ಪ್ರಸನ್ನ
ಪ್ರಸನ್ನ

ಬೆಂಗಳೂರು: ಗ್ರಾಮ ಸೇವಾ ಸಂಘದಿಂದ ಗ್ರಾಮೀಣ ಕೈಮಗ್ಗ ಉತ್ಪನ್ನಗಳ ಪ್ರದರ್ಶನ

'ಗ್ರಾಮೋದ್ಯೋಗ ಉಳಿಸಿ' ಆಂದೋಲನದ ಭಾಗವಾಗಿ ಗ್ರಾಮ ಸೇವಾ ಸಂಘವು ಗುರುವಾರದಿಂದ (ಅ.1) ಭಾನುವಾರದವರೆಗೆ (ಅ.4) ನಗರದ ವಿವಿಧೆಡೆ ಗ್ರಾಮೀಣ ಕೈಮಗ್ಗ ಉತ್ಪನ್ನಗಳ ಪ್ರದರ್ಶನವನ್ನು ಆಯೋಜಿಸಿದೆ.

ಬೆಂಗಳೂರು: 'ಗ್ರಾಮೋದ್ಯೋಗ ಉಳಿಸಿ' ಆಂದೋಲನದ ಭಾಗವಾಗಿ ಗ್ರಾಮ ಸೇವಾ ಸಂಘವು ಗುರುವಾರದಿಂದ (ಅ.1) ಭಾನುವಾರದವರೆಗೆ (ಅ.4) ನಗರದ ವಿವಿಧೆಡೆ ಗ್ರಾಮೀಣ ಕೈಮಗ್ಗ ಉತ್ಪನ್ನಗಳ ಪ್ರದರ್ಶನವನ್ನು ಆಯೋಜಿಸಿದೆ. 

‘ಗ್ರಾಮೀಣ ಕೈಮಗ್ಗ ಉತ್ಪನ್ನಗಳ ಮೊದಲ ಪ್ರದರ್ಶನವು ಗಾಂಧಿ ಭವನದಲ್ಲಿ ನಾಲ್ಕೂ ದಿನಗಳು ನಡೆಯಲಿವೆ. ಎರಡನೇ ಪ್ರದರ್ಶನವು ಕೆಂಗೇರಿ ಉಪನಗರದ ಹೊಯ್ಸಳ ವೃತ್ತದ ಬಳಿ ನಿರ್ಮಾಣವಾಗಿರುವ ಕರಸ್ಥಲ ಆವರಣದಲ್ಲಿ ಅ.2ರಿಂದ ಆರಂಭವಾಗಲಿದೆ.

ಮೂರನೇ ಪ್ರದರ್ಶನವು ಅ.4ರಂದು ರಾಗಿಕಣದಲ್ಲಿ ನಡೆಯಲಿದೆ. ಉತ್ಪನ್ನಗಳ ಪ್ರದರ್ಶನದ ಜತೆಗೆ ಗ್ರಾಮೋದ್ಯೋಗ ಕುರಿತು ಚರ್ಚಾಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಇರಲಿದೆ ಎಂದು ರಂಗಕರ್ಮಿ ಪ್ರಸನ್ನ ತಿಳಿಸಿದ್ದಾರೆ.

‘ವಸ್ತ್ರ ವಿನ್ಯಾಸಕಾರರು, ಕುಶಲಕರ್ಮಿಗಳು, ಆರ್ಥಿಕ ತಜ್ಞರು ಆಂದೋಲನದ ಭಾಗವಾಗಿದ್ದಾರೆ. ಅವರು ಕೂಡ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಜನತೆಯೇ ರಾಜ್ಯದಾದ್ಯಂತ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಿದ್ದಾರೆ.

'ಗ್ರಾಹಕನಾಗಿ ಒಳಗೆ ಬಾ, ಗ್ರಾಮೋದ್ಯೋಗ ಕಾರ್ಯಕರ್ತನಾಗಿ ಹೊರಬಾ' ಘೋಷವಾಕ್ಯದ ಮೂಲಕ ಗ್ರಾಹಕರನ್ನು ಖಾದಿಯತ್ತ
ಆಕರ್ಷಿಸಲಿದ್ದೇವೆ. ಕೋವಿಡ್‌ನಿಂದ ಗ್ರಾಮೋದ್ಯೋಗಗಳು ಅವನತಿಯ ಅಂಚು ತಲುಪಿವೆ. ಗ್ರಾಮೀಣ ಭಾಗದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದು ಅನಿವಾರ್ಯವಾಗಿದೆ ಎಂದು ಗ್ರಾಮ ಸೇವಾ ಸಂಚಾಲಕ ಎ ಅಭಿಲಾಷ್ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com