ಕಣ್ಣು ಕಳೆದು ಕೊಂಡ 50 ವರ್ಷದ ವ್ಯಕ್ತಿ; ಕೋವಿಡ್-19 ಲಸಿಕೆ ಕಾರಣ ಎಂದ ಕುಟುಂಬಸ್ಥರು

ಕೋವಿಡ್-19 ಲಸಿಕೆ ಪಡೆದ ಕಾರಣದಿಂದ 50 ವರ್ಷದ ವ್ಯಕ್ತಿಯೊಬ್ಬರು ಕಣ್ಣು ಕಳೆದುಕೊಂಡಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

Published: 03rd April 2021 12:22 PM  |   Last Updated: 03rd April 2021 01:42 PM   |  A+A-


Minto Hospital

ಮಿಂಟೋ ಆಸ್ಪತ್ರೆ

Posted By : Srinivasamurthy VN
Source : The New Indian Express

ತುಮಕೂರು: ಕೋವಿಡ್-19 ಲಸಿಕೆ ಪಡೆದ ಕಾರಣದಿಂದ 50 ವರ್ಷದ ವ್ಯಕ್ತಿಯೊಬ್ಬರು ಕಣ್ಣು ಕಳೆದುಕೊಂಡಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ತಿರುಮಣಿಯಲ್ಲಿ 50 ವರ್ಷದ ಅಕ್ಕಲಪ್ಪ ಅವರು ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಮಾರ್ಚ್ 8ರಂದು ಕೋವಿ ಶೀಲ್ಡ್ ಲಸಿಕೆ ಪಡೆದಿದ್ದರು ಲಸಿಕೆ ಪಡೆದ ಎರಡು ದಿನಗಳ ನಂತರ, ಅವರಲ್ಲಿ ಕಣ್ಣಿನ ದೋಷ ಕಂಡುಬಂತು. ಕೆಲವೇ ಗಂಟೆಗಳಲ್ಲಿ ಕಣ್ಣು ಕಾಣದಂತಾಯಿತು. ಈ ಘಟನೆಯಿಂದ ಆಘಾತಕ್ಕೊಳಗಾದ ಕುಟುಂಬ ಪಾವಗಡದ ಖಾಸಗಿ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಗೆ ಕರೆದೊಯ್ದರು.

ಕುಟುಂಬಸ್ಥರೇ ತಿಳಿಸಿರುವಂತೆ ಅಕ್ಕಲಪ್ಪ ಅವರಿಗೆ 5-6 ವರ್ಷಗಳಿಂದ ಮಧುಮೇಹ ಸಮಸ್ಯೆ ಇದ್ದು, ಇದಕ್ಕೆ ಅವರು ಔಷಧಿಗಳನ್ನು ಪಡೆಯುತ್ತಿದ್ದರು. ಪ್ರತೀ ಬಾರಿ ತಪಾಸಣೆ ಮಾಡಿದಾಗಲೂ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿತ್ತು. ಅದಾಗ್ಯೂ ಹೀಗೇಕೆ ಆಯಿತು ನಮಗೆ ಅರ್ಥವಾಗುತ್ತಿಲ್ಲ. ಕೋವಿಡ್ ಲಸಿಕೆ ಪಡೆದ ಬಳಿಕವೇ ಅವರಲ್ಲಿ ಈ ಸಮಸ್ಯೆ ಆರಂಭವಾಗಿದೆ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಅಕ್ಕಲಪ್ಪ ಅವರ ಅಳಿಯ ಮುತ್ಯಾಲಪ್ಪ, ಲಸಿಕೆ ಪಡೆದ ಬಳಿಕ ಈ ಸಮಸ್ಯೆಯಾಗಿದ್ದು, ಎರಡನೇ ಡೋಸ್ ಪಡೆಯಲು ಹೆದರಿಕೆಯಾಗತ್ತಿದೆ. ಲಸಿಕೆ ಪಡೆದರೆ ಮತ್ತೊಂದು ಕಣ್ಣಿಗೂ ಹಾನಿಯಾಗತ್ತದೆಯೇನೋ ಎಂದು ಭಯವಾಗುತ್ತಿದೆ. ಈಗ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ ಎಂದು ಅವರು ಕಿಡಿಕಾರಿದ್ದಾರೆ.

ಲಸಿಕೆಯಿಂದಲ್ಲ, ಅತಿಯಾದ ಬಿಪಿಯಿಂದಾಗಿ ಕಣ್ಣಿಗೆ ಹಾನಿ: ವೈದ್ಯರು
ಅಕ್ಕಲಪ್ಪ ಅವರನ್ನು ಪರೀಕ್ಷಿಸಿರುವ ಮಿಂಟೋ ವೈದ್ಯರು ಕಣ್ಣಿನ ಹಾನಿಗೆ ಕಾರಣ ಕೋವಿಡ್ ಲಸಿಕೆಯಲ್ಲ. ಬದಲಿಗೆ ಅವರಲ್ಲಿ ದಿಢೀರ್ ಉಲ್ಬಣವಾದ ಅಧಿಕ ಬಿಪಿಯಿಂದಾಗಿ.. ರಕ್ತದೊತ್ತಡ ಹೆಚ್ಚಾಗಿ ಅವರ ಕಣ್ಣಿಗೆ ಹಾನಿಯಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯರೊಬ್ಬರು, ಅಕ್ಕಲಪ್ಪ ಅವರು ಮಾರ್ಚ್ 12ರಂದು ಆಸ್ಪತ್ರೆಗೆ ಆಗಮಿಸಿದರು. ಅವರನ್ನು ವೈದ್ಯಕೀಯ ತಪಾಸಣೆ ಮಾಡಿದಾಗ ಅವರಲ್ಲಿ ಬೊಜ್ಜಿನ ಪ್ರಮಾಣ, ಸಕ್ಕರೆ ಪ್ರಮಾಣ ಮತ್ತು ಬಿಪಿ ಅಧಿಕವಾಗಿತ್ತು. ಇದು ಅವರ ಎಡಗಣ್ಣಿನ ಮೇಲೆ ಪರಿಣಾಮ ಬೀರಿದ್ದು, central retinal artery occlusion ಸಮಸ್ಯೆಗೆ ಕಾರಣವಾಗಿದೆ. ಬಳಿಕ ಅವರಿಗೆ ದೃಷ್ಟಿ ಮರಳಿಸಲು ಆಕ್ಯುಲರ್ ಮಸಾಜ್ ಸೇರಿದಂತೆ ಎಲ್ಲಾ ತುರ್ತು ಪ್ರೋಟೋಕಾಲ್ಗಳನ್ನು ಅನುಸರಿಸಲಾಯಿತು ಎಂದು ಹೇಳಿದ್ದಾರೆ.

ಬಲಗಣ್ಣಿಗಿಂತಲೂ ಎಡಗಣ್ಣಿನ ಭಾಗದಲ್ಲಿ ಹೆಚ್ಚು ಶೀರ್ಷಧಮನಿಯ ನಿರ್ಬಂಧ ಸಮಸ್ಯೆಗಳಿವೆ, ಇದಕ್ಕೆ ಅವರ ದೇಹದ ಹೆಚ್ಚಾದ ಬೊಜ್ಜಿನ ಮಟ್ಟ ಕೂಡ ಕಾರಣ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡವಿದ್ದು, ಮುಂಜಾಗ್ರತಾ ಕ್ರಮವಾಗಿ ಹೃದ್ರೋಗ ತಜ್ಞರಿಗೆ ವಿವರವಾದ ವ್ಯವಸ್ಥಿತ ಮೌಲ್ಯಮಾಪನಕ್ಕಾಗಿ ಶಿಫಾರಸ್ಸು ಮಾಡಲಾಗಿದೆ ಎಂದು ಮಿಂಟೋ ಆಸ್ಪತ್ರೆಯ ಡಾ ರಾಥೋಡ್ ಹೇಳಿದ್ದಾರೆ. 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp