ಕರ್ನಾಟಕ-ಕೇರಳ ಗಡಿಯಲ್ಲಿ ಪ್ರಯಾಣಕ್ಕೆ ಯಾವುದೇ ನಿರ್ಬಂಧವಿಲ್ಲ: ಹೈಕೋರ್ಟ್ ಗೆ ಸರ್ಕಾರದ ಭರವಸೆ
ಕೇರಳ- ಕರ್ನಾಟಕ ಗಡಿಯಾದ್ಯಂತ ವಾಹನ ಹಾಗೂ ಜನರ ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದು ರಾಜ್ಯಸರ್ಕಾರದ ಭರವಸೆಯ ಹೇಳಿಕೆ ಮೇರೆಗೆ ,ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೇರಿದ್ದ ನಿರ್ಬಂಧವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸರ್ಜಿ ಅರ್ಜಿಯೊಂದನ್ನು ಹೈಕೋರ್ಟ್ ಗುರುವಾರ ಇತ್ಯರ್ಥಪಡಿಸಿದೆ.
Published: 02nd April 2021 11:18 AM | Last Updated: 02nd April 2021 01:18 PM | A+A A-

ಹೈಕೋರ್ಟ್
ಬೆಂಗಳೂರು: ಕೇರಳ- ಕರ್ನಾಟಕ ಗಡಿಯಾದ್ಯಂತ ವಾಹನ ಹಾಗೂ ಜನರ ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ ಎಂದು ರಾಜ್ಯಸರ್ಕಾರದ ಭರವಸೆಯ ಹೇಳಿಕೆ ಮೇರೆಗೆ ,ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೇರಿದ್ದ ನಿರ್ಬಂಧವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸರ್ಜಿ ಅರ್ಜಿಯೊಂದನ್ನು ಹೈಕೋರ್ಟ್ ಗುರುವಾರ ಇತ್ಯರ್ಥಪಡಿಸಿದೆ.
ಕೇರಳದ ಕಾಸರಗೋಡು ಜಿಲ್ಲೆಯ ಬಿ ಸುಬ್ಬಯಾ ರೈ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರನ್ನೊಗೊಂಡ ವಿಭಾಗೀಯ ಪೀಠ ಈ ಆದೇಶವನ್ನು ಅಂಗೀಕರಿಸಿತು.
ಜಿಲ್ಲಾಧಿಕಾರಿ ಫೆಬ್ರವರಿ 18 ರಂದು ನಾಲ್ಕು ಪ್ರವೇಶದ ಸ್ಥಳಗಳನ್ನು ಹೊರತುಪಡಿಸಿ ಗಡಿಯುದ್ದಕ್ಕೂ ಸಂಚಾರವನ್ನು ನಿರ್ಬಂಧಿಸಿದ್ದರು. ಕೇರಳದಿಂದ ಕೋವಿಡ್-19 ಹರಡುವಿಕೆ ತಡೆಗಟ್ಟುವಿಕೆ ನಿಟ್ಟಿನಲ್ಲಿ ಕೆಲ ಪ್ರವೇಶ ಸ್ಥಳಗಳನ್ನು ಮುಚ್ಚಲು ಗ್ರಾಮ ಪಂಚಾಯತ್, ಪುರಸಭೆಗಳು ಮತ್ತು ನಗರ ಸ್ಥಳೀಯ ಆಡಳಿತಗಳಿಗೆ ಜಿಲ್ಲಾಧಿಕಾರಿ ಅಧಿಕಾರವನ್ನು ನೀಡಿದ್ದರು.
ಡಿಸಿ ಆದೇಶವನ್ನು ಉಲ್ಲೇಖಿಸಿದ ನ್ಯಾಯಾಲಯ, ಜನ ಹಾಗೂ ವಾಹನಗಳ ಸಂಚಾರಕ್ಕೆ ರಾಜ್ಯದ ಒಳಗಡೆ ಅಥವಾ ಹೊರಗಡೆ ಯಾವುದೇ ನಿರ್ಬಂಧ ವಿಧಿಸಬಾರದು ಎಂದು ವಿಪತ್ತು ನಿರ್ವಹಣಾ ಕಾಯ್ದೆಯಡಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಹೇಳುವುದನ್ನು ಪರಿಗಣಿಸಿತು.
ಗಡಿಯನ್ನು ಮುಚ್ಚುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸುವ ಯಾವುದೇ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ. ಗಡಿಯುದ್ದಕ್ಕೂ ಪ್ರಯಾಣಕ್ಕೆ ನಿರ್ಬಂಧ ಹೇರುವ ನಿರ್ದೇಶನಗಳನ್ನು ನೀಡುವುದು ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿತು.