3 ಬಾರಿ ಕೋವಿಡ್ ಟೆಸ್ಟ್: ಒಮ್ಮೆ ಪಾಸಿಟಿವ್ 2 ಬಾರಿ ನೆಗೆಟಿವ್; ಸಂದಿಗ್ದ ಸ್ಥಿತಿಯಲ್ಲಿ ಬೆಂಗಳೂರಿನ ದಂಪತಿ!
ಕಳೆದ ವಾರ ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಸಹ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಾಗಿನಿಂದ ಬೆಂಗಳೂರಿನ ಈ ದಂಪತಿಗಳು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಲು ನಿರ್ಧರಿಸಿದ್ದರು. ಆದರೆ ಅವರಿಗೀಗ ಕೋವಿಡ್ ಪರೀಕ್ಷೆಗಳ ನಿಖರತೆಯ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ.
Published: 02nd April 2021 04:07 PM | Last Updated: 02nd April 2021 04:10 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕಳೆದ ವಾರ ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಸಹ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಾಗಿನಿಂದ ಬೆಂಗಳೂರಿನ ಈ ದಂಪತಿಗಳು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಲು ನಿರ್ಧರಿಸಿದ್ದರು. ಆದರೆ ಅವರಿಗೀಗ ಕೋವಿಡ್ ಪರೀಕ್ಷೆಗಳ ನಿಖರತೆಯ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ.
ಮಾರ್ಚ್ 23 ರಂದು ಮೂವತ್ತೊಂದು ವರ್ಷದ ವರುಣ್ ಸಲಾರಿಯಾ ಹಾಗೂ ಅವರ ಪತ್ನಿ ಕರಿಷ್ಮಾ (28) ಅಭಯಹಸ್ತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತೆರಳಿ ಸ್ವಯಂ ಘೋಷಣೆ ಅರ್ಜಿ ಸಲ್ಲಿಸಿದ ನಂತರ ತಮ್ಮ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ನೀಡಿದ್ದರು."ನಮಗೆ ಅರ್ಜಿ ಭರ್ತಿ ಮಾಡಲು ಕೇಳಿದಾಗ ನಮಗೆ ಶಂಕೆ ಮೂಡಿತ್ತು. ನಮ್ಮಿಬ್ಬರಿಗೆ ಅವರು ತಲಾ 1200 ರೂ. ಹಣ ಪಡೆದರು ಮತ್ತು ಮರುದಿನ ವರದಿಯು ಪಾಸಿಟಿವ್ ಎಂದು ಬಂದಿತು. ನಾವು ವಯಸ್ಸಾದ ಪೋಷಕರೊಂದಿಗೆ ವಾಸಿಸುತ್ತಿದ್ದದ್ದಲ್ಲದೆ ಇಪ್ಪತ್ತು ತಿಂಗಳ ಮಗುವೂ ಇದೆ. " ಸಲಾರಿಯಾ ಪತ್ರಿಕೆಗೆ ತಿಳಿಸಿದ್ದಾರೆ. ಅವರು ತಮ್ಮ ಕೊರೋನಾ ವರದಿಯ ಬಗ್ಗೆ ಕಚೇರಿಗೆ ತಿಳಿಸಿದಾಗ ಸಾಮಾಜಿಕ ಕಳಂಕವನ್ನು ಎದುರಿಸಬೇಕಾಯಿತು.
ಅದೇ ಸಂಜೆ ಮತ್ತೊಂದು ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದ ದಂಪತಿಗಳು ಮಣಿಪಾಲ್ ಆಸ್ಪತ್ರೆಗೆ ತೆರಳಿ ಅಲ್ಲಿ ತಲಾ 2900 ರೂ ನೀಡಿ 4-5 ಗಂಟೆಗಳ ಅವಧಿಯಲ್ಲಿ ಫಲಿತಾಂಶ ಬಂದಿದೆ. ಆದರೆ ಈ ಬಾರಿ ಇಬ್ಬರಿಗೂ ನೆಗೆಟಿವ್ ವರದಿ ಬಂದಿತ್ತು!`ಇದರಿಂದ ಇಬ್ಬರಿಗೆ ಇನ್ನಷ್ಟು ಗೊಂದಲ ಕಾಣಿಸಿತು.
ಮರುದಿನ, ಬಿಬಿಎಂಪಿಯಿಂದ ನಿಯೋಜಿಸಲ್ಪಟ್ಟ ಸರ್ಕಾರಿ ಶಿಕ್ಷಕಿ ಎಂದು ಹೇಳಿಕೊಳ್ಳುವ ವ್ಯಕ್ತಿಯು ಅವರಿಗೆ ಕರೆ ಮಾಡಿ ತಮ್ಮ ಮನೆಗೆ ಭೇಟಿ ನೀಡುವುದಾಗಿ ತಿಳಿಸಿದರು. ಅವರ "ಕೋವಿಡ್ ನೆಗೆಟಿವ್" ವರದಿ ಬಗ್ಗೆ ಅವರು ಆಕೆಗೆ ಹೇಳಿದಾಗ ಆಕೆ ಅವರು ತಮ್ಮ ಸೋಂಕನ್ನು ಮರೆಮಾಡಿದ್ದಾರೆ ಎಂದು ಆರೋಪಿಸಿದ್ದಳು. "ಶಿಕ್ಷಕಿ ನಮ್ಮ ಮನೆಗೆ ಬಂದಿದ್ದು ಮಾತ್ರವಲ್ಲ ನೆಗೆಟಿವ್ ವರದಿಯ ಫಿಸಿಕಲ್ ಕಾಪಿ ತೋರಿಸುವಂತೆ ಒತ್ತಾಯಿಸಿದ್ದಾರೆ. ನಾವು ಸಾಫ್ಟ್ ಕಾಪಿಯನ್ನು ತೋರಿಸಿದ ನಂತರ ಆಕೆಗೆ ಅರಿವಾಯಿತು. ಮತ್ತು ಆಕೆ ನಮ್ಮ ಅಪಾರ್ಟ್ ಮೆಂಟಿನಿಂದ ಹೊರ ನಡೆದರು" ಎಂದು ವರುಣ್ ಹೇಳಿದರು.
ಅದೇ ಸಂಜೆ ದಂಪತಿಗಳು ಮತ್ತೆ ಅಭಯಹಸ್ತ ಆಸ್ಪತ್ರೆಗೆ ಆಗಮಿಸಿದ್ದಾರೆ., ಅಲ್ಲಿ ಆಸ್ಪತ್ರೆಯು ಅದೇ ಮಾದರಿಯಲ್ಲಿ ಮತ್ತೊಂದು ಪರೀಕ್ಷೆಯನ್ನು ನಡೆಸುವುದಾಗಿ ತಿಳಿಸಿತು. ಅವರು ಇನ್ನೂ ಆಸ್ಪತ್ರೆಯಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಎರಡು ದಿನಗಳ ನಂತರ ಮಾರ್ಚ್ 26 ರಂದು ವರುಣ್ ಮೂರನೇ ಬಾರಿಗೆ ಪರೀಕ್ಷೆಗೆ ಒಳಗಾಗಲು ಚಿನ್ಮಯ ಮಿಷನ್ ಆಸ್ಪತ್ರೆಗೆ ಹೋದರು. ಇಲ್ಲಿ ವೈದ್ಯರ ಸಮಾಲೋಚನೆಗಾಗಿ 300 ರೂ. ಮತ್ತು ಪರೀಕ್ಷೆಗೆ 700 ರೂ ಪಡೆಯಲಾಗಿದೆ. ಮೂರನೇ ಪರೀಕ್ಷೆಯ ಫಲಿತಾಂಶವು ನೆಗೆಟಿವ್ ಬಂದಿದ್ದು ಸಲಾರಿಯಾ ದಂಪತಿಗಳಲ್ಲಿ ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ಈ ಕಹಿ ಅನುಭವಗಳು ಆಸ್ಪತ್ರೆಗಳು ಮತ್ತು ಸರ್ಕಾರದಲ್ಲಿ ಅಪನಂಬಿಕೆಗೆ ಕಾರಣವಾಗಿವೆ ಮತ್ತು ಸುಳ್ಳು ಪಾಸಿಟಿವ್ ವರದಿಗಳು ಅವರನ್ನು ಅಪಾರ ಪ್ರಮಾಣದ ಒತ್ತಡಕ್ಕೆ ಒಳಪಡಿಸಿದೆ ಎಂದು ವರುಣ್ ಹೇಳುತ್ತಾರೆ. "ನೆಗೆಟಿವ್ ವರದಿಯನ್ನು ನಿಜವಾಗಿ ಸೋಂಕಿಗೆ ಒಳಗಾದವರಿಗೆ ನೀಡಿದ್ದಾದರೆ ಅದು ಮತ್ತಷ್ಟು ಅಪಾಯಕ್ಕೆ ಎಡೆ ಮಾಡಿಕೊಡಲಿದೆ."
ಕೊರೋನಾವೈರಸ್ ರೋಗಿಗಳಿಗೆ ಕಿರುಕುಳ ನೀಡಲು ಆಸ್ಪತ್ರೆಗಳು ಕೋವಿಡ್ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದೆಯೆ ಅಥವಾ ಬಿಬಿಎಂಪಿ ಮತ್ತು ಆಸ್ಪತ್ರೆಗಳ ನಡುವೆ ಕೆಟ್ಟ ಸಂಬಂಧವಿದೆಯೇ ಎಂದು ತಿಳಿಯಲು ಕುಟುಂಬವು ಆಗ್ರಹಿಸಿದೆ.
ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಅಭಯಹಸ್ತ ಅಧ್ಯಕ್ಷ ಡಾ.ಅಶೋಕ್ ಅವರೊಂದಿಗೆ ಮಾತನಾಡಿದ್ದು, ಅಲ್ಲಿ ದಂಪತಿಗಳು ಮೊದಲ ಬಾರಿಗೆ ಪರೀಕ್ಷೆಗೆ ಒಳಗಾಗಿದ್ದರು. ಆರ್ಟಿ-ಪಿಸಿಆರ್ ನಲ್ಲಿ ಸುಳ್ಳು ನೆಗೆಟಿವ್ ವರದಿಗಳು ಬರಬಹುದು ಆದರೆ ಸುಳ್ಳು ಪಾಸಿಟಿವ್ ವರದಿ ಸಾಧ್ಯವಿಲ್ಲ ಎನ್ನುತ್ತಾರೆ."ಸೋಂಕಿನ ದಿನಾಂಕದಿಂದ 7 ಮತ್ತು 10 ನೇ ದಿನದ ನಡುವೆ, ವೈರಲ್ ಪ್ರಭಾವ ಹೆಚ್ಚು. ಈ ಅವಧಿಯ ನಡುವೆ ವ್ಯಕ್ತಿಯು ಪರೀಕ್ಷೆಗೆ ಒಳಗಾಗುವುದನ್ನು ತಪ್ಪಿಸಿದರೆ, ವೈರಸ್ ಪತ್ತೆಯಾಗದ ಮತ್ತು ಇತರ ಪರೀಕ್ಷೆಗಳಲ್ಲಿ ನೆಗೆಟಿವ್ ವರದಿ ಪಡೆಯುವ ಅಪರೂಪದ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ , ವ್ಯಕ್ತಿಯನ್ನು ಪಾಸಿಟಿವ್ ಎಂದು ಪರಿಗಣಿಸಬೇಕು ಮತ್ತು ಮನೆಯಲ್ಲಿ ವಯಸ್ಸಾದವರಿಂದ ಅಂತರ ಕಾಪಾಡಿಕೊಳ್ಳಬೇಕು "ಎಂದು ವೈದ್ಯರು ಹೇಳಿದ್ದಾರೆ.
ಯಂತ್ರದಲ್ಲಿ ಪಾಸಿಟಿವ್ ವರದಿಯನ್ನು ದಾಖಲಿಸಲಾಗಿದೆ, ವರುಣ್ ಮತ್ತು ಅವರ ಪತ್ನಿ ವಿಷಯದಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಹೇಳಿದರು. ಸುಳ್ಳು ನೆಗೆಟಿವ್ ಪ್ರಕರಣಗಳೊಂದಿಗೆ, ವ್ಯಕ್ತಿಯ ಕೋವಿಡ್ ಪಾಸಿಟಿವ್ ಪ್ರಕರಣವನ್ನು ದೃಢೀಕರಿಸಲು ಸಿಟಿ ಸ್ಕ್ಯಾನ್ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್ ಅಂಡ್ ರಿಸರ್ಚ್ ನಿರ್ದೇಶಕ ಮತ್ತು ಕರ್ನಾಟಕದಲ್ಲಿ ಕೋವಿಡ್ -19 ಪರೀಕ್ಷೆಯ ನೋಡಲ್ ಅಧಿಕಾರಿ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಪಾಸಿಟಿವ್ ವರದಿಯು ಲ್ಯಾಬ್ ದೋಷವಾಗಿರಬಹುದು. "ಒಂದೋ ಪಾಸಿಟಿವ್ ರದಿಯನ್ನು ತಪ್ಪಾದ ಹೆಸರಿನೊಂದಿಗೆ ಲ್ಯಾಬ್ ತಂತ್ರಜ್ಞರ ಕಡೆಯಿಂದ ಪಡೆಯಬಹುದು ಫಲಿತಾಂಶವನ್ನು ತಪ್ಪಾಗಿ ನೆಗೆಟಿವ್ ಗೆ ಬದಲಾಗಿ ಪಾಸಿಟಿವ್ ಎಂದು ಅಪ್ಲೋಡ್ ಮಾಡಲಾಗಿದೆ. 48 ಗಂಟೆಗಳ ಅವಧಿಯಲ್ಲಿ ಇತರ ಎರಡು ವರದಿಗಳು ನೆಗೆಟಿವ್ ಬಂದಿರುವುದರಿಂದ ಇದು ಎಂಟ್ರಿಯಲ್ಲಿನ ದೋಷವಾಗಿದೆ. ತಪ್ಪು ಪಾಸಿಟಿವ್ ಆರ್ಟಿ-ಪಿಸಿಆರ್ ಪರೀಕ್ಷೆಗಳು ನಡೆಯಲು ಸಾಧ್ಯವಿಲ್ಲ "ಎಂದು ಡಾ.ಮಂಜುನಾಥ್ ಅಭಿಪ್ರಾಯಪಟ್ಟರು.