ಸಕಲ ಸರ್ಕಾರಿ ಗೌರವಗಳೊಡನೆ ಶಾಸಕ ನಾರಾಯಣ ರಾವ್ ಅಂತ್ಯಕ್ರಿಯೆ

ಕೋವಿಡ್ -19ನಿಂದ  ನಿಧನರಾದ ಬಸವಕಲ್ಯಾಣದ ಕಾಂಗ್ರೆಸ್  ಶಾಸಕ ಬಿ ನಾರಾಯಣ್ ರಾವ್ ಅವರ ಅಂತಿಮ ವಿಧಿಗಳನ್ನು ಬಸವಕಲ್ಯಾಣ ಪಟ್ಟಣದ ಹೊರವಲಯದಲ್ಲಿರುವ ಮುದಾಬಿ ಕ್ರಾಸ್ ಸಮೀಪದ ಆಟೋನಗರದಲ್ಲಿ  ಶುಕ್ರವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ನಾರಾಯಣ ರಾವ್
ನಾರಾಯಣ ರಾವ್

ಬೀದರ್: ಕೋವಿಡ್ -19ನಿಂದ  ನಿಧನರಾದ ಬಸವಕಲ್ಯಾಣದ ಕಾಂಗ್ರೆಸ್  ಶಾಸಕ ಬಿ ನಾರಾಯಣ್ ರಾವ್ ಅವರ ಅಂತಿಮ ವಿಧಿಗಳನ್ನು ಬಸವಕಲ್ಯಾಣ ಪಟ್ಟಣದ ಹೊರವಲಯದಲ್ಲಿರುವ ಮುದಾಬಿ ಕ್ರಾಸ್ ಸಮೀಪದ ಆಟೋನಗರದಲ್ಲಿ  ಶುಕ್ರವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ವೈದ್ಯಕೀಯ ಸಿಬ್ಬಂದಿ, ಪಿಪಿಇ ಕಿಟ್ ಧರಿಸಿ ಶಾಸಕರ ಮೃತದೇಹದ ಅವಶೇಷಗಳನ್ನು ಶ್ಮಶಾನ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದಂತೆ ಮೃತರ ಕುಟುಂಬ ಸದಸ್ಯರು.ದುಃಖತಪ್ತರಾದರು

ಮೃತರ ಪತ್ನಿ ಮಲ್ಲಮ್ಮ ಮತ್ತು ಪುತ್ರರಾದ ಗೌತಮ್ ಮತ್ತು ರಾಹುಲ್ ಅವರ ಸಮ್ಮುಖದಲ್ಲಿ ಕೊನೆಯ ವಿಧಿಗಳನ್ನು ನಡೆಸಲಾಯಿತು.ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕರಾದ ರಾಜಶೇಖರ್ ಪಾಟೀಲ್, ಬಂಡೆಪ್ಪ ಕಾಶಮ್ಪೂರ್ ಮತ್ತು ಯು ಟಿ ಖಾದರ್, ಎಂಎಲ್ ಸಿಗಳಾದ ವಿಜಯ್ ಸಿಂಗ್ ಮತ್ತು ಡಾ. ಚಂದ್ರಶೇಖರ ಪಾಟೀಲ್, ಕಲಬುರಗಿ ಸಂಸದ ಉಮೇಶ್ ಜಾಧವ್, ಮಾಜಿ ಶಾಸಕ ಮಲ್ಲಿಕಾರ್ಜುನ್ ಖೂಬ ಮೊದಲಾದವರು ಅಂತಿಮ ವಿಧಿ ವಿಧಾನದಲ್ಲಿ ಭಾಗವಹಿಸಿದ್ದರು,

ಜಿಲ್ಲಾಧಿಕಾರಿ ರಾಮಚಂದ್ರನ್, ಪೊಲೀಸ್ ವರಿಷ್ಠಾಧಿಕಾರಿ ಡಿ ಎಲ್ ನಾಗೇಶ್, ಬಸವಕಲ್ಯಾಣ  ತಹಶೀಲ್ದಾರ್ ಸಾವಿತ್ರಿ ಸಲಗರ್ ಉಪಸ್ಥಿತರಿದ್ದರು.

ಆದರೆ , ಹೈದರಾಬಾದ್-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ಹಾಜರಿದ್ದ ನೂರಾರು ಅಭಿಮಾನಿಗಳಿಗೆ ಕೋವಿಡ್ -19 ಪ್ರೋಟೋಕಾಲ್‌ನಿಂದಾಗಿ ಅಗಲಿದ  ಶಾಸಕರುಗೆ ಅಂತಿಮ ಗೌರವ ಸಲ್ಲಿಸಲು ಸಾಧ್ಯವಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com