ರಾಜ್ಯದಲ್ಲಿ ವೈಲ್ಡ್ ಸಫಾರಿ ದರ ಹೆಚ್ಚಳ: ಸಾಮಾನ್ಯ ಜನರ ಆಕ್ರೋಶ, ಸೋಷಿಯಲ್ ಮೀಡಿಯಾಗಳಲ್ಲಿ ಜೋಕ್ಸ್, ಮೀಮ್ಸ್!
ಹುಲಿ ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನ ಮತ್ತು ಅಭಯಾರಣ್ಯಗಳಲ್ಲಿ ವನ್ಯಜೀವಿಗಳ ಸಫಾರಿಗೆ ದರವನ್ನು ಏಕಾಏಕಿ ಹೆಚ್ಚಳ ಮಾಡಿರುವ ಅರಣ್ಯ ಇಲಾಖೆಯ ನಿರ್ಧಾರಕ್ಕೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗಿದೆ.
Published: 03rd April 2021 02:08 PM | Last Updated: 03rd April 2021 02:26 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಹುಲಿ ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನ ಮತ್ತು ಅಭಯಾರಣ್ಯಗಳಲ್ಲಿ ವನ್ಯಜೀವಿಗಳ ಸಫಾರಿಗೆ ದರವನ್ನು ಏಕಾಏಕಿ ಹೆಚ್ಚಳ ಮಾಡಿರುವ ಅರಣ್ಯ ಇಲಾಖೆಯ ನಿರ್ಧಾರಕ್ಕೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್, ಸಂದೇಶ, ಫೋಟೋಗಳು ಮತ್ತು ಜೋಕ್ಸ್ ಗಳು ಹರಿದಾಡುತ್ತಿವೆ. ನಾಗರಹೊಳೆ ಹುಲಿ ಅಭಯಾರಣ್ಯದಲ್ಲಿ ಕಬಿನಿ ಸಾಮಾನ್ಯವಾಗಿ ಶ್ರೀಮಂತ ಮತ್ತು ಸಮಾಜದ ಮೇಲ್ವರ್ಗದವರು ಸಫಾರಿ ನಡೆಸುವ ಜಾಗವಾಗಿದೆ. ಆದರೆ ಇಲ್ಲಿ ಸಫಾರಿಗೆ ದರ ಹೆಚ್ಚಿಸಿದ್ದು ಮೇಲ್ವರ್ಗದವರನ್ನು ಸಹ ಚಿಂತೆಗೀಡು ಮಾಡಿದೆ. ಕಬಿನಿ ಪ್ರವಾಸ ದುಬಾರಿ ಎಂದು ಜನರು ಭಾವಿಸುತ್ತಿದ್ದಾರೆ.
ಬಿಲ್ಲಿಂಗ್ ಕೌಂಟರ್ ನಲ್ಲಿ ಅಂಡರ್ ವೇರ್ ನಲ್ಲಿ ನಿಂತಿರುವ ವ್ಯಕ್ತಿ ಕಬಿನಿಯಲ್ಲಿ ಹಣ ಪಾವತಿ ಮಾಡುವ ಮೀಮ್ ಹರಿದಾಡುತ್ತಿದೆ. ಬಾಲಿವುಡ್ ಸಿನೆಮಾ ಹೆರ ಫೆರಿಯಲ್ಲಿ ಅಕ್ಷಯ್ ಕುಮಾರ್ ಮತ್ತು ಸುನಿಲ್ ಶೆಟ್ಟಿ ಅರಣ್ಯಾಧಿಕಾರಿಯಾಗಿ ತೋರಿಸಿ ಅರೆ ಈ ವ್ಯಕ್ತಿಯಲ್ಲಿ ಎಷ್ಟು ಹಣವಿದೆ ಎಂದು ತೋರಿಸುವ ಮೀಮ್ಸ್ ಹರಿದಾಡುತ್ತಿದೆ.
ನಾಲ್ಕು ವರ್ಷಗಳಿಗೊಮ್ಮೆ ಸಫಾರಿ ದರ ಪರಿಷ್ಕರಿಸಲಾಗುತ್ತದೆ. ಕಳೆದ ಬಾರಿ 2017-18ರಲ್ಲಿ ಪರಿಷ್ಕರಿಸಲಾಗಿತ್ತು. ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಒಂದೇ ರೀತಿಯ ದರವನ್ನು ಹೆಚ್ಚಿಸಲಾಗಿತ್ತು. ಆದರೆ ಈ ಬಾರಿ ಪ್ರತಿ ಅರಣ್ಯ ಪ್ರದೇಶದಲ್ಲಿ ದರ ವಿಭಿನ್ನವಾಗಿದೆ. ಅನಗತ್ಯವಾಗಿ ಫೋಟೋಗ್ರಫಿ, ವಿಡಿಯೊ ಮಾಡುವವರನ್ನು, ಜನದಟ್ಟಣೆಯನ್ನು ತಡೆಯುತ್ತದೆ ಎಂದು ಅರಣ್ಯಾಧಿಕಾರಿಗಳು ದರ ಹೆಚ್ಚಳವನ್ನು ಸಮರ್ಥಿಸಿಕೊಳ್ಳುತ್ತಾರೆ.
ಆದರೆ ಸಾಮಾನ್ಯ ಜನತೆ ಮಾತ್ರ ಹಿಡಿಶಾಪ ಹಾಕುತ್ತಿದ್ದಾರೆ. ನಮ್ಮ ಮಕ್ಕಳಿಗೆ ಫೋಟೋಗಳಲ್ಲಿ ಶ್ರೀಮಂತರು ಸೋಷಿಯಲ್ ಮೀಡಿಯಾಗಳಲ್ಲಿ ಹಾಕಿರುವ ಫೋಟೋಗಳನ್ನು ತೋರಿಸಬೇಕಷ್ಟೆ ಎನ್ನುತ್ತಾರೆ. ತಮ್ಮ ಹೈ ಎಂಡ್ ಲೆನ್ಸ್ ಗಳ ಕ್ಯಾಮರಾಗಳನ್ನು ಮನೆಯಲ್ಲಿಟ್ಟು ಮೊಬೈಲ್ ಫೋನ್ ಗಳನ್ನು ಮಾತ್ರ ಸಫಾರಿಗೆ ತರಬೇಕಷ್ಟೆಯೇನೊ ಎಂದು ಫೋಟೋಗ್ರಾಫರ್ ಗಳು ಸಹ ಅಸಹನೆ ವ್ಯಕ್ತಪಡಿಸುತ್ತಾರೆ.