ಅಕ್ಟೋಬರ್ 1 ರಿಂದ ಡ್ರೀಮ್‍ ಕ್ಲಾಸ್ ಮಲ್ಟಿ ಅಕ್ಸಲ್ ಎ.ಸಿ. ಸ್ಲೀಪರ್ ಬಸ್ ಸಂಚಾರ ಆರಂಭ

ರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ ಆರ್ ಟಿಸಿ) ವತಿಯಿಂದ ಮಂಗಳೂರು, ಹೈದರಾಬಾದ್ ಮಾರ್ಗದಲ್ಲಿ ಅಂಬಾರಿ ಡ್ರೀಮ್‍ ಕ್ಲಾಸ್, ಮಲ್ಟಿ ಅಕ್ಸಲ್ ಎ.ಸಿ. ಸ್ಲೀಪರ್ ವಾಹನ ಹಾಗೂ ಉಡುಪಿ, ಹೈದರಾಬಾದ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ ಆರ್ ಟಿಸಿ) ವತಿಯಿಂದ ಮಂಗಳೂರು, ಹೈದರಾಬಾದ್ ಮಾರ್ಗದಲ್ಲಿ ಅಂಬಾರಿ ಡ್ರೀಮ್‍ ಕ್ಲಾಸ್, ಮಲ್ಟಿ ಅಕ್ಸಲ್ ಎ.ಸಿ. ಸ್ಲೀಪರ್ ವಾಹನ ಹಾಗೂ ಉಡುಪಿ, ಹೈದರಾಬಾದ್ ಮಾರ್ಗದಲ್ಲಿ ರಾಜಹಂಸ ವಾಹನವನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೋಬರ್ 1 ರಿಂದ ಪ್ರಾರಂಭಿಸಲಾಗುತ್ತಿದೆ.

ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದಾಗಿ ನಿಗಮದ ಸ್ಟ್ಯಾಂಡರ್ಡ್ ಆಪರೇಷನ್ ಕಾರ್ಯವಿಧಾನದ (ಎಸ್‌ಒಪಿ) ನಿರ್ದೇಶನಗಳಂತೆ ನಿಗಮದ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುತ್ತಿದೆ.

ಸದರಿ ಮಾರ್ಗದ ಸಾರಿಗೆ ಕಾರ್ಯಾಚರಣೆಯ ವಿವರ ಇಂತಿವೆ
ಅಂಬಾರಿ ಡ್ರೀಮ್‍ ಕ್ಲಾಸ್ ಮಲ್ಟಿಅಕ್ಸಲ್ ಎ.ಸಿ. ಸ್ಲೀಪರ್ ಬಸ್ ಮಧ್ಯಾಹ್ನ 3 ಗಂಟೆಗೆ ಹೊರಟು ಸುರತ್ಕಲ್, ಮುಲ್ಕಿ, ಉಡುಪಿ, ಕುಂದಾಪುರ, ಭಟ್ಕಳ, ಹುಬ್ಬಳ್ಳಿ, ಗದಗ, ಕೊಪ್ಪಳ, ರಾಯಚೂರು, ಹೈದರಾಬಾದ್‍ ಗೆ ಮಾರನೇ ದಿನ ಬೆಳಗ್ಗೆ 8.30 ಗಂಟೆಗೆ ತಲುಪಲಿದೆ. ಪ್ರಯಾಣ ದರ ರೂ. 1,700.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com