ಮಳವಳ್ಳಿ ಪೊಲೀಸರ ಮಿಂಚಿನ ಕಾರ್ಯಾಚರಣೆ; ಶೋಕಿಗಾಗಿ ಬೈಕ್ ಕದ್ದು ಮಾರಾಟ ಮಾಡುತ್ತಿದ್ದ ಖದೀಮರ ಬಂಧನ

ಶೋಕಿಗಾಗಿ ಕದ್ದು ಬೈಕ್ಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಮಳವಳ್ಳಿ ಪೊಲೀಸರು ಬಂಧಿತರಿಂದ ೧೬ ಬೈಕ್ ಗಳನ್ನು ಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ಮಂಡ್ಯ: ಶೋಕಿಗಾಗಿ ಕದ್ದು ಬೈಕ್ಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಮಳವಳ್ಳಿ ಪೊಲೀಸರು ಬಂಧಿತರಿಂದ ೧೬ ಬೈಕ್ ಗಳನ್ನು ಳನ್ನು ವಶಪಡಿಸಿಕೊಂಡಿದ್ದಾರೆ.

ಮಳವಳ್ಳಿಯ ಎನ್.ಅಭಿಷೇಕ್ ಅಲಿಯಾಸ್ ಅಭಿ, ಪ್ರಶಾಂತ್ ಅಲಿಯಾಸ್ ಕಪ್ಪೆ,ಪ್ರಮೋದ ಅಲಿಯಾಸ್ ಪ್ರಮು ಎಂಬ ಆರೋಪಿಗಳನ್ನುಪೊಲೀಸರು ಬಂಧಿಸಿದ್ದಾರೆ.ಮಂಡ್ಯದ ಮಂಜ,ಮತ್ತು ಗಜ,ಗುರು ಎಂಬುವವರು ತಲೆಮರೆಸಿಕೊಂಡಿದ್ದು ಅವರಿಗಾಗಿ ಪೊಲೀಸರು ಬಲೆಬೀಸಿದ್ದಾರೆ.

ಬಾಚನಹಳ್ಳಿಯ ನಾಗೇಂದ್ರಪ್ರಸಾದ್ ಎನ್. ಅವರು ತಮ್ಮ ಬೈಕ್ ಕಳುವಾಗಿರುವ ಬಗ್ಗೆ ಮಳವಳ್ಳಿ ಗ್ರಾಮಾಂತರ ಠಾಣೆಗೆ ಸೆ.೨೪ ರಂದು ದೂರು ನೀಡಿದ್ದರು,ಪ್ರಕರಣದ ಆರೋಪಿಗಳ ಪತ್ತೆಗಾಗಿ ಡಿವೈಎಸ್ಪಿ ಪೃಥ್ವಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು.ತನಿಖೆಯ ವೇಳೆ ಸೆ.೨೫ ರಂದು ಬಾಚನಹಳ್ಳಿ ನಾಗೇಂದ್ರಪ್ರಸಾದ್ ಅವರ ಬೈಕ್ ಕಳುವು ಮಾಡಿದ್ದ ಆರೋಪಿ ಅಭಿಷೇಕ್ ಮಾಲು ಸಹಿತ ಸಿಕ್ಕಿಬಿದ್ದಿದ್ದ,ವಿಚಾರಣೆಯ ವೇಳೆ ಸಹಚರರಾದಪ್ರಶಾಂತ್ ,ಪ್ರಮೋದ ಅವರ ಬಗ್ಗೆಯೂ ಬಾಯಿಬಿಟ್ಟಿದ್ದ,

ತೀವ್ರ ವಿಚಾರಣೆ ನಡೆಸಿದಾಗ ಆರೋಪಿಗಳು ಜಿಲ್ಲೆಯ ವಿವಿಧೆಡೆಗಳಲ್ಲಿ ಡಿಯೋ,ಆರ್ಎಕ್ಸ್-೧೦೦,ಆಕ್ಟೀವಾಹೋಂಡಾ, ಹೋಂಡಾಶೈನ್,ಸ್ಪೆಂಡರ್ ಬೈಕ್ ಸೇರಿದಂತೆ ಸುಮಾರು ೧೬ ಬೈಕ್ ಗಳನ್ನು ಕಳವು ಮಾಡಿರುವುದಾಗಿ ಬಾಯಿಬಿಟ್ಟಿದ್ದಾರೆ. ಅವರು ನೀಡಿದ ಮಾಹಿತಿಯಂತೆಯೇ ಸುಮಾರು ೧೬ ಬೈಕ್ ಗಳು ಮತ್ತು ೨೫೦೦೦ ರುಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ,ತಲೆಮರೆಸಿಕೊಂಡಿರುವ  ಬಂಧಿಸಲು ಪೊಲೀಸರು ಬಲೆಬೀಸಿದ್ದಾರೆ.ಆರೋಪಿಗಳ ಪತ್ತೆಕಾರ್ಯದಲ್ಲಿ ಮಳವಳ್ಳಿ ಠಾಣೆಯ ಪಿಎಸೈ ಹೆಚ್.ಹನುಮಂತಕುಮಾರ್,ರವಿಶಂಕರ್,ಎಎಸೈ ರವೀಂದ್ರಕುಮಾರ್,ರವಿಕುಮಾರ್,ಸಿಬ್ಬಂದಿಗಳಾದ ರಾಜು,ಕೃಷ್ಣ,ಮಾದೇಶ್,ನಾಗೇಂದ್ರ,ಸುರೇಶ್,ನಾಗೇಂದ್ರ,ಸುನಿಲ್ ಅವರನ್ನೊಳಗೊಂಡ ತಂಡ ಪಾಲ್ಗೊಂಡಿತ್ತು.ಕಳ್ಳರನ್ನು ಹಿಡಿದ ಪೊಲೀಸ್ ತಂಡಕ್ಕೆ  ಜಿಲ್ಲಾಪೊಲಿಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಬಹುಮಾನ ಘೋಷಿಸಿದ್ದಾರೆ.

-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com