2.15 ಲಕ್ಷ ಆಟೋ, ಕ್ಯಾಬ್ ಚಾಲಕರು ಕೋವಿಡ್ ಆರ್ಥಿಕ ನೆರವು ಪಡೆದುಕೊಂಡಿದ್ದಾರೆ: ವಿಧಾನಸಭೆಗೆ ಸರ್ಕಾರ ಮಾಹಿತಿ
ರಾಜ್ಯದಲ್ಲಿ ಈ ವರೆಗೂ 2.15 ಲಕ್ಷ ಆಟೋ, ಕ್ಯಾಬ್ ಚಾಲಕರು ಕೋವಿಡ್ ಆರ್ಥಿಕ ನೆರವು ಪಡೆದುಕೊಂಡಿದ್ದಾರೆಂದು ವಿಧಾನಸಭೆಗೆ ಸರ್ಕಾರ ಗುರುವಾರ ಮಾಹಿತಿ ನೀಡಿತು.
Published: 25th September 2020 10:18 AM | Last Updated: 25th September 2020 10:18 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ಈ ವರೆಗೂ 2.15 ಲಕ್ಷ ಆಟೋ, ಕ್ಯಾಬ್ ಚಾಲಕರು ಕೋವಿಡ್ ಆರ್ಥಿಕ ನೆರವು ಪಡೆದುಕೊಂಡಿದ್ದಾರೆಂದು ವಿಧಾನಸಭೆಗೆ ಸರ್ಕಾರ ಗುರುವಾರ ಮಾಹಿತಿ ನೀಡಿತು.
ಕೊರೋನಾ ಲಾಕ್ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಗುರಿಯಾಗಿದ್ದ ಆಟೋ, ಟ್ಯಾಕ್ಸಿ ಚಾಲಕರಿಗೆ ಘೋಷಿಸಿದ್ದ ತಲಾ ರೂ.5000 ಪರಿಹಾರ ಬಹುತೇಕರಿಗೆ ತಲುಪಿಲ್ಲ ಎಂಬ ಆರೋಪಗಳು ಕೇಳಿ ಬಂದ ಬಿನ್ನೆಲೆಯಲ್ಲಿ ಸೌಲಭ್ಯ ಪಡೆದ ಅರ್ಹರು ಮತ್ತೊಮ್ಮೆ ಅರ್ಜಿ ಸಲ್ಲಿಸರು ಸರ್ಕಾರ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದೆ.
ಪ್ರಸ್ತುತ ಆಟೋ ಚಾಲಕರು, ಟ್ಯಾಕ್ಸಿ ಚಾಲಕರಿಂದ 2.46 ಲಕ್ಷ ಅರ್ಜಿ ಬಂದಿದೆ. ಇವುಗಳಲ್ಲಿ 2.14 ಲಕ್ಷ ಜನರಿಗೆ ಪರಿಹಾರ ನೀಡಲಾಗಿದೆ.ನಮಗೆ ಅರ್ಜಿಯೇ ಬಂದಿಲ್ಲ ಎಂದರೆ ಮನೆ-ಮನೆಗೆ ಹೋಗಿ ಕೊಡಲು ಆಗುವುದಿಲ್ಲ. ಅರ್ಹರು ಅರ್ಜಿ ಸಲ್ಲಿಸದಿದ್ದರೆ ಅವರಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ಮಾಡಿಕೊಡಲಾಗುವುದು ಎಂದು ಮಾಧುಸ್ವಾಮಿ ಭರವಸೆ ನೀಡಿದ್ದಾರೆ.