ರಾಜ್ಯಸಭಾ ಸದಸ್ಯ ಹೆಚ್'ಡಿ ದೇವೇಗೌಡಗೆ ಓಡಾಡಲು 60 ಲಕ್ಷ ರೂ. ಮೌಲ್ಯದ ಐಷಾರಾಮಿ ಕಾರು!

ಜೆಡಿಎಸ್ ವರಿಷ್ಠ ಹಾಗೂ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಅವರ ಓಡಾಟಕ್ಕೆ ರಾಜ್ಯ ಸರ್ಕಾರ ದುಬಾರಿ ಬೆಲೆಯ ಐಷಾರಾಮಿ ಕಾರೊಂದನ್ನು ನೀಡಿದೆ. 
ದೇವೇಗೌಡ
ದೇವೇಗೌಡ

ಬೆಂಗಳೂರು: ಜೆಡಿಎಸ್ ವರಿಷ್ಠ ಹಾಗೂ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಅವರ ಓಡಾಟಕ್ಕೆ ರಾಜ್ಯ ಸರ್ಕಾರ ದುಬಾರಿ ಬೆಲೆಯ ಐಷಾರಾಮಿ ಕಾರೊಂದನ್ನು ನೀಡಿದೆ. 

ದೇವೇಗೌಡರು ರಾಜ್ಯಸಭಾ ಸದಸ್ಯರಾದ ನಂತರ ನಿಯಮಗಳ ಪ್ರಕಾರ ರಾಜ್ಯ ಸರ್ಕಾರ ಕಾರು ನೀಡಬೇಕಿದೆ. ಈ ಹಿನ್ನೆಲೆ ಸರ್ಕಾರ ಸುಮಾರು ರೂ. 60 ಲಕ್ಷ ಬೆಲೆಯ ವೋಲ್ವೋ ಹೊಸ ಕಾರನ್ನ ನೀಡಿದೆ ಎಂದು ವರದಿಗಳು ತಿಳಿಸಿವೆ. 

15 ದಿನಗಳ ಹಿಂದಷ್ಟೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಸರಿನಲ್ಲಿ ಕಾರು ಖರೀದಿ ಮಾಡಲಾಗಿದ್ದು, ಇದೀಗ ದೇವೇಗೌಡ ಅವರಿಗೆ ಈ ಕಾರನ್ನು ನೀಡಲಾಗಿದೆ. ದೇವೇಗೌಡರ ಈ ಹೊಸ ಕಾರಿಗೆ ನೋಂದಣಿ ಕೆಎ 53 ಜಿ 3636 ನೀಡಲಾಗಿದೆ, ಈ ಮೂಲಕ ದೇವೇಗೌಡರು ರಾಜ್ಯದಲ್ಲಿ ಅತಿ ದುಬಾರಿ ಸರ್ಕಾರಿ ಕಾರು ಹೊಂದಿರುವ ಜನಪ್ರತಿನಿಧಿ ಎನಿಸಿಕೊಂಡಿದ್ದಾರೆ.

Volvo XC60 D5 ಮಾಡೆಲ್ ಕಾರಿನ ಮೂಲ ಬೆಲೆ 59.90 ಲಕ್ಷ ರೂಪಾಯಿ ಆಗಿದೆ. ತೆರಿಗೆ, ವಿಮೆ ಮೊತ್ತ ಸೇರಿದರೆ 74.90 ಲಕ್ಷ ರೂಪಾಯಿ ಆಗುತ್ತದೆ. ಆದರೆ ಸರ್ಕಾರದ ಹೆಸರಿನಲ್ಲಿ ಖರೀದಿಸುವಾಗ ತೆರಿಗೆ ಇಲ್ಲದಿರುವುದರಿಂದ ಸುಮಾರು 60 ಲಕ್ಷ ರೂಪಾಯಿ ಆಗಿದೆ.

ರಾಜ್ಯಸಭಾ ಸದಸ್ಯರಿಗೆ ನಿಯಮಗಳ ಪ್ರಕಾರ ರೂ.38 ಲಕ್ಷದವರೆಗೂ ಕಾರು ನೀಡಲು ಅನುಮತಿ ಇದೆ. ಆದರೆ, ದೇವೇಗೌಡ ಅವರ ವಯಸ್ಸನ್ನು ಪರಿಗಣಿಸಿ ಅವರಿಗೆ ಆರಾಮದಾಯಕವಾದ ಕಾರನ್ನು ನೀಡುವಂತೆ ಪ್ರಧಾನಿ ಮೋದಿಯವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಮನವಿ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ದುಬಾರಿ ಬೆಲೆಯ ಕಾರನ್ನು ನೀಡಲಾಗಿದೆ ಎಂದು ಅಧಿಕಾರಿಗಳ ಮೂಲ ಮಾಹಿತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com