಕ್ಕೆ ವಾರ್ಷಿಕ ರೂ.1.5 ಲಕ್ಷ ಸರ್ಕಾರ ಪಾವತಿ ಮಾಡಲಿದೆ. 

ಯೋಜನೆಯಡಿಯಲ್ಲಿ 9.38 ಲಕ್ಷ ರೋಗಿಗಳು ಈ ಎರಡು ವರ್ಷದಲ್ಲಿ ಚಿಕಿತ್ಸೆ ಪಡೆದಿದ್ದು, ಒಟ್ಟಾರೆ ರೂ.1,950 ಕೋಟಿ ವೆಚ್ಚವಾಗಿದೆ. 1.40 ಕೋಟಿ ಜನರು ಆರೋಗ್ಯ ಕಾರ್ಡ್ ಪಡೆದುಕೊಂಡಿದ್ದು, ಈ ವರೆಗೂ 74,199 ಕೊರೋನಾ ಸೋಂಕಿತರು ಯೋಜನೆಯಡಿ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರೆ ವೆಚ್ಚ ರೂ.306.47 ಕೋಟಿ ಆಗಿದೆ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com