ನದಿ ಜೋಡಣೆ ಕೆಲಸ ಸರಾಗವಾಗಿ ನಡೆಯುತ್ತಿದೆ: ರಮೇಶ್ ಜಾರಕಿಹೊಳಿ

ವರದಾ ನದಿ ಪೂರ್ವಕ್ಕೆ ಹರಿಯುತ್ತದೆ ಮತ್ತು ತುಂಗಭದ್ರಾ ನದಿಯನ್ನು ಸೇರುತ್ತದೆ, ಅದು ಅಂತಿಮವಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಕಡೆಗೆ ಹರಿಯುವ ಕೃಷ್ಣ ನದಿಯನ್ನು ಸೇರುತ್ತದೆ.
ರಮೇಶ್ ಜಾರಕಿ ಹೊಳಿ
ರಮೇಶ್ ಜಾರಕಿ ಹೊಳಿ

ಬೆಂಗಳೂರು: ಕರ್ನಾಟಕದ ಕೆಲವು ಭಾಗಗಳು ವರ್ಷದಿಂದ ವರ್ಷಕ್ಕೆ ಬರಗಾಲವನ್ನು ಕಂಡಿವೆ ಮತ್ತು ಈ ಸ್ಥಳಗಳಲ್ಲಿ ನೀರಿನ ಮಟ್ಟ ಆತಂಕಕಾರಿ ಮತ್ತು ಆರ್ಥಿಕವಾಗಿ ಸಮರ್ಥನೀಯವಲ್ಲದ ಮಟ್ಟಕ್ಕೆ ಇಳಿದಿವೆ. ಕರ್ನಾಟಕ ಸರ್ಕಾರವು ಸ್ಪಷ್ಟವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತೋರಿಸಲು ತೆಗೆದುಕೊಂಡ ಪರಿಹಾರಗಳಲ್ಲಿ ನದಿಗಳನ್ನು ಜೋಡಿಸುವುದು ಪ್ರಮುಖವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಬೆಟ್ಟಿ ನದಿಯನ್ನು ಜೋಡಿಸುವುದು ಒಂದು ಯೋಜನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಹುಟ್ಟಿ ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಗಳ ಕಡೆಗೆ ಹರಿಯುವ ವರದ ನದಿ ಜೋಡಣೆಯೂ ಕೂಡ ಒಂದಾಗಿದೆ.

ವರದಾ ನದಿ ಪೂರ್ವಕ್ಕೆ ಹರಿಯುತ್ತದೆ ಮತ್ತು ತುಂಗಭದ್ರಾ ನದಿಯನ್ನು ಸೇರುತ್ತದೆ, ಅದು ಅಂತಿಮವಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಕಡೆಗೆ ಹರಿಯುವ ಕೃಷ್ಣ ನದಿಯನ್ನು ಸೇರುತ್ತದೆ.

ಈ ಉದ್ದೇಶಿತ ನದಿ ಜೋಡಣೆಯಿಂದ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ಫಲಾನುಭವಿಗಳಾಗಿವೆ,
ಕೇಂದ್ರ ತಂಡ ಕೆಲ ತಿಂಗಳುಗಳ ಹಿಂದೆ ರಾಜ್ಯದ ಅಭಿಪ್ರಾಯ ಸಂಗ್ರಹಿಸಿದೆ. ರಾಜ್ಯವು ತನ್ನ ಅಭಿಪ್ರಾಯ ತಿಳಿಸಿದೆ. ಮಹಾನದಿ ಮತ್ತು ಗೋದಾವರಿ ನದಿ ಜೋಡಣೆ ಕೂಡ ಮತ್ತೊಂದು ನದಿ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಮಹಾನದಿ ಜಲಾನಯನ ಮತ್ತು ಗೋದಾವರಿ ಜಲಾನಯನ ಪ್ರದೇಶದ ಹೆಚ್ಚುವರಿ ಹರಿವನ್ನು ಕೃಷ್ಣ, ಪೆನ್ನಾರ್ ಮತ್ತು ಕಾವೇರಿ ನದಿಗಳಿಗೆ ತಿರುಗಿಸಲು ಉದ್ದೇಶಿಸಿದೆ. 


ಸಹಿ ಮಾಡಲು ಕರ್ನಾಟಕವನ್ನು ಸಂಪರ್ಕಿಸಿದಾಗ, ನಾವು  ರಾಜ್ಯದ ಪಾಲಿನ ವಿವರಗಳ ಬಗ್ಗೆ ಅವರನ್ನು ಕೇಳಿದೆವು ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಕಾಲುವೆಗಳು ಮತ್ತು ಜಲಾಶಯಗಳ ಮೂಲಕ ಈ ನದಿಗಳನ್ನು ಜೋಡಿಸಿ, ನಮ್ಮ ಜಲ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನಾವು ಯೋಜಿಸುತ್ತಿದ್ದೇವೆ. ನೇತ್ರಾವತಿ ಮತ್ತು ಕಾವೇರಿ ನದಿಗಳ ಸಂಪರ್ಕ ಸೇರಿದಂತೆ ಇತರೆ ನದಿಗಳ ಜೋಡಣೆ ಕಾರ್ಯ ಆರಂಭವಾಗಿದೆ. ನೇತ್ರಾವತಿ ನದಿಯನ್ನು ಚಿತ್ರದುರ್ಗದಲ್ಲಿರುವ ವಾಣಿವಿಲಾಸ ಜಲಾಶಯಕ್ಕೆ ಜೋಡಿಸಲಾಗುವುದು ಹಾಗೂ ಹೇಮಾವತಿ ಮತ್ತು ಕಾವೇರಿ ನದಿಗೆ ಸಂಪರ್ಕಿಸಲಾಗುವುದು ಎಂದು ಜಾರಕಿಹೊಳಿ ತಿಳಿಸಿದ್ದಾರೆ.

ಕರ್ನಾಟಕದ ಹಲವಾರು ಭಾಗಗಳಲ್ಲಿ ನಿರಂತರ ಬರಗಳು ಮತ್ತು ನೀರಿನ ಮಟ್ಟ ದೀರ್ಘಕಾಲಿಕ ಸಮಸ್ಯೆಯಾಗಿದ್ದರೂ, ಇದು ಒಂದು ದೊಡ್ಡ ಪರಿಹಾರದ ಅಂಶಗಳಲ್ಲಿ ಒಂದಾಗಿರಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಈ ಪರಸ್ಪರ ಸಂಪರ್ಕಿಸುವ ಯೋಜನೆಗಳು, ಒಮ್ಮೆ ಕಾರ್ಯರೂಪಕ್ಕೆ ಬಂದರೆ, ಬಡತನವನ್ನು ನಿವಾರಿಸುತ್ತದೆ ಮತ್ತು ಒಣ ಪ್ರದೇಶಗಳಲ್ಲಿ ಬರವನ್ನು ತಡೆಯುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com