ಕೊರೋನಾ ವಾರಿಯರ್ಸ್ ಗೆ ಕನ್ನಡ, ಕೊಂಕಣಿಯಲ್ಲಿ ಇಂಗ್ಲೆಂಡ್ ರೈಲ್ವೆ ಗೌರವ ನಮನ

ಭಾರತದಲ್ಲಿ ಕೊರೋನಾ ವಿರುದ್ಧ ಹೋರಾಡುತ್ತಿರುವ ಕೊರೋನಾ ಯೋಧರಿಗೆ ಕನ್ನಡ, ಕೊಂಕಣಿಯಲ್ಲಿ ಇಂಗ್ಲೆಂಡ್ ರೈಲ್ವೆ ಗೌರವ ನಮನ ಸಲ್ಲಿಸಿದೆ.
ಕೊರೋನಾ ವಾರಿಯರ್ಸ್ ಗೆ ನಮನ
ಕೊರೋನಾ ವಾರಿಯರ್ಸ್ ಗೆ ನಮನ

ಕಾರವಾರ: ಭಾರತದಲ್ಲಿ ಕೊರೋನಾ ವಿರುದ್ಧ ಹೋರಾಡುತ್ತಿರುವ ಕೊರೋನಾ ಯೋಧರಿಗೆ ಕನ್ನಡ, ಕೊಂಕಣಿಯಲ್ಲಿ ಇಂಗ್ಲೆಂಡ್ ರೈಲ್ವೆ ಗೌರವ ನಮನ ಸಲ್ಲಿಸಿದೆ.

ಅಂತಹ ಒಂದು ಕೃತಜ್ಞತೆಯನ್ನು ಇಂಗ್ಲೆಂಡ್‌ನ ಖಾಸಗಿ ರೈಲು ಆಪರೇಟರ್ ಗ್ರೇಟ್ ವೆಸ್ಟರ್ನ್ ರೈಲ್ವೆ ತೋರಿಸಿದೆ. ಕೊರೋನಾ ವಾರಿಯರ್ಸ್ ಗೆ ವಿಶೇಷ ರೀತಿ ಗೌರವ ತೋರಿಸಲು ಅಪ್ರತಿಮ ಮಾರ್ಗ ಅನುಸರಿಸಿದೆ.

ಲಂಡನ್ ರೈಲ್ವೆ ಇಲಾಖೆ  ತನ್ನ ಬೋಗಿಗಳ ಮೇಲೆ ಕನ್ನಡ, ಹಿಂದಿ, ತೆಲುಗು, ಕೊಂಕಣಿ, ಸೇರಿದಂತೆ 16 ಭಾಷೆಗಳಲ್ಲಿ ಬರೆದಿದ್ದು, ''ದಿ ನೇಷನ್ ಸೇಸ್ ಥ್ಯಾಂಕ್ಯೂ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

ಸ್ಯಾಮ್ ಸ್ಮಿತ್, ಸ್ಯಾಮ್ ಮೂರೆ ಮತ್ತು ನೆಡ್ ಥಾಂಪ್ಸನ್ ಎಂಬ ಮೂವರು ಯುವಕರ ಕನಸಿನ ಕೂಸಾಗಿದೆ. ಸಾಂಕ್ರಾಮಿಕ ರೋಗ ಕೊರೋನಾ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ ಗೌರವ ಸಲ್ಲಿಸಲು ಇದೊಂದು ವಿಶೇಷ ಮಾರ್ಗವಾಗಿದೆ, ಗ್ರೇಟ್ ವೆಸ್ಟರ್ನ್ ರೈಲ್ವೆ  ತಿಳಿಸಿದೆ. 

ಇಂಟರ್ಸಿಟಿ ಎಕ್ಸ್‌ಪ್ರೆಸ್ ರೈಲು ಈ  ಪ್ರದರ್ಶನ ಆಯೋಜಿಸಿದ್ದು, ಅಲ್ಲಿ ‘ಧನ್ಯವಾದ’ (ಕನ್ನಡ) ಮತ್ತು ‘ಡಿಯು ಬೋರೆಮ್ ಕೋರಮ್’  ಎಂದು (ಕೊಂಕಣಿ) ಬರೆಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com