ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 12 ವರ್ಷದ ಬಾಲಕಿ ದೇಹದಿಂದ 25 ಲೀಟರ್ ನೀರು ಹೊರತೆಗೆದ ವೈದ್ಯರು

ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ 12 ವರ್ಷದ ಬಾಲಕಿಯ ದೇಹದಿಂದ ವೈದ್ಯರು 25 ಲೀಟರ್ ನೀರು ತೆಗೆದು, ಚಿಕಿತ್ಸೆ ನೀಡಿದ್ದಾರೆ.

ಬೆಂಗಳೂರು: ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ 12 ವರ್ಷದ ಬಾಲಕಿಯ ದೇಹದಿಂದ ವೈದ್ಯರು 25 ಲೀಟರ್ ನೀರು ತೆಗೆದು, ಚಿಕಿತ್ಸೆ ನೀಡಿದ್ದಾರೆ. 

ಆಂಧ್ರಪ್ರದೇಶದ ಚಿತ್ತೂರು ಮೂಲದ ಬಾಲಕಿ ಕೆಲ ದಿನಗಳಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದು, ಇದರ ಪರಿಣಾಮ ದೇಹದ ತೂಕ ಹೆಚ್ಚಾಗಿತ್ತು. ದೇಹದಲ್ಲಿ ನೀರು ತುಂಬಿದ ಪರಿಣಾಮ ಬಾಲಕಿಯ ಹೊಟ್ಟೆಯ ಭಾಗ ಊದಿಕೊಂಡಿತ್ತು. ಇದರಿಂದಾಗಿ ಬಾಲಕಿಗೆ ಉಸಿರಾಟ ಸಮಸ್ಯೆ ಎದುರಾಗಿತ್ತು. 

ತೂಕ 65 ಕೆಜಿವರೆಗೂ ಏರಿಕೆಯಾಗಿದ್ದು, ಬಾಲಕಿಗೆ ಕಿಡ್ನಿ ಸಮಸ್ಯೆ ಇದೆ ಎಂಬುದು ಆಕೆಯ ಕುಟುಂಬಸ್ಥರಿಗೆ ತಿಳಿದಿರಲಿಲ್ಲ. ಬಾಲಕಿಯ ದೇಹದಲ್ಲಾಗುತ್ತಿರುವ ಬದಲಾವಣೆಯನ್ನು ಅವರು ಗಮನಿಸಿಲ್ಲ. ದೇಹದಲ್ಲಿ ಹೇರಳವಾಗಿ ನೀರು ತುಂಬಿಕೊಳ್ಳಲು ಆರಂಭವಾಗಿದೆ. 

ಸಮಸ್ಯೆ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಬಾಲಕಿಯನ್ನು ನಗರದ ಮಾರತ್ತಹಳ್ಳಿಯ ರೈನ್'ಬೋ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವೈದ್ಯರು ಬಾಲಕಿಗೆ ಕಿಡ್ನಿ ಸಮಸ್ಯೆಯಿರುವುದನ್ನು ತಿಳಿಸಿದ್ದಾರೆ. ಇದರಂತೆ ಐದು ದಿನಗಳಲ್ಲಿ 25 ಲೀಟರ್ ನೀರನ್ನು ಬಾಲಕಿಯ ದೇಹದಿಂದ ಹೊರಗೆ ತೆಗೆದಿದ್ದಾರೆ. 

ಬಹುತೇಕ ಪ್ರಕರಣಗಳಲ್ಲಿ ಸಮಸ್ಯೆಯಿರುವುದು ಜನರಿಗೇ ತಿಳಿದೇ ಇರುವುದಿಲ್ಲ. ಕಿಡ್ನಿ ಸಮಸ್ಯೆ ಎದುರಾಗುತ್ತಿದ್ದಂತೆಯೇ ವ್ಯಕ್ತಿಯ ಕಣ್ಣುಗಳು ಊದಿಕೊಳ್ಳುತ್ತಿರುವುದು ಕಂಡು ಬರುತ್ತದೆ. ಆದರೆ, ಜನರು ಅದನ್ನು ನಿರ್ಲಕ್ಷಿಸುತ್ತಾರೆ. ಅತ್ಯಂತ ಕಡಿಮೆ ಸಮಯದಲ್ಲಿ ದೇಹದ ತೂಕ ಇದ್ದಕ್ಕಿದ್ದಂತೆ ಏರಿಕೆಯಾಗುತ್ತದೆ. ಕೂಡಲೇ ಕಿಡ್ನಿ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಡಾ.ಶೌಮಿಲ್ ಗೌರ್ ಅವರು ಹೇಳಿದ್ದಾರೆ. 

ಬಾಲಕಿಯ ವಯಸ್ಸನ್ನು ಗಮನಿಸಿದರೆ, ಆಕೆಯ ತೂಕ 38-40 ಕೆಜಿ ಇರಬೇಕು. ಆದರೆ, ಆಕೆಯ ತೂಕ ಸಾಕಷ್ಟು ಹೆಚ್ಚಾಗಿತ್ತು. ಸಮಸ್ಯೆ ಕಾಣಿಸಿಕೊಂಡಾಗ ಬಾಲಕಿಯ ಪೋಷಕರು ಸ್ಥಲೀಯ ವೈದ್ಯರಿಗೆ ತೋರಿಸಿದ್ದಾರೆ. ಆದರೆ, ಅಲ್ಲಿ ಯಾವುದೇ ರೀತಿಯ ಪರಿಹಾರಗಳು ದೊರೆತಿಲ್ಲ. ಪರಿಸ್ಥಿತಿ ಚಿಂತಾಜನಕವಾದಾಗ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಮಕ್ಕಳಲ್ಲಿ ಮೂತ್ರ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯವಲ್ಲ. ಇದೇ ರೀತಿ ಸಮಸ್ಯೆಯನ್ನು ಎದುರಿಸುತ್ತಿರುವ 400 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com