ಪಾದಚಾರಿಗಳಿಗೆ ಗುದ್ದಿದ ಗೂಡ್ಸ್ ಆಟೋ: ಭೀಕರ ಅಪಘಾತದಲ್ಲಿ ಯುವತಿ ಸಾವು

ಕೊಳ್ಳೇಗಾಲ ಪಟ್ಟಣದ ಮುಂಡಿಗುಂಡ ಗ್ರಾಮದ ಕಡೆಗೆ ಕೊಳ್ಳೇಗಾಲದಿಂದ ತೆರಳುತ್ತಿದ್ದ ಗೂಡ್ಸ್ ಆಟೋ ರಸ್ತೆ ಬದಿಯಲ್ಲಿ ಸಂಚರಿಸುತ್ತಿದ್ದ ನಾಲ್ವರು ಪಾದಚಾರಿ ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

Published: 30th September 2020 05:03 PM  |   Last Updated: 30th September 2020 05:24 PM   |  A+A-


For representation purpose only

ಸಂಗ್ರಹ ಚಿತ್ರ

Posted By : Vishwanath S
Source : RC Network

ಕೊಳ್ಳೇಗಾಲ: ಪಟ್ಟಣದ ಮುಂಡಿಗುಂಡ ಗ್ರಾಮದ ಕಡೆಗೆ ಕೊಳ್ಳೇಗಾಲದಿಂದ ತೆರಳುತ್ತಿದ್ದ ಗೂಡ್ಸ್ ಆಟೋ ರಸ್ತೆ ಬದಿಯಲ್ಲಿ ಸಂಚರಿಸುತ್ತಿದ್ದ ನಾಲ್ವರು ಪಾದಚಾರಿ ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

ಪಟ್ಟಣದ ಮುಡಿಗುಂಡ ಗ್ರಾಮದವರಾದ ನಿವೇದಿತಾ(38), ಪವಿತ್ರ(36), ರಕ್ಷಿತಾ(12), ಪವಿತ್ರ(21) ಅಪಘಾತಕ್ಕೊಳಗಾದವರು. ಈ ನಾಲ್ವರ ಪೈಕಿ ಯುವತಿ ಪವಿತ್ರ (21)ಮೃತಪಟ್ಟಿದ್ದಾಳೆ. 

ಇಲ್ಲಿನ ಮುಡಿಗುಂಡ ಗ್ರಾಮದಲ್ಲಿರುವ ಮುಳ್ಳಾಚ್ಚಮ್ಮ ದೇವಾಲಯಕ್ಕೆ ಪೂಜೆಗೆಂದು ತೆರಳುತ್ತಿದ್ದ ನಿವೇದಿತಾ, ಪವಿತ್ರ, ರಕ್ಷಿತಾ, ಪವಿತ್ರ(21) ಎಂಬುವರು ಪಾದಚಾರಿ ಮಾರ್ಗದಲ್ಲಿ ಹೋಗುತ್ತಿದ್ದರು. ಈ ವೇಳೆ ಕೊಳ್ಳೇಗಾಲದ ಕಡೆಯಿಂದ ಬಂದ ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ನಾಲ್ವರಿಗೂ ತೀವ್ರ ಪೆಟ್ಟಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಪವಿತ್ರ(21) ಅಸುನೀಗಿದ್ದಾಳೆ. 

ಉಳಿದ ಮೂವರ‌ ಪರಿಸ್ಥಿತಿ ಗಭೀರವಾಗಿದ್ದು, ಜೆಎಸ್ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ. 

ವರದಿ: ಗುಳಿಪುರ ನಂದೀಶ

Stay up to date on all the latest ರಾಜ್ಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp