ಗದಗದಲ್ಲಿ ಮಿತಿಮೀರುತ್ತಿದೆ ಕೊರೋನಾ ಬೆಟ್ಟಿಂಗ್ ದಂಧೆ

ರಾಜ್ಯಾದ್ಯಂತ ಕೊರೋನಾ ಸೋಂಕು ನಿಯಂತ್ರಿಸಲು ಸರ್ಕಾರ ಹರಸಾಹಸ ಪಡುತ್ತಿದೆ, ಇದೇ ಹೊತ್ತಲ್ಲೇ ದಿನಕ್ಕೆ ಕೊರೋನಾ ಸಂಖ್ಯೆಯ ಮೇಲೆ ಬೆಟ್ಟಿಂಗ್ ನಡೆಯುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗದಗ: ರಾಜ್ಯಾದ್ಯಂತ ಕೊರೋನಾ ಸೋಂಕು ನಿಯಂತ್ರಿಸಲು ಸರ್ಕಾರ ಹರಸಾಹಸ ಪಡುತ್ತಿದೆ, ಇದೇ ಹೊತ್ತಲ್ಲೇ ದಿನಕ್ಕೆ ಕೊರೋನಾ ಸಂಖ್ಯೆಯ ಮೇಲೆ ಬೆಟ್ಟಿಂಗ್ ನಡೆಯುತ್ತಿದೆ.

ದಿನಕ್ಕೆ ಎಷ್ಟು ಕೊರೋನಾ ಕೇಸ್ ದಾಖಲಾಗುತ್ತದೆ ಎಂಬ ಬಗ್ಗೆ ಬೆಟ್ಟಿಂಗ್ ನಡೆಯುತ್ತಿದೆ. ಕೊರೋನಾ ಕೇಸ್ ಗಳ ಸಂಖ್ಯೆ ಮತ್ತೊಂದು ಜೂಜಾಟವಾಗಿ ಪರಿಣಮಿಸುತ್ತಿದೆ. 

ಈ ಹಿಂದೆ ಗದಗ, ಗಜೇಂದ್ರ ಗಢ, ರೋಣ, ನರಗುಂದಗಳಲ್ಲಿ ಮಟ್ಕಾ ದಂಧೆ ಬಹಿರಂವಾಗಿಯೇ ನಡೆಯುತ್ತಿತ್ತು.  ಒಮ್ಮೆ ಪೊಲೀಸರು ಈ ದಂಧೆಯನ್ನು ಮಟ್ಟ ಹಾಕಿ ನಿಲ್ಲಿಸಿದ್ದರು. ಈಗ ಕೋವಿಡ್ ಕೇಸ್ ಗಳ ಮೇಲೆ ಬೆಟ್ಟಿಂಗ್ ಆರಂಭವಾಗಿದೆ.

ದಿನಗೂಲಿ ಕಾರ್ಮಿಕರು, ಸಣ್ಣ ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಈ ಬೆಟ್ಟಿಂಗ್ ನಲ್ಲಿ ಪಾಲ್ಗೋಳ್ಳುತ್ತಿದ್ದಾರೆ. ಮಧ್ಯವರ್ತಿಗಳು ಮತ್ತಿ ಕೆಲವು ಬೆಟ್ಟರ್ ಗಳು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದು, ರಾಜ್ಯ ಆರೋಗ್ಯ ಇಲಾಖೆ ರಿಲೀಸ್ ಮಾಡುವ ಹೆಲ್ತ್ ಬುಲೆಟಿನ್ ಗಾಗಿ ಕಾಯುತ್ತಿರುತ್ತಾರೆ. ಹೆಲ್ಪ್ ಬುಲೆಟಿನ್ ಬಿಡುಗಡೆಯಾದ ಅರ್ಧ ಗಂಟೆಯಲ್ಲಿ ಜಯಗಳಿಸಿದವರ ಹೆಸರನ್ನು ಪ್ರಕಟಿಸಿ ಹಣ ನೀಡುತ್ತಾರೆ.

ಒಂದು ವೇಳೆ ಗೆದ್ದರೆ ಬೆಟ್ಟರ್ ದುಪ್ಪಟ್ಟು ಹಣ ನೀಡುತ್ತಾರೆ. ಶನಿವಾರ ಗದಗದಲ್ಲಿ 80 ಕೋರೋನಾ ಕೇಸ್ ದಾಖಲಾಗುತ್ತವೆ ಎಂದು ಹೇಳುತ್ತಾನೆ. ಒಂದು ವೇಳೆ ಆ ಸಂಖ್ಯೆಯೊಳಗೆ ಕೇಸ್ ಗಳು ದಾಖಲಾದರೇ ಗೆದ್ದವರಿಗೆ 1 ಸಾವಿರ ರು ಹಣ ನೀಡುತ್ತಾರೆ, ಮಧ್ಯವರ್ತಿಗಳು ಉತ್ತಮ ಹಣ ಸಂಗ್ರಹಿಸಿಕೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com