ಚಾಮರಾಜನಗರ: ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಗೃಹಿಣಿ ಆತ್ಮಹತ್ಯೆ!

ವರದಕ್ಷಿಣೆ ಕಿರುಕುಳಕ್ಕೆ ಮನನೊಂದ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಅಂಕಶೆಟ್ಟಿಪುರದಲ್ಲಿ ಜರುಗಿದೆ. 

Published: 29th September 2020 03:22 PM  |   Last Updated: 29th September 2020 03:22 PM   |  A+A-


for representation purpose only

ಸಂಗ್ರಹ ಚಿತ್ರ

Posted By : Vishwanath S
Source : RC Network

ಚಾಮರಾಜನಗರ: ವರದಕ್ಷಿಣೆ ಕಿರುಕುಳಕ್ಕೆ ಮನನೊಂದ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಅಂಕಶೆಟ್ಟಿಪುರದಲ್ಲಿ ಜರುಗಿದೆ. 

ಒಂದು ವರ್ಷದ ಹಿಂದೆ ಟಿ.ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮದಿಂದ ಅಂಕಶೆಟ್ಟಿಪುರ ಗ್ರಾಮದ ರಾಜೇಂದ್ರನೊಂದಿಗೆ ವಿವಾಹವಾಗಿದ್ದ ತ್ರಿವೇಣಿ ಎಂಬ ಯುವತಿಯೇ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.

ವರದಕ್ಷಿಣೆ ವಿಚಾರವಾಗಿ ತನಗೆ ಪ್ರತಿನಿತ್ಯ ಗಂಡನು ಸೇರಿದಂತೆ ಮನೆಯವರೆಲ್ಲ ಸೇರಿ ಕಿರುಕುಳ ನೀಡುತ್ತಿದ್ದರು ಎಂದು ನಮ್ಮ ಮಗಳು ತ್ರಿವೇಣಿ ಕೆಲದಿನಗಳ ಹಿಂದೆ ನಮಗೆ ತಿಳಿಸುತ್ತಿದ್ದಳು ಎಂದು ಮನೆಯವರು, ತ್ರಿವೇಣಿಯ ಪತಿ ರಾಜೇಂದ್ರ ಹಾಗೂ ಈತನ ಮನೆಯವರ ವಿರುದ್ದ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಅಲ್ಲದೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ತ್ರಿವೇಣಿ ತನ್ನ ಗಂಡ ಹಾಗೂ ಮನೆಯವರು ತನ್ನೊಂದಿಗೆ ಪ್ರತಿ ದಿನ ಹೇಗೆ ನಡೆದುಕೊಳ್ಳುತ್ತಿದ್ದರು, ಹೇಗೆಲ್ಲಾ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಬರೆದುಕೊಂಡಿರುವ ಡೈರಿಯನ್ನು ಹಾಗೂ ಪತಿ ರಾಜೇಂದ್ರನ ಮೊಬೈಲ್ ಅನ್ನು ಗ್ರಾಮಾಂತರ ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ.

ವರದಿ: ಗೂಳಿಪುರ ನಂದೀಶ್

Stay up to date on all the latest ರಾಜ್ಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp