ಕೊನೆಗೂ ಎಚ್ಚೆತ್ತ ಸಚಿವ ಬಿಸಿ ಪಾಟೀಲ್; ಆಸ್ಪತ್ರೆಯಲ್ಲೇ ಲಸಿಕೆ ಹಾಕಿಸಿಕೊಂಡ 'ಕೌರವ'!

ಮನೆಯಲ್ಲೇ ಕೋವಿಡ್ ಲಸಿಕೆ ಹಾಕಿಸಿಕೊಂಡು ವಿವಾದ ಸೃಷ್ಟಿಸಿ ಆರೋಗ್ಯಾಧಿಕಾರಿಯ ಅಮಾನತಿಗೆ ಕಾರಣವಾಗಿದ್ದ ಸಚಿವ ಬಿಸಿ ಪಾಟೀಲ್ ಕೊನೆಗೂ ಎಚ್ಚೆತ್ತು ಎರಡನೇ ಡೋಸ್ ಕೋವಿಡ್ ಲಸಿಕೆಯನ್ನು ಆಸ್ಪತ್ರೆಗೆ ತೆರಳಿ ಹಾಕಿಸಿಕೊಂಡಿದ್ದಾರೆ.

Published: 02nd April 2021 04:26 PM  |   Last Updated: 02nd April 2021 05:02 PM   |  A+A-


BC Patil takes 2nd dose covid-19 vaccine

ಕೋವಿಡ್ ಲಸಿಕೆ ಪಡೆದ ಬಿಸಿ ಪಾಟೀಲ್

Posted By : Srinivasamurthy VN
Source : Online Desk

ಹಾವೇರಿ: ಮನೆಯಲ್ಲೇ ಕೋವಿಡ್ ಲಸಿಕೆ ಹಾಕಿಸಿಕೊಂಡು ವಿವಾದ ಸೃಷ್ಟಿಸಿ ಆರೋಗ್ಯಾಧಿಕಾರಿಯ ಅಮಾನತಿಗೆ ಕಾರಣವಾಗಿದ್ದ ಸಚಿವ ಬಿಸಿ ಪಾಟೀಲ್ ಕೊನೆಗೂ ಎಚ್ಚೆತ್ತು ಎರಡನೇ ಡೋಸ್ ಕೋವಿಡ್ ಲಸಿಕೆಯನ್ನು ಆಸ್ಪತ್ರೆಗೆ ತೆರಳಿ ಹಾಕಿಸಿಕೊಂಡಿದ್ದಾರೆ.

ಹೌದು..ಹಾವೇರಿ ಜಿಲ್ಲೆ ಹಿರೇಕೆರೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾದ ಎರಡನೇ ಡೋಸ್​ ಲಸಿಕೆಯನ್ನು ಬಿ.ಸಿ.ಪಾಟೀಲ್ ಇಂದು ಪಡೆದಿದ್ದಾರೆ. ಕಳೆದ ಮಾರ್ಚ್ 2 ರಂದು ಬಿ.ಸಿ. ಪಾಟೀಲ್ ಮತ್ತು ಅವರ ಪತ್ನಿ ಆರೋಗ್ಯ ಸಿಬ್ಬಂದಿಯನ್ನು ತಮ್ಮ ಮನೆಗೆ ಕರೆಸಿಕೊಂಡು ಮನೆಯಲ್ಲೇ ಕೊರೊನಾ ಲಸಿಕೆ  ಹಾಕಿಸಿಕೊಂಡಿದ್ದರು. 

ಸಚಿವರ ಈ ನಡೆಗೆ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ನರೇಂದ್ರ ಮೋದಿಯವರೇ ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ ಸಚಿವನಾಗಿ ಬಿ.ಸಿ. ಪಾಟೀಲ್ ಆರೋಗ್ಯ ಸಿಬ್ಬಂದಿಯನ್ನು ಮನೆಗೆ ಕರೆಸಿ ಲಸಿಕೆ ಹಾಕಿಸಿಕೊಂಡಿರುವುದು ಎಷ್ಟರಮಟ್ಟಿಗೆ ಸರಿ ಎಂಬ ಮಾತುಗಳು ತೂರಿ ಬಂದಿದ್ದವು. ಇದಕ್ಕೆ  ಪ್ರತಿಕ್ರಿಯಿಸಿದ್ದ ಸಚಿವ ಬಿಸಿ ಪಾಟೀಲ್ ಕಾರಣಾಂತರಗಳಿಂದ ಹೋಗಲಾಗಲಿಲ್ಲ. ಹೀಗಾಗಿ ಮನೆಯಲ್ಲಿ ಹಾಕಿಸಿಕೊಂಡೆ ಎಂದು ಸಮರ್ಥನೆ ನೀಡಿದ್ದರು. 

ಆದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಆರೋಗ್ಯ ಇಲಾಖೆ ವರದಿ ಕೇಳಿತ್ತು. ನಿನ್ನೆ ಹಿರೇಕೆರೂರು ಆರೋಗ್ಯಾಧಿಕಾರಿ (ಟಿಹೆಚ್ಒ) ಡಾ. ಝಡ್​. ಆರ್​. ಮಕಾಂದಾರ್ ಅವರನ್ನು ಅಮಾನತು ಮಾಡಿ ಆರೋಗ್ಯ, ಕುಟುಂಬ ಕಲ್ಯಾಣ‌ ಸೇವೆ ಇಲಾಖೆ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಆದೇಶ ಹೊರಡಿಸಿದ್ದರು.  ಇಂದು ಜಿಲ್ಲಾ ಆರ್‌ಸಿಹೆಚ್ ಡಾ.ಜಯಾನಂದ್‌ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್‌ ನೋಟಿಸ್ ಜಾರಿ ಮಾಡಿದ್ದರು. 
 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp