ಡ್ರಗ್ ಕೇಸು: ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಮಾದಕ ವಸ್ತು ಸೇವನೆ ಮತ್ತು ಸಂಗ್ರಹ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾಣಿಯವರ ಜಾಮೀನು ಅರ್ಜಿ ಭವಿಷ್ಯ ಇಂದು ನಿರ್ಧಾರವಾಗಲಿದೆ.
ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ
ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ

ಬೆಂಗಳೂರು: ಮಾದಕ ವಸ್ತು ಸೇವನೆ ಮತ್ತು ಸಂಗ್ರಹ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾಣಿಯವರ ಜಾಮೀನು ಅರ್ಜಿ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಇವರಿಬ್ಬರ ಮೇಲೆ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟಾನ್ಸಸ್(ಎನ್ ಡಿಪಿಎಸ್) ಕೇಸು ದಾಖಲಾಗಿದ್ದು, ವಿಶೇಷ ಕೋರ್ಟ್ ನಲ್ಲಿ ನಿನ್ನೆ ರಾಗಿಣಿ ಪರ ವಕೀಲರು ತಮ್ಮ ಕಕ್ಷಿದಾರರಿಗೆ ಜಾಮೀನು ಮಂಜೂರು ಮಾಡುವಂತೆ ವಾದ ಮಂಡಿಸಿದರು. ಸಿಸಿಬಿ ಪರವಾಗಿ ವಾದ ಮಂಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಜಾಮೀನು ವಿರುದ್ಧವಾಗಿ ವಾದ ಮಂಡಿಸಿದ ಮೇಲೆ ಕೋರ್ಟ್ ಇಂದಿಗೆ ವಿಚಾರಣೆಯನ್ನು ಮುಂದೂಡಿತು.

ಇನ್ನು ಸಂಜನಾ ಗಲ್ರಾಣಿ ಕೇಸಿನಲ್ಲಿ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪಣೆ ಸಲ್ಲಿಸಿ ಸಿಡಿಯೊಂದನ್ನು ಕೋರ್ಟ್ ಗೆ ಸಲ್ಲಿಸಿದರು. ಗಲ್ರಾಣಿ ಪರ ವಕೀಲ ಶ್ರೀನಿವಾಸ್ ರಾವ್ ನ್ಯಾಯಾಲಯದಲ್ಲಿ ವಾದ ಮಂಡಿಸಿ, ಆರೋಪಿ ರವಿಶಂಕರ್ ನೀಡಿರುವ ಹೇಳಿಕೆ ಬಿಟ್ಟರೆ ತಮ್ಮ ಕಕ್ಷಿದಾರರ ವಿರುದ್ಧ ಡ್ರಗ್ಸ್ ಆರೋಪಕ್ಕೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷಿಗಳಿಲ್ಲ ಎಂದರು. ಅದಕ್ಕೆ ಸಿಸಿಬಿ ಪರ ವಕೀಲರು, ಡ್ರಗ್ಸ್ ಸೇವಿಸಿದ್ದೇ ಆರೋಪಿ ವಿರುದ್ಧ ಇರುವ ಬಲವಾದ ಸಾಕ್ಷಿ ಎಂದರು.

ಡ್ರಗ್ ದಂಧೆಯನ್ನು ಮಟ್ಟಹಾಕಬೇಕು, ಹೈಕೋರ್ಟ್: ರಾಜ್ಯದಲ್ಲಿ ಡ್ರಗ್ ದಂಧೆಗೆ ಕಡಿವಾಣ ಹಾಕಲೇಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಎನ್ ಸಿಬಿಯ ಎನ್ ಡಿಪಿಎಸ್ ಕಾಯ್ದೆಯಡಿ ಲಕ್ಕಸಂದ್ರ ನಿವಾಸಿ ಅಬ್ದುಲ್ ಅಲೀಮ್ ವಿರುದ್ಧದ ಕೇಸಿಗೆ ಸಂಬಂಧಿಸಿದಂತೆ ವಿಚಾರಣೆಯನ್ನು ರದ್ದುಪಡಿಸಿದ ನ್ಯಾಯಮೂರ್ತಿ ಬಿ ಎ ಪಾಟೀಲ್ ಹೀಗೆ ಹೇಳಿದ್ದಾರೆ.

2013ರಲ್ಲಿ ಅಲೀಮ್ ಕಾರಿನಲ್ಲಿದ್ದ 15 ಕೆಜಿ ಗಾಂಜಾವನ್ನು ಎನ್ ಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ವಶಪಡಿಸಿಕೊಂಡ ವಸ್ತು ಕೇವಲ ಒಣಗಿದ ಕಂದು ಬಣ್ಣದ ಎಲೆಗಳಾಗಿದ್ದವು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳು ಹೇಳುತ್ತಿರುವುದರಿಂದ ಅದನ್ನು ಗಾಂಜಾ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಿರುವಾಗ ವಿಚಾರಣೆ ಮುಂದುವರಿಸುವುದು ಕಾನೂನನ್ನು ಅಣಕಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com