ಮೂರು ತಿಂಗಳಲ್ಲಿ 100 ಕೋಟಿ ರು. ಬಾಕಿ ಹಣ ವಸೂಲಿ ಮಾಡಿದ ಬೆಂಗಳೂರು ಜಲಮಂಡಳಿ

ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪಾವತಿಸದೆ ಬಾಕಿ ಉಳಿದಿದ್ದ ನೀರಿನ ಬಿಲ್ ಅನ್ನು ಬೆಂಗಳೂರು ಜಲಮಂಡಳಿ ಸಂಗ್ರಹಿಸಿದೆ'.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪಾವತಿಸದೆ ಬಾಕಿ ಉಳಿದಿದ್ದ ನೀರಿನ ಬಿಲ್ ಅನ್ನು ಬೆಂಗಳೂರು ಜಲಮಂಡಳಿ ಸಂಗ್ರಹಿಸಿದೆ.

ವಾಣಿಜ್ಯ ಮತ್ತು ಸರ್ಕಾರಿ ಸಂಸ್ಥೆಗಳು ಹಾಗೂ ನಾಗರಿಕರಿಂಗ ಹಣ ಸಂಗ್ರಹಿಸಿರುವ ಜಲ ಮಂಡಳಿ 43 ಸಾವಿರ ಅನಧಿಕೃತ ನೀರು ಮತ್ತು ನೈರ್ಮಲ್ ಸಂಪರ್ಕಗಳನ್ನು ಪತ್ತೆ ಹಚ್ಚಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಎನ್ ಜಯರಾಮ್ ಹೇಳಿದ್ದಾರೆ.

ಕಳೆದ ಮೂರು ತಿಂಗಳಲ್ಲಿ ಬಾಕಿ ಉಳಿದಿದ್ದ ಹಣವನ್ನು ಸಂಗ್ರಹಿಸಿದ್ದೇವೆ, ಜುಲೈ ನಲ್ಲಿ 31.82 ಕೋಟಿ, ಆಗಸ್ಟ್ ನಲ್ಲಿ 36.46ಕೋಟಿ ಹಾಗೂ ಸೆಪ್ಟಂಬರ್ 24 ರವೆರೆಗೆ 40.08 ಕೋಟಿ ಹಣ ಹಣ ವಸೂಲಿ ಮಾಡಿದ್ದಾಗಿ ತಿಳಿಸಿದ್ದಾರೆ.

ನೀರು ಮತ್ತು ನೈರ್ಮಲ್ಯ ಬಿಲ್‌ಗಳಿಂದ ಮಂಡಳಿಯ ಮಾಸಿಕ ಆದಾಯ 100 ರಿಂದ 110 ಕೋಟಿ ರೂ. ಇರುತ್ತದೆ, ಹೆಚ್ಚಿನ ವಾಣಿಜ್ಯ ಸಂಸ್ಥೆಗಳು ಈಗ ಸಂಗ್ರಹಣೆಗೆ ಅನುಕೂಲವಾಗುವಂತೆ ಬಾಗಿಲು ತೆರೆಯಲು ಪ್ರಾರಂಭಿಸಿವೆ ಎಂದು ಹೇಳಿದ್ದಾರೆ.

ಬಾಕಿ ಉಳಿದಿರುವ ಜೊತೆಗೆ, ಅಧಿಕಾರಿಗಳು 10,344 ಅಕ್ರಮ ನೀರಿನ ಸಂಪರ್ಕಗಳನ್ನು ಮತ್ತು 32,858 ಅನಧಿಕೃತ ನೈರ್ಮಲ್ಯ ಸಂಪರ್ಕಗಳನ್ನು ಸಹ ಪತ್ತೆ ಮಾಡಿದ್ದಾರೆ. ಜುಲೈ ಅಂತ್ಯದ ವೇಳೆಗೆ, ಮಂಡಳಿಯು 20,000 ಕ್ಕೂ ಹೆಚ್ಚು ಅಕ್ರಮ ಸಂಪರ್ಕಗಳನ್ನು ಗುರುತಿಸಿತ್ತು ಮತ್ತು ಅವುಗಳನ್ನು ತೆಗೆದು ಹಾಕಿದೆ.

ಲಿಖಿತ ಅನುಮತಿಯಿಲ್ಲದೆ ತಮ್ಮ ಒಳಚರಂಡಿಯನ್ನು ಬಿಡಬ್ಲ್ಯೂಎಸ್ಎಸ್ಬಿಯೊಂದಿಗೆ ಸಂಪರ್ಕಿಸುವ ಮನೆಗಳು ಅಥವಾ ಸಂಸ್ಥೆಗಳು 5,000 ರೂ.ಗಳ ದಂಡವನ್ನು ನೈರ್ಮಲ್ಯ ಸೆಸ್ ಆಗಿ ಪಾವತಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com