ಬೆಂಗಳೂರು ವಿವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಬದಲು ಕಿಸಾನ್ ಸಮ್ಮಾನ್ ಹಣ! 

ಬೆಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ಖಾತೆಗೆ ವಿದ್ಯಾರ್ಥಿ ವೇತನ ನೀಡುವ ಬದಲು ಕಿಸಾನ್ ಸಮ್ಮಾನ್ ಯೋಜನೆ ಹಾಗೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಮನ್ರೇಗಾ) ಹಣವನ್ನು ಹಾಕಲಾಗಿದೆ. 
ಬೆಂಗಳೂರು ವಿವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಬದಲು ಕಿಸಾನ್ ಸಮ್ಮಾನ್ ಹಣ!
ಬೆಂಗಳೂರು ವಿವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಬದಲು ಕಿಸಾನ್ ಸಮ್ಮಾನ್ ಹಣ!

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ಖಾತೆಗೆ ವಿದ್ಯಾರ್ಥಿ ವೇತನ ನೀಡುವ ಬದಲು ಕಿಸಾನ್ ಸಮ್ಮಾನ್ ಯೋಜನೆ ಹಾಗೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ಮನ್ರೇಗಾ) ಹಣವನ್ನು ಹಾಕಲಾಗಿದೆ. 

6,000 ರಿಂದ 30,000 ರೂಪಾಯಿಗಳ ವರೆಗೆ ವಿದ್ಯಾರ್ಥಿಗಳ ಖಾತೆಗೆ ಹಣ ಜಮಾವಣೆ ಮಾಡಲಾಗಿದೆ. ಎಸ್ ಸಿ/ ಎಸ್ ಟಿ ವಿದ್ಯಾರ್ಥಿಗಳಿಗೆ ತಮ್ಮ ಖಾತೆಗೆ ಏಕಾ ಏಕಿ ಹಣ ಜಮೆಯಾಗಿರುವ ಬಗ್ಗೆ ತೀವ್ರ ಗೊಂದಲ ಉಂಟಾಗಿತ್ತು. ಕೊನೆಗೆ ತಮಗೆ ವಿದ್ಯಾರ್ಥಿವೇತನದ ಹಣವನ್ನು ನೀಡುತ್ತಿದ್ದ ಎಸ್ಎಸ್ ಡಿ ಪೋರ್ಟಲ್ ( ಸಮಾಜ ಕಲ್ಯಾಣ ಇಲಾಖೆಯೊಂದಿಗಿನ ಸಂಪರ್ಕಕ್ಕೆ ಇರುವ ವ್ಯವಸ್ಥೆ) ನ್ನು ಪರಿಶೀಲಿಸಿದಾಗ ಇದು ಸಮಾಜ ಕಲ್ಯಾಣ ಇಲಾಖೆಯಿಂದಲೇ ಬಂದಿರುವ ಹಣವಾಗಿದ್ದು ಎಡವಟ್ಟಿನಿಂದ ಸಂಭವಿಸಿದೆ ಎಂಬುದು ತಿಳಿದಿದೆ.
 
ವಿದ್ಯಾರ್ಥಿ ವೇತನ ಪಡೆಯುತ್ತಿದ್ದ, ಬೆಂಗಳೂರು ವಿವಿ ವ್ಯಾಪ್ತಿಯ 300 ವಿದ್ಯಾರ್ಥಿಗಳಿಗೆ ಮೇ-ಜುಲೈ ತಿಂಗಳವರೆಗಿನ ದಿನಗಳು ಕೋವಿಡ್-19, ಲಾಕ್ ಡೌನ್ ಕಾರಣದಿಂದಾಗಿ ತೀವ್ರ ಸಂಕಷ್ಟಮಯವಾಗಿತ್ತು. ದಿನ ನಿತ್ಯದ ವೆಚ್ಚಗಳಿಗೆ ತಿಂಗಳಿಗೆ ಒಮ್ಮೆ ನೀಡಲಾಗುತ್ತಿದ್ದ 750 ರೂಪಾಯಿಗಳು ಆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತಲುಪಿರಲಿಲ್ಲ. 

ಈ ನಡುವೆ ಮಲಾಕ್ ಡೌನ್ ಮುಕ್ತಾಯಗೊಂಡು, ಕೆಲವು ತಿಂಗಳ ನಂತರ ಮೂರನೇ ವರ್ಷದ ಪ್ರವೇಶಕ್ಕೆ ವಿವಿಗೆ ವಾಪಸ್ಸಾದ ವಿದ್ಯಾರ್ಥಿಗಳಿಗೆ ವಿವಿ ಪ್ರವೇಶ ಶುಲ್ಕ ಕೇಳಿದಾಗ ಆಘಾತವೇ ಎದುರಾಗಿತ್ತು. "ಎಸ್ ಸಿ/ ಎಸ್ ಟಿ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕ, ಹಾಸ್ಟೆಲ್ ಶುಲ್ಕ, ಪರೀಕ್ಷಾ ಶುಲ್ಕ ಹಾಗೂ ಇನ್ನಿತರ ಶುಲ್ಕಗಳೂ ಸೇರಿ ವಾರ್ಷಿಕ 40,000 ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಅಗತ್ಯವಿರುವ ಶುಲ್ಕಗಳನ್ನು ಕಡಿತಗೊಳಿಸಿ ವಿದ್ಯಾರ್ಥಿಗಳಿಗೆ 14,000 ರೂಪಾಯಿ ನೀಡಲಾಗುತ್ತದೆ" ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ. 

ಆದರೆ ಈ ಬಾರಿ ಪ್ರವೇಶ ಶುಲ್ಕ ವಿದ್ಯಾರ್ಥಿ ವೇತನದಿಂದ ಕಡಿತಗೊಳಿಸುವ ಬದಲು ವಿದ್ಯಾರ್ಥಿಗಳನ್ನೇ ಪಾವತಿಸುವಂತೆ ಕೇಳಿದಾಗ ಆಘಾತ ಉಂಟಾಯಿತು. ಈಗ ಕಿಸಾನ್ ಯೋಜನೆ, ಮನ್ರೇಗಾ ಯೋಜನೆಗಳ ಹಣವನ್ನು ನೀಡಿರುವುದು 40,000 ರೂಪಾಯಿಗಳಲ್ಲಿ ಒಂದು ಭಾಗವಷ್ಟೇ.

ಈಗ ನಮಗೆ ಬಂದಿರುವ ಹಣ ವಾಪಸ್ ಮಾಡದೇ ಇದ್ದಲ್ಲಿ ನಮಗೆ ಪ್ರವೇಶ ಚೀಟಿಯನ್ನು ನೀಡುವುದಿಲ್ಲ ಎಂದು ಬೆದರಿಕೆ ಹಾಕಲಾಗುತ್ತಿದೆ ಎಂದು ಮತ್ತೋರ್ವ ವಿದ್ಯಾರ್ಥಿ ಹೇಳಿದ್ದಾರೆ. ಈ ಸಮಸ್ಯೆಯನ್ನು ವಿದ್ಯಾರ್ಥಿಗಳು ವಿವಿ ಕುಲಪತಿ ಪ್ರೊ. ಕೆಆರ್ ವೇಣುಗೋಪಾಲ್ ಅವರ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ವೇಣುಗೋಪಾಲ್ ವಿವಿ ಈ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಯತ್ನಿಸುತ್ತಿದೆ, ಕಾನೂನು ವಿಭಾಗದ ವಿದ್ಯಾರ್ಥಿಗಳಿಗೆ ಈ ಸಮಸ್ಯೆ ಎದುರಾಗಿದ್ದು ಅವರ ಅಡ್ಮಿಷನ್ ಡೆಡ್ ಲೈನ್ ನ್ನು ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com