ಮೈಸೂರು: ಕೊರೋನಾ ನಿಯಂತ್ರಣಕ್ಕೆ ಹೊಸ ತಂತ್ರ ರೂಪಿಸಿದ ಅಧಿಕಾರಿಗಳು

ಬೆಂಗಳೂರು ಬಳಿಕ ಹೆಚ್ಚು ಸಾವಿನ ಪ್ರಮಾಣವನ್ನು ಹೊಂದಿರುವ ಮೈಸೂರು ಜಿಲ್ಲೆಯಲ್ಲಿ ಕೊರೋನಾ ನಿಗ್ರಹಿಸಲು ಅಧಿಕಾರಿಗಳು ಹೊಸ ತಂತ್ರಗಳನ್ನೂ ರೂಪಿಸಲು ಮುಂದಾಗಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಬೆಂಗಳೂರು ಬಳಿಕ ಹೆಚ್ಚು ಸಾವಿನ ಪ್ರಮಾಣವನ್ನು ಹೊಂದಿರುವ ಮೈಸೂರು ಜಿಲ್ಲೆಯಲ್ಲಿ ಕೊರೋನಾ ನಿಗ್ರಹಿಸಲು ಅಧಿಕಾರಿಗಳು ಹೊಸ ತಂತ್ರಗಳನ್ನೂ ರೂಪಿಸಲು ಮುಂದಾಗಿದ್ದಾರೆ. 

ಮೈಸೂರು ಜಿಲ್ಲಾಡಳಿತವು ಪರೀಕ್ಷಾ ಸಮಯವನ್ನು ವಿಸ್ತರಿಸಿದ್ದು, ರಕ್ತದೊತ್ತಡ, ಮಧುಮೇಹ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳನ್ನು ಪತ್ತೆಹಚ್ಚಲು ಸಮೀಕ್ಷೆ ನಡೆಸಲು ಮುಂದಾಗಿದೆ.

ಇದರಂತೆ ಜನರು ಸ್ವಯಂಪ್ರೇರಿತರಾಗಿ ಪರೀಕ್ಷೆಗೊಳಗಾಗುವಂತೆಯೂ ಅಧಿಕಾರಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. 

ಈ ಕುರಿತು ಮಾತನಾಡಿರುವ ಉಪ ಆಯುಕ್ತ ಸಿ.ಶರತ್ ಅವರು, ಕೊರೋನಾ ನಿಗ್ರಹಿಸುವಲ್ಲಿ ತಂತ್ರಗಳನ್ನು ರೂಪಿಸಲು ಖಾಸಗಿ ಆಸ್ಪತ್ರೆಗಳೊಂದಿಗೆ ಸರಣಿ ಸಭೆಗಳನ್ನು ಚರ್ಚೆಗಳನ್ನು ನಡೆಸಲಾಗಿದೆ. ಇದರಂತೆ 524 ಸಾಮಾನ್ಯ ಹಾಸಿಗೆಗಳು, 357 ಆಕ್ಸಿಜನ್ ಜೊತೆಗಿರುವ ಹಾಸಿಕೆಗಳು, 87 ಐಸಿಯು ಹಾಸಿಕೆಗಳ ವ್ಯವಸ್ಥೆ ಮಾಡಲಾಗಿದೆ. ತುರ್ತುಚಿಕಿತ್ಸಾ ಆರೈಕೆ ಕೇಂದ್ರದಲ್ಲಿ ಆಮ್ಲಜನಕ ಸಿಲಿಂಡರ್‌ಗಳನ್ನು ಹೊಂದಿದ 100 ಹಾಸಿಗೆಗಳನ್ನು ಒದಗಿಸುವಂತೆ ಆಸ್ಪತ್ರೆಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಅಲ್ಲದೆ, ಖಾಸಗಿ ಪ್ರಯೋಗಾಲಯಗಳು ಪರೀಕ್ಷೆಗೆ ಒಳಗಾದ ರೋಗಿಗಳ ವಿವರಗಳನ್ನು ಕೂಡಲೇ ಅಪ್‌ಲೋಡ್ ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. 

ಆಮ್ಲಜನಕದೊಂದಿಗಿರುವ 50 ಹಾಸಿಗೆಗಳು ತಾಲ್ಲೂಕು ಆಸ್ಪತ್ರೆಗಳಲ್ಲಿ 15 ದಿನಗಳಲ್ಲಿ ಸಿದ್ಧವಾಗಲಿದೆ. ಈಗಾಗಲೇ 1.61 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದರಲ್ಲಿ 21, 256 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಜನರು ಮಾಹಿತಿಗಳನ್ನು ಬಚ್ಚಿಡುವುದಕ್ಕಿಂತ ಭಯಪಡದೆ ಬಹಿರಂಗಪಡಿಸಬೇಕೆಂದು ಹೇಳಿದ್ದಾರೆ. 

ಪೊಲೀಸ್ ಆಯುಕ್ತ ಚಂದ್ರ ಗುಪ್ತಾ ಮಾತನಾಡಿ, ಕೊರೋನಾ ಪರೀಕ್ಷಾ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಸಿಬ್ಬಂದಿಗಳು ಹಾಗೂ ಸ್ವಯಂಪ್ರೇರಿತ ಕಾರ್ಯಕರ್ತರೊಂದಿಗೆ ಜನರು ಸಹಕಾರ ನೀಡಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ. ಆರೋಗ್ಯ ಕಾರ್ಯಕರ್ತರ ಮೇಲೆ ದಾಳಿ ಮಾಡುವುದು, ನಿಂದಿಸುವ ಕೆಲಸಗಳನ್ನು ಯಾರೇ ಮಾಡಿದರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. 

ಜಿಲ್ಲೆಯಲ್ಲಿ ಈ ವರೆಗೂ 32,000 ಪೊಲೀಸರು ಹಾಗೂ ಅವರ ಕುಟುಂಬಸ್ಥರನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಇೇ ವೇಳೆ ಮಾಹಿತಿ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com