28ರಂದು ಕೆ.ಆರ್. ಮಾರುಕಟ್ಟೆ ಬಂದ್, ಕರ್ನಾಟಕ ಬಂದ್ ಗೆ ಅಣ್ಣಾ ಡಿಎಂಕೆ ಬೆಂಬಲ!

ಇದೇ 28 ರಂದು ಸೋಮವಾರ ಎಲ್ಲಾ ರೈತ ಸಂಘಟಣೆಗಳು 'ಕರ್ನಾಟಕ ಬಂದ್'ಗೆ ಕರೆ ಕೊಟ್ಟಿದ್ದು, ಇದಕ್ಕೆ ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘ ಬೆಂಬಲ ವ್ಯಕ್ತಪಡಿಸಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇದೇ 28 ರಂದು ಸೋಮವಾರ ಎಲ್ಲಾ ರೈತ ಸಂಘಟಣೆಗಳು 'ಕರ್ನಾಟಕ ಬಂದ್'ಗೆ ಕರೆ ಕೊಟ್ಟಿದ್ದು, ಇದಕ್ಕೆ ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘ ಬೆಂಬಲ ವ್ಯಕ್ತಪಡಿಸಿವೆ. 

ಅಂದು ಕೆ.ಆರ್. ಮಾರುಕಟ್ಟೆ ಬಂದ್ ಆಗಲಿದೆ. ಸಂಘದ ಅಧ್ಯಕ್ಷ ವಿ.ಅರ್. ಗೋಪಿ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ಬಂದ್ ಗೆ ನಾವು ಪೂರ್ಣ ಬೆಂಬಲ ಕೊಡುತ್ತೇವೆ. ದಾಸನಪುರ ಕೆಂಪೇಗೌಡ ತರಕಾರಿ ವರ್ತಕರ ಸಂಘವೂ ಸಹ ಪೂರ್ಣ ಬೆಂಬಲ ನೀಡಲಿದೆ. ಕೂಡಲೆ ಸರ್ಕಾರ ಎಪಿಎಂಸಿ ಕಾಯ್ದೆ ಹಾಗೂ ಭೂಸುಧಾರಣಾ ಕಾಯ್ದೆ ವಾಪಸ್ಸು ಪಡೆಯಬೇಕು. ಇಲ್ಲದೇ ಇದ್ದರೆ ರೈತರು ತೀವ್ರ ಗೊಂದಲದಲ್ಲಿ ಸಿಲುಕುತ್ತಾರೆ. ರೈತರು ಸಂಕಷ್ಟಕ್ಕೆ ಈಡಾದರೇ ತರಕಾರಿ ಸಗಟು ವ್ಯಾಪಾರಸ್ಥರು ತೊಂದರೆಗೆ ಸಿಲುಕುತ್ತಾರೆ  ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ರೈತರು ನಮ್ಮ ಬೆನ್ನೆಲುಬಾಗಿದ್ದು, ನಾವು ಸಹ ರೈತರಿಗೆ ಬೆನ್ನೆಲುಬಾಗಿದ್ದೇವೆ. ಆದ್ದರಿಂದ, ಸರ್ಕಾರ ಕೂಡಲೇ ರೈತ ವಿರೋಧಿ ನಿಲುವನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕ ಬಂದ್ ಗೆ ಕರ್ನಾಟಕ ಅಣ್ಣಾ ಡಿಎಂಕೆ ಬೆಂಬಲ!
ಸೆಪ್ಟೆಂಬರ್ 28 ರಂದು ರೈತ ಮತ್ತು ಕಾರ್ಮಿಕ ಸಂಘಟನೆಗಳು ಕರೆಕೊಟ್ಟಿರುವ  ಕರ್ನಾಟಕ  ಬಂದ್ ಗೆ ಕರ್ನಾಟಕ ಅಣ್ಣಾ ಡಿಎಂಕೆ ಬೆಂಬಲ ನೀಡಿದೆ ಎಂದು ಪಕ್ಷದ ಕಾರ್ಯದರ್ಶಿ ಕೆ.ಆರ್ ಕೃಷ್ಣರಾಜು ಹೇಳಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ವಿರೋಧಿ  ಕಾಯ್ದೆಗಳ ವಿರುದ್ದ. ಸೆಪ್ಟೆಂಬರ್ 28 ರಂದು ನಡೆಸುತ್ತಿರುವ ಕರ್ನಾಟಕ ಬಂದ್ ಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಕೆಜಿಎಫ್ ಶಿವಮೊಗ್ಗ, ಬಳ್ಳಾರಿ, ಸೇರಿದಂತೆ  ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕರ್ನಾಟಕ ಅಣ್ಣಾ ಡಿಎಂಕೆ ಪಕ್ಷ ಬಂದ್ ಬೆಂಬಲ ಸೂಚಿಸಲಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com