ಸರ್ಕಾರದಿಂದ ಮೇಜರ್ ಸರ್ಜರಿ: 16 ಐಎಎಸ್ ಅಧಿಕಾರಿಗಳ ವರ್ಗಾವಣೆ, ಕುಮಾರ್ ನಾಯಕ್ ಗೆ ಇಂಧನ ಇಲಾಖೆ 

ಕಳೆದ ಫೆಬ್ರವರಿ ನಂತರ ರಾಜ್ಯ ಸರ್ಕಾರ ಮತ್ತೊಮ್ಮೆ 16 ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿದೆ.

Published: 01st April 2021 09:58 AM  |   Last Updated: 01st April 2021 09:58 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : The New Indian Express

ಬೆಂಗಳೂರು: ಕಳೆದ ಫೆಬ್ರವರಿ ನಂತರ ರಾಜ್ಯ ಸರ್ಕಾರ ಮತ್ತೊಮ್ಮೆ 16 ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿದೆ.

ಬೇಸಿಗೆಯಲ್ಲಿ ವಿದ್ಯುತ್ ಅಭಾವದ ಸಮಸ್ಯೆಯನ್ನು ನೀಗಿಸುವ ಕೆಲಸಕ್ಕಾಗಿ ಐಎಎಸ್ ಅಧಿಕಾರಿ ಕುಮಾರ್ ನಾಯಕ್ ಅವರನ್ನು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿ ಸರ್ಕಾರ ನೇಮಿಸಿದೆ. ಈ ಹಿಂದೆ ಕುಮಾರ್ ನಾಯಕ್ ಅವರು ಕರ್ನಾಟಕ ವಿದ್ಯುತ್ ನಿಗಮ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಬೆಸ್ಕಾಂಗಳಲ್ಲಿ ಹಲವು ಹುದ್ದೆಗಳನ್ನು ವಹಿಸಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದಾರೆ. 1600 ಮೆಗಾ ವ್ಯಾಟ್ ಯೆರಮರುಸ್ ವಿದ್ಯುತ್ ಘಟಕ ಮತ್ತು ಯಲಹಂಕ ಅನಿಲ ಇಂಧನ ಘಟಕವನ್ನು ಕುಮಾರ್ ನಾಯಕ್ ಅವರು ಕೆಪಿಸಿಎಲ್ ನಲ್ಲಿದ್ದಾಗ ಕುಮಾರ್ ನಾಯಕ್ ಆರಂಭಿಸಿದ್ದರು.

ಸರ್ಕಾರದ ಅಧಿಸೂಚನೆ ಪ್ರಕಾರ, ಕರ್ನಾಟಕದ ನೂತನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅವರನ್ನು ನೇಮಿಸಲಾಗಿದೆ. ರಾಜೀವ್  ಚಾವ್ಲಾ ಅವರನ್ನು ನೂತನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ (ಡಿಪಿಎಆರ್ - ಆಡಳಿತ ಸುಧಾರಣೆಗಳು) ನೇಮಕ ಮಾಡಿದ್ದರೆ, ರಾಕೇಶ್ ಸಿಂಗ್ ಅವರನ್ನು ಬಿಬಿಎಂಪಿ ಆಡಳಿತಾಧಿಕಾರಿಯಾಗಿ ವರ್ಗಾಯಿಸಲಾಗಿದೆ. ಗೌರವ್ ಗುಪ್ತಾ ಅವರಿಗೆ ಹೊಸದಾಗಿ ರಚಿಸಲಾದ ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಯನ್ನು ನೀಡಲಾಗಿದೆ. ಬಿಬಿಎಂಪಿ ಆಯುಕ್ತರಾಗಿದ್ದ ಮಂಜುನಾಥ ಪ್ರಸಾದ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ (ಕಂದಾಯ ಇಲಾಖೆ) ವರ್ಗಾಯಿಸಲಾಗಿದೆ.

ಕಪಿಲ್ ಮೋಹನ್ ಅವರನ್ನು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ನೂತನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಇತ್ತೀಚೆಗೆ ಆರೋಗ್ಯ ಇಲಾಖೆಯಿಂದ ವರ್ಗಾವಣೆಯಾದ ಪಂಕಜ್ ಕುಮಾರ್ ಪಾಂಡೆ ಅವರಿಗೆ ಪ್ರವಾಸೋದ್ಯಮದ ಜೊತೆಗೆ ವಾಣಿಜ್ಯ ಮತ್ತು ಕೈಗಾರಿಕೆಗಳು ಮತ್ತು ಗಣಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯನ್ನು ನೀಡಲಾಗಿದೆ. ವಿ ಪೊನ್ನುರಾಜ್ ಅವರನ್ನು ಡಿಪಿಎಆರ್ (ಇ-ಆಡಳಿತ) ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದರೆ, ಸಿಂಧು ಬಿ ರೂಪೇಶ್ ಅವರನ್ನು ನೂತನ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರನ್ನಾಗಿ ಮಾಡಲಾಗಿದೆ.

ಎಸ್ ಹೊನ್ನಂಬಾ (ನಿರ್ದೇಶಕ, ಗಣಿ ಮತ್ತು ಭೂವಿಜ್ಞಾನ), ಬಿ.ಆರ್.ಮಮತಾ (ಹೆಚ್ಚುವರಿ ಸಕಾಲ ಇಲಾಖೆಯ ಮಿಷನ್ ನಿರ್ದೇಶಕಿ), ಎಚ್.ಎನ್. ಗೋಪಾಲ ಕೃಷ್ಣ (ಮೂಲಸೌಕರ್ಯ ಅಭಿವೃದ್ಧಿ ನಿಗಮ), ವಿದ್ಯಾಕುಮಾರಿ (ಸಿಇಒ, ತುಮಕೂರು) ಮತ್ತು ಜಯ ವಿಭವಸ್ವಾಮಿ (ಕಾರ್ಯದರ್ಶಿ, ಮಲೈ ಮಹಾದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಚಾಮರಾಜನಗರ) ಇಲ್ಲಿಗೆ ವರ್ಗಾಯಿಸಲಾಗಿದೆ.


Stay up to date on all the latest ರಾಜ್ಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp