ವಿಧಾನಸಭೆ ಅಧಿವೇಶನ ಶೇಕಡಾ 90ರಷ್ಟು ಯಶಸ್ವಿ, 36 ವಿಧೇಯಕ ಅಂಗೀಕಾರ: ಕಾಗೇರಿ

ಹದಿನೈದನೇ ವಿಧಾನಸಭೆಯ 7ನೇ ಅಧಿವೇಶನ ಸೆ. 21ರಿಂದ 26ರವರೆಗೆ 6 ದಿನಗಳ ಕಾಲ 40 ಗಂಟೆಗಳ ಕಾರ್ಯಕಲಾಪ ನಡೆಸಲಾಗಿದೆ. ಇತ್ತೀಚೆಗೆ ನಿಧನ ಹೊಂದಿದ ಗಣ್ಯರಿಗೆ, ಕೋವಿಡ್ 19, ಗಡಿ ಸಂಘರ್ಘ ಹಾಗೂ ಅತಿವೃಷ್ಟಿಯಿಂದ ಮೃತರಾದವರಿಗೆ ಗೌರವಪೂರ್ವಕವಾಗಿ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಲಾಗಿದೆ. ರಾಜ್ಯಪಾಲರಿಂದ ಒಪ್ಪಿಗೆ...
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು: ಹದಿನೈದನೇ ವಿಧಾನಸಭೆಯ 7ನೇ ಅಧಿವೇಶನ ಸೆ. 21ರಿಂದ 26ರವರೆಗೆ 6 ದಿನಗಳ ಕಾಲ 40 ಗಂಟೆಗಳ ಕಾರ್ಯಕಲಾಪ ನಡೆಸಲಾಗಿದೆ. ಇತ್ತೀಚೆಗೆ ನಿಧನ ಹೊಂದಿದ ಗಣ್ಯರಿಗೆ, ಕೋವಿಡ್ 19, ಗಡಿ ಸಂಘರ್ಘ ಹಾಗೂ ಅತಿವೃಷ್ಟಿಯಿಂದ ಮೃತರಾದವರಿಗೆ ಗೌರವಪೂರ್ವಕವಾಗಿ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಲಾಗಿದೆ. ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯ ಕಾರ್ಯದರ್ಶಿಯವರ ವರದಿಯನ್ನು ಮಂಡಿಸಲಾಗಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ನೀಡಿರುವ 2018-19ನೇ ಸಾಲಿನ ಧನವಿನಿಯೋಗ ಲೆಕ್ಕಗಳು ಮತ್ತು ಹಣಕಾಸು, ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿ ಹಾಗೂ 74ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಅನುಷ್ಠಾನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ ವರದಿಯನ್ನು ಸದನವನ್ನು ಮಂಡಿಸಲಾಗಿದೆ ಎಂದರು.

ಒಟ್ಟು 3071 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 1109 ಪ್ರಶ್ನೆಗಳ ಉತ್ತರಗಳನ್ನು ಸದನದಲ್ಲಿ ಮಂಡಿಸಲಾಗಿದ. ಈ ಅಧಿವೇಶನದಲ್ಲಿ ಸದಸ್ಯರಿಗೆ ಮತ್ತು ಪತ್ರಿಕಾ ಮಾಧ್ಯಮದವರಿಗೆ ಲಿಖಿತ ಮೂಲಕ ಉತ್ತರಿಸಲಾಗುವ ಪ್ರಶ್ನೆಗಳಿಗೆ ಉತ್ತರಗಳನ್ನು ಈಮೇಲ್ ಮೂಲಕ ಒದಗಿಸಿರುವುದು ಒಂದು ವಿಶೇಷವಾಗಿದೆ.

ನಿಯಮ 351ರಡಿಯಲ್ಲಿ 60 ಸೂಚನೆಗಳನ್ನು ಅಂಗೀಕರಿಸಿದ್ದು, ಅದರಲ್ಲಿ 35 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಗಮನ ಸೆಳೆಯುವ 129 ಸೂಚನೆಗಳ ಪೈಕಿ 9 ಸೂಚನೆಗಳನ್ನು ಚರ್ಚಿಸಲಾಗಿದೆ. 72 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ. ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡಲು ಹಾಗೂ ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳನ್ನು ಪರಿಶೀಲಿಸಿ ತಿದ್ದುಪಡಿ ತರಲು ಶಿಫಾರಸು ಮಾಡುವುದಕ್ಕಾಗಿ ನಿಯಮಾವಳಿ ಸಮಿತಿಯನ್ನು ರಚಿಸಲು ಸಭಾಧ್ಯಕ್ಷರಿಗೆ ಅಧಿಕಾರ ನೀಡಲಾಗಿದೆ.

ರಾಜ್ಯಪಾಲರಿದ ಒಪ್ಪಿಗೆ ಪಡೆದ ವಿಧೇಯಕ ಪಟ್ಟಿಯನ್ನು ಸದನದ ಮುಂದೆ ಮಂಡಿಸಲಾಯಿತು. ಧನವಿನಯೋಗ ವಿಧೇಯಕ ,ಮಹಾ ಲೆಕ್ಕಪರಿಶೋಧಕರು, ಕಾರ್ಯನಿರ್ವಹಣಾ ವರದಿಯನ್ನು ಮಂಡಿಸಲಾಗಿದೆ. ವಿಧಾನ ಮಂಡಲ ಸಮಿತಿಗಳ 6 ವರದಿಯನ್ನು ಜಂಟಿ‌ ಪರಿಶೀಲನಾ ಸಮಿತಿ ವಿಶೇಷ ವರದಿ, 57 ಅಧಿಸೂಚನೆಗಳು, 19 ಅಧ್ಯಾದೇಶಗಳು, 62 ವಾರ್ಷಿಕ ವರದಿಗಳು, 69 ಲೆಕ್ಕಪರಿಶೋಧನಾ ವರದಿ, ಅನುಷ್ಠಾನ 1 ವರದಿ,1 ಅನುಪಾಲನಾ ವರದಿ, 3 ವಿಶೇಷ ವರದಿಗಳನ್ನು ಮಂಡಿಸಲಾಗಿದೆ. 4 ಅರ್ಜಿಗಳನ್ನು ಒಪ್ಪಿಸಲಾಗಿದೆ. 2020-21 ನೇ ಸಾಲಿನ ಪೂರಕ‌ ಅಂದಾಜು ಮೊದಲ‌ ಕಂತಿನ ಬೇಡಿಕೆಗೆ ಅಂಗೀಕರಿಸಲಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ನಲ್ಲಿ ತಿದ್ದುಪಡಿಗಳೊಂದಿಗೆ 2 ಧನ ವಿನಿಯೋಗ ವಿಧೇಯಕ, 37 ವಿಧೇಯಕಗಳ ಪೈಕಿ 36 ವಿಧೇಯಕ ಅಂಗೀಕಾರವಾಗಿದೆ. 1 ವಿಧೇಯಕ ತಡೆ ಹಿಡಿಯಲಾಗಿದೆ. ನಿಯಮ 60 ಅಡಿಯಲ್ಲಿ ನೀಡಿದ್ದ 3 ನಿಲುವಳಿ, 20 ಸೂಚನೆಗಳು ನಿಯಮಗಳ 69 ಅಡಿಯಲ್ಲಿ ಸ್ಪೀಕರಿಸಲಾಗಿದೆ. 1 ಸೂಚನೆ ಮೇಲೆ ಚೆರ್ಚಿಸಲಾಗಿದೆ. ಒಟ್ಟು 3071 ಪ್ರಶ್ನೆಗಳನ್ನು ಸ್ಚೀಕರಿಸಲಾಗಿದ್ದು ಅದರಲ್ಲಿ 1109 ಪ್ರಶ್ನೆಗಳನ್ನು ಸದನದಲ್ಲಿ ಮಂಡಿಸಲಾಗಿದೆ. ನಿಯಮ 351ರ ಅಡಿಯಲ್ಲಿ 60 ಸೂಚನೆಗಳನ್ನು ಸ್ವೀಕರಿಸಿದ್ದು 35 ಸೂಚನೆಗಳಿಗೆ ಉತ್ತರ ಸ್ವೀಕರಿಸಲಾಗಿದೆ. ಗಮನ ಸೆಳೆಯುವ 129 ಸೂಚನೆಗಳ ಪೈಕಿ 9 ಸೂಚನೆಗಳನ್ನು ಚೆರ್ಚಿಸಲಾಗಿದೆ. 73ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ. ಕೋವಿಡ್ ನಿಂದ 28 ಸಚಿವರಿಗೆ, ಶಾಸಕರಿಗೆ ಸದನಕ್ಕೆ ಗೈರಾಗಿದ್ದಾರೆ. ಬಿಜೆಪಿಯ-12, ಕಾಂಗ್ರೆಸ್ -10, ಜೆಡಿಎಸ್ - 6 ಸದಸ್ಯರಿಗೆ ಕೋವಿಡ್ ಬಂದ ಹಿನ್ನೆಲೆಯಲ್ಲಿ ಗೈರಾಗಿದ್ದರು. ಮುಖ್ಯಮಂತ್ರಿಯವರ ನೇತೃತ್ವದ ಮಂತ್ರಿಮಂಡಲದ ಮೇಲೆ ವಿರೋಧ ಪಕ್ಷದ ನಾಯಕರು ಮಂಡಿಸಿದ್ದ ಅವಿಶ್ವಾಸ ನಿರ್ಣಯ ಪ್ರಸ್ತಾಪ ಧ್ವನಿಮತದಿಂದ ತಿರಸ್ಕರಿಸಲ್ಪಟ್ಟಿದೆ ಎಂದರು.

ವಿಧಾನಮಂಡಲದ ವತಿಯಿಂದ ಪ್ರಕಟಗೊಳ್ಳುತ್ತಿದ್ದ ತ್ರೈಮಾಸಿಕ ಶಾಸಕಾಂಗ ಪತ್ರಿಕೆಯು ಸ್ಥಗಿತಗೊಂಡಿರುವುದನ್ನು ಗಮನಿಸಿ ಜುಲೈ 2019 ರಿಂದ ಪತ್ರಿಕೆಯನ್ನು ಪ್ರಕಟಿಸಿ ಈಗಾಗಲೆ ಮಾರ್ಚ್ 2020 ಅವಧಿಯವರೆಗಿನ ಮೂರು ಸಂಚಿಕೆಗಳನ್ನು ಬಿಡುಗಡೆಗೊಳಿಸಿ ಸದಸ್ಯರಿಗೆ ನೀಡಲಾಗಿದೆ ಎಂದರು.

15ನೇ ವಿಧಾನಸಭೆಯ ಸದಸ್ಯರ ಪರಿಚಯ ಪುಸ್ತಕವನ್ನು ಪ್ರಕಟಿಸಿ ಸದಸ್ಯರಿಗೆ ಒದಗಿಸಲು ಕ್ರಮಕೈಗೊಳ್ಳಲಾಗಿದೆ. ವಿಶೇಷವಾಗಿ ಕೊರೊನಾ ವೈರಸ್ ಹಾವಳಿಯ ಸಂದರ್ಭದಲ್ಲಿ ಸದನ ನಡೆಸಲು ಸಹಕರಿಸಿದ ಸಭಾ ನಾಯಕರಾದ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು, ಸಚಿವರು ಸೇರಿದಂತೆ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com