ಚೀನಾ ತಯಾರಿಕೆಯ 'ಸಿನೊಫಾರ್ಮ್' ಕೋವಿಡ್-19 ಲಸಿಕೆ ಪಡೆದ ವ್ಯಕ್ತಿಗೆ ಪಾಸಿಟಿವ್!

ಚೀನಾ ದೇಶ ತಯಾರಿಸಿದ್ದ ಸಿನೊಫಾರ್ಮ್ ಕೋವಿಡ್-19 ಲಸಿಕೆ ಪಡೆದ  ವ್ಯಕ್ತಿಯೊಬ್ಬರಿಗೆ ಬೆಂಗಳೂರಿನಲ್ಲಿ ಪಾಸಿಟಿವ್ ದೃಢಪಟ್ಟಿದೆ.

Published: 02nd April 2021 01:12 PM  |   Last Updated: 02nd April 2021 01:22 PM   |  A+A-


Casual_Photo1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ಬೆಂಗಳೂರು: ಚೀನಾ ದೇಶ ತಯಾರಿಸಿದ್ದ ಸಿನೊಫಾರ್ಮ್ ಕೋವಿಡ್-19 ಲಸಿಕೆ ಪಡೆದ  ವ್ಯಕ್ತಿಯೊಬ್ಬರಿಗೆ ಬೆಂಗಳೂರಿನಲ್ಲಿ ಪಾಸಿಟಿವ್ ದೃಢಪಟ್ಟಿದೆ.

ದುಬೈನಲ್ಲಿ ಸೆಲ್ಸ್  ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ 44 ವರ್ಷದ ವ್ಯಕ್ತಿಯೊಬ್ಬರು, ಅಲ್ಲಿದ್ದಾಗ ಚೀನಾ ದೇಶ ಅಭಿವೃದ್ಧಿಪಡಿಸಿದ್ದ ಸಿನೊಫಾರ್ಮ್ ಕೋವಿಡ್- ಲಸಿಕೆಯ ಎರಡು ಡೋಸ್  ಪಡೆದುಕೊಂಡಿದ್ದರು. ಆದರೆ, ಈ ವಾರ ಬೆಂಗಳೂರಿಗೆ ವಾಪಸ್ಸಾದ ನಂತರ ಅವರಿಗೆ ಪಾಸಿಟಿವ್ ದೃಢಪಟ್ಟಿದೆ.

ಜನವರಿ 31ರಂದು ಮೊದಲ ಡೋಸ್ ಪಡೆದಿದ್ದು, ಫೆಬ್ರವರಿ 25ರಲ್ಲಿ ವಿದೇಶದಲ್ಲಿಯೇ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ತನ್ನ ಕುಟುಂಬಸ್ಥರನ್ನು ಭೇಟಿಯಾಗಲು ಗುವಾಹಟಿಗೆ ಬಂದಿದ್ದಾರೆ. ನಂತರ ದುಬೈಗೆ ಮತ್ತೆ ತೆರಳಲು ಆರ್ ಟಿ-ಪಿಸಿಆರ್ ಪರೀಕ್ಷೆ ನಡೆಸಿದ್ದು, ನೆಗೆಟಿವ್ ವರದಿ ಬಂದಿದೆ. ಆದಾಗ್ಯೂ, ದುಬೈ ಸರ್ಕಾರದ ನೀಡಿರುವ ಅನುಮತಿಯನ್ನು ಏರ್ ಲೈನ್ಸ್ ಕೇಳಿದ್ದು, ಅದು ಆತನ ಬಳಿ ಇಲ್ಲದಿದ್ದರಿಂದ ಮಾರ್ಚ್ 27 ರಂದು ವಿಮಾನ ಮಿಸ್ ಆಗಿದೆ. 

ಬೆಂಗಳೂರಿನಲ್ಲಿರುವ ಅವರ ಸಂಬಂಧಿಕರು ದುಬೈ ಸರ್ಕಾರದಿಂದ ಯಾವುದೇ ಅನುಮೋದನೆ ಪಡೆಯದೆ ದುಬೈಗೆ ನೇರ ವಿಮಾನ ಸೇವೆ ನಡೆಸುತ್ತಿರುವ ಬೇರೆ ವಿಮಾನಯಾನ ಕಂಪನಿಯನ್ನು ಪತ್ತೆ ಹಚ್ಚಿದ್ದಾರೆ.  ಆದ್ದರಿಂದ ಅವರು ಅದೇ ದಿನ ಇಲ್ಲಿಗೆ ಬಂದಿದ್ದಾರೆ.  ಆರ್ ಟಿ-ಪಿಸಿಆರ್ ಪರೀಕ್ಷೆ ನಡೆದ 72 ಗಂಟೆ ಮುಗಿದಿದ್ದರಿಂದ ಮತ್ತೆ ಮರುಪರಿಶೀಲನೆಗಾಗಿ ಮನೆಯಿಂದ ಸ್ವಾಬ್ ಸಂಗ್ರಹಕ್ಕೆ ಹೇಳಿದಾಗ, ಆಶ್ಚರ್ಯ ಕಾದಿತ್ತು. ಮಾರ್ಚ್ 29 ರಂದು ಅದು ಪಾಸಿಟಿವ್ ಆಗಿತ್ತು.  ತಾಪಮಾನ ಅಥವಾ ಆಮ್ಲಜನಕ ಪ್ರಮಾಣದಲ್ಲಿ ಇಳಿಕೆಯಂತಹ ಯಾವುದೇ ರೋಗ ಲಕ್ಷಣವಿರಲಿಲ್ಲ ಎಂದು ಅವರ ಸಂಬಂಧಿಕರು ಹೇಳಿದರು.

ಮಾರ್ಚ್ 30ರಂದು ಎರಡನೇ ಬಾರಿಗೆ ಆರ್ ಟಿ- ಪಿಸಿಆರ್ ಪರೀಕ್ಷೆ ಮಾಡಿಸಿದಾಗಲೂ ಪಾಸಿಟಿವ್ ಬಂದಿದೆ. ಬಿಬಿಎಂಪಿ ನಿಯಮದಂತೆ ಅವರನ್ನು ಪ್ರತ್ಯೇಕ ಮನೆಯಲ್ಲಿ ಐಸೋಲೇಷನ್ ನಲ್ಲಿ ಇರಿಸಲಾಗಿದೆ. ಆತ ಇನ್ನೂ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಯಾವುದೇ ರೋಗ ಲಕ್ಷಣ ಇಲ್ಲದಿರುವುದರಿಂದ ಯಾವುದೇ ಚಿಕಿತ್ಸೆ ನೀಡುತ್ತಿಲ್ಲ. ಕೋವಿಡ್ ಶಿಷ್ಟಚಾರವನ್ನು ಪಾಲಿಸಲಾಗುತ್ತಿದೆ ಎಂದು ಆತನ ಸಂಬಂಧಿಕರು ತಿಳಿಸಿದ್ದಾರೆ.

ಡಿಸೆಂಬರ್ 9, 2020 ರಂದು ಸಿನೋಫಾರ್ಮ್ ಲಸಿಕೆಯನ್ನು ಅನುಮೋದಿಸಿದ ಯುನೈಟೆಡ್ ಅರಬ್ ಎಮಿರೇಟ್ಸ್ ಲಸಿಕೆ ಶೇ. 86 ರಷ್ಟು ಪರಿಣಾಮಕಾರಿ ಎಂದು ಹೇಳಿದೆ, ಲಸಿಕೆಯ ಮೂರು ಹಂತದ ಪ್ರಯೋಗಗಳು ಶೇ. 79 ರಷ್ಟು ಪರಿಣಾಮಕಾರಿತ್ವವನ್ನು ಹೊಂದಿವೆ ಎಂದು ಸಿನೋಫಾರ್ಮ್ ಡಿಸೆಂಬರ್ 30, 2020 ರಂದು ಘೋಷಿಸಿತು. 

 ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅಧ್ಯಕ್ಷ ಡಾ. ಆರಿಫ್ ಅಲ್ವಿ ಇಬ್ಬರೂ ಮಾರ್ಚ್ ನಲ್ಲಿ  ಸಿನೊಫಾರ್ಮ್ ಲಸಿಕೆಯ ಮೊದಲ ಡೋಸ್ ತೆಗೆದುಕೊಂಡಿದ್ದರು. ಆದರೆ,  ಕೆಲವು ದಿನಗಳ ನಂತರ ಅವರಿಬ್ಬರಿಗೂ ಪಾಸಿಟಿವ್ ಬಂದಿತ್ತು. 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp