
ಹೆಚ್ ಡಿ ದೇವೇಗೌಡ
ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಮೊನ್ನೆ ಮಾರ್ಚ್ 31ರಂದು ಹೆಚ್ ಡಿ ದೇವೇಗೌಡ ಮತ್ತು ಅವರ ಪತ್ನಿ ಚೆನ್ನಮ್ಮರಿಗೆ ಜ್ವರ, ಉಸಿರಾಟದಲ್ಲಿ ಏರುಪೇರು ಕಂಡುಬಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.
ನಂತರ ವೈದ್ಯರು ಕೊರೋನಾ ಪರೀಕ್ಷೆ ಮಾಡಿ ನೋಡಿದಾಗ ದೇವೇಗೌಡರಿಗೆ ಕೊರೋನಾ ನೆಗೆಟಿವ್ ಮತ್ತು ಅವರ ಪತ್ನಿ ಚೆನ್ನಮ್ಮರಿಗೆ ಕೊರೋನಾ ಪಾಸಿಟಿವ್ ಬಂದಿತ್ತು.
ಇದೀಗ ಇಂದು ಪರೀಕ್ಷೆ ಮಾಡಿದಾಗ ದೇವೇಗೌಡರಿಗೂ ಪಾಸಿಟಿವ್ ಬಂದಿದೆ. ಮಣಿಪಾಲ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.