ಡ್ರಗ್ಸ್ ಪ್ರಕರಣ; ಚುರುಕುಗೊಂಡ ತನಿಖೆ, ಈವರೆಗೂ ಸುಮಾರು 15 ಜನರ ಬಂಧನ

ಅಕ್ರಮ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯನ್ನು ಚುರುಕುಗೊಳಿಸಿರುವ ಸಿಸಿಬಿ ಅಧಿಕಾರಿಗಳು ಪ್ರಕರಣ ಸಂಬಂಧ ಈವರೆಗೂ ಸುಮಾರು 15 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅಕ್ರಮ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯನ್ನು ಚುರುಕುಗೊಳಿಸಿರುವ ಸಿಸಿಬಿ ಅಧಿಕಾರಿಗಳು ಪ್ರಕರಣ ಸಂಬಂಧ ಈವರೆಗೂ ಸುಮಾರು 15 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಕಳೆದ ತಿಂಗಳಷ್ಟೇ ಪ್ರಕರಣ ಸಂಬಂಧ ಎನ್'ಸಿಬಿ ಅಧಿಕಾರಿಗಳು ಎಂ.ಅನೂಪ್, ಆರ್.ರವೀಂದ್ರನ್ ಹಾಗೂ ಅನಿಕಾ ಡಿ ಎಂಬ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದರು. ಬಂಧಿತ ಆರೋಪಿ ಅನಿಕಾ ಮನೆ ದೊಡ್ಡಗುಬ್ಬಿಯಲ್ಲಿದ್ದು, ಬಂಧನ ಸಂದರ್ಭದಲ್ಲಿ ಅಧಿಕಾರಿಗಳು ಅನಿಕಾ ಮನೆಯಿಂದ 111.6 ಗ್ರಾಂಗಳ 270 ಎಂಡಿಎಂಎ ಮಾತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದರು. 

ತನಿಖೆಯನ್ನು ಚುರುಕುಗೊಳಿಸಿರುವ ಅಧಿಕಾರಿಗಳಿಗೆ ಈ ಸಂಬಂಧ ಕೆಲ ಮಾಹಿತಿಗಳು ಲಭ್ಯವಾಗಿದ್ದು, ಚಲನಚಿತ್ರ ಮತ್ತು ಮನರಂಜನಾ ಕ್ಷೇದ್ರದಲ್ಲಿ ಡ್ರಗ್ಸ್ ಜಾಲದ ಮಾಹಿತಿಯ ಮೂಲ ಅನಿಕಾ ಆಗಿದ್ದಾಳೆಂಬುದು ತಿಳಿದುಬಂದಿದೆ.ಅನಿಕಾ ಆಫ್ರಿಕಾದ ಪ್ರಜೆಯನ್ನು ಮದುವೆಯಾಗಿದ್ದು ಕೆಲ ವರ್ಷಗಳಿಂದಲೂ ಡ್ರಗ್ಸ್ ಮಾರಾಟ ಮಾಡುತ್ತಿದ್ದಾಳೆಂಬುದು ಬಹಿರಂಗಗೊಂಡಿದೆ. 

ಆಫ್ರಿಕಾ ಪ್ರಜೆಯನ್ನು ವಿವಾಹವಾಗುವ ಮೂಲಕ ಅನಿಕಾ ಡ್ರಗ್ಸ್ ಜಾಲದಲ್ಲಿ ಸಿಕ್ಕಿಹಾಕಿಕೊಂಡಿದ್ದಳೇ ಎಂಬುದರ ಕುರಿತು ಇದೀಗ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 

ಸಾಕಷ್ಟು ಮಹಿಳೆಯರು ಸಂಬಂಧಗಳಿಂದ ಹಾಗೂ ವಿವಾಹ ಬಂಧನದಲ್ಲಿ ಸಿಕ್ಕಿಹಾಕಿಕೊಳ್ಳುವ ಮೂಲಕ ಡ್ರಗ್ಸ್ ಜಾಲದಲ್ಲಿ ಬಿದ್ದಿರುವುದು ತನಿಖೆ ವೇಳೆ ತಿಳಿದುಬಂದಿದೆ. ಸಾಕಷ್ಟು ಮಹಿಳೆಯರು ವಿದೇಶಿಯರ ಬಲೆಗೆ ಬಿದ್ದಿದ್ದಾರೆಂದು ಹೇಳಲಾಗುತ್ತಿದೆ.

ಈ ನಡುವೆ ನಟಿ ರಾಗಿಣಿ ಹಾಗೂ ಸಂಜನಾ ಅವರನ್ನು ಮಹಿಳಾ ಕೈದಿಗಳ ವಾರ್ಡ್ಗೆ ಇಂದು ಸ್ಥಳಾಂತರಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com