ಕಾರ್ಪೋರೇಟ್ ಸಂಸ್ಥೆಗಳಿಗೆ ಭೂಮಿ ಮಾರಿ ರೈತರು ಜೀವನಾಧಾರ ಕಳೆದುಕೊಳ್ಳಲಿದ್ದಾರೆ: ಲಕ್ಷ್ಮಿ ಹೆಬ್ಬಾಳ್ಕರ್

ಬಿಜೆಪಿ ಸರ್ಕಾರ ಕಾರ್ಪೋರೇಟರ್ ಗಳ ಒತ್ತಡಕ್ಕೆ ಮಣಿಯುತ್ತಿದೆ,ಹೀಗಾಗಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿದೆ, ರೈತರ ಹಿತಾಸಕ್ತಿಯನ್ನು ಕಡೆಗಣಿಸಿದೆ ಎಂದು ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.

Published: 30th September 2020 12:12 PM  |   Last Updated: 30th September 2020 12:48 PM   |  A+A-


Laxmi hebbalkar

ಲಕ್ಷ್ಮಿ ಹೆಬ್ಬಾಳ್ಕರ್

Posted By : Shilpa D
Source : Online Desk

ಬೆಳಗಾವಿ: ಬಿಜೆಪಿ ಸರ್ಕಾರ ಕಾರ್ಪೋರೇಟರ್ ಗಳ ಒತ್ತಡಕ್ಕೆ ಮಣಿಯುತ್ತಿದೆ, ಹೀಗಾಗಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿದೆ, ರೈತರ ಹಿತಾಸಕ್ತಿಯನ್ನು ಕಡೆಗಣಿಸಿದೆ ಎಂದು ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.

ಕಾರ್ಪೋರೇಟರ್ ಸಂಸ್ಥೆಗಳು ಕೃಷಿ ಭೂಮಿ ಖರೀದಿಸುವುದರಿಂದ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಬೀದಿಗೆ ಬೀಳಲಿದ್ದಾರೆ, ಒಂದು ಅಥವಾ ಎರಡು ಎಕರೆಗಳಂತಹ ಸಣ್ಣ ಜಮೀನು ಹೊಂದಿರುವ ರೈತರಿಗೆ ಉತ್ತಮ ಹಣ ಸಿಗುತ್ತದೆ, ಅವರಿಗೆ ಜೀವನೋಪಾಯ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಅವರು ತಮ್ಮ ಭೂಮಿಯನ್ನು ಮಾರಾಟ ಮಾಡಿದ ನಂತರ ಹಾಳಾಗುತ್ತಾರೆ.

ದೊಡ್ಡ ಕಂಪನಿಗಳು ಖರೀದಿಸಿದ ಅಥವಾ ಸ್ವಾಧೀನಪಡಿಸಿಕೊಂಡ ದೊಡ್ಡ ಕೃಷಿಭೂಮಿಗಳನ್ನು ಫಾರ್ಮ್‌ಹೌಸ್‌ಗಳಾಗಿ ಪರಿವರ್ತಿಸುತ್ತಾರೆ,  ಇಲ್ಲವೇ ರೆಸಾರ್ಟ್‌ಗಳು ಅಥವಾ ಮನರಂಜನಾ ಕೇಂದ್ರಗಳಾಗುತ್ತವೆ.

ಖಾಸಗಿಯವರು ಈ ದೇಶದಲ್ಲಿ ತುಂಬಾ ಪ್ರಭಾವಶಾಲಿಗಳಾಗಿದ್ದಾರೆ, ಕೃಷಿ ಭೂಮಿಯನ್ನು ತುಂಬ ಸುಲಭವಾಗಿ ಖರೀದಿಸಿ ನಂತರ ಅದನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲಿದ್ದಾರೆ,  ದೊಡ್ಡ ದೊಡ್ಡ ಕಂಪನಿಗಳು ಹೆಚ್ಚಿನ ಮೊತ್ತದ ಹಣ ನೀಡಿ ಕೃಷಿ ಭೂಮಿಯನ್ನು ಖರೀದಿಸುತ್ತವೆ.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಪ್ರತೀಕಾರದ ರಾಜಕಾರಣ ಮಾಡುತ್ತಿದೆ, ಏರ್ ಇಂಡಿಯಾ, ರೈಲ್ವೆ, ಐಓಸಿ ಮುಂತಾದವುಗಳು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಖಾಸಗೀಕರಣ ಅವುಗಳನ್ನು ಅಭಿವೃದ್ಧಿ ಪಡಿಸಿದ್ದ ಕಾರಣದಿಂದ ಅವುಗಳನ್ನು ಖಾಸಗೀಕರಣಗೊಳಿಸಲಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿದೇಶಿ ನೇರ ಬಂಡವಾಳ ವಿರೋಧಿಸುತ್ತಾರೆ, ಹಾಗೂ ವಿದೇಶಿ ಕಂಪನಿಗಳಿಗೆ ಕಾಂಗ್ರೆಸ್ ಸರ್ಕಾರ ದೇಶವನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸುತ್ತಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

Stay up to date on all the latest ರಾಜ್ಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp