ಉಡುಪಿ: ಆಡುತ್ತಿದ್ದಾಗ ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದು 2.5 ವರ್ಷದ ಮಗು ಸಾವು!
ದುರಂತ ಘಟನೆಯೂಂದರಲ್ಲಿ ಆಕಸ್ಮಿಕವಾಗಿ ಜಾರಿ ತೆರೆದ ಬಾವಿಗೆ ಬಿದ್ದ ಎರಡೂವರೆ ವರ್ಷದ ಮಗು ಸಾವನ್ನಪ್ಪಿರುವ ಪ್ರಕರಣ ಉಡುಪಿ ಜಿಲ್ಲೆ ಕಾಪುವಿನ ಮುದರಂಗಡಿಯಲ್ಲಿ ನಡೆದಿದೆ.
Published: 03rd April 2021 09:36 PM | Last Updated: 03rd April 2021 09:39 PM | A+A A-

ಮೃತ ಬಾಲಕಿ ಪ್ರಿಯಾಂಕಾ
ಉಡುಪಿ: ದುರಂತ ಘಟನೆಯೂಂದರಲ್ಲಿ ಆಕಸ್ಮಿಕವಾಗಿ ಜಾರಿ ತೆರೆದ ಬಾವಿಗೆ ಬಿದ್ದ ಎರಡೂವರೆ ವರ್ಷದ ಮಗು ಸಾವನ್ನಪ್ಪಿರುವ ಪ್ರಕರಣ ಉಡುಪಿ ಜಿಲ್ಲೆ ಕಾಪುವಿನ ಮುದರಂಗಡಿಯಲ್ಲಿ ನಡೆದಿದೆ.
ಮೃತ ಮಗುವನ್ನು ಅದಮಾರು ವಾಜಪೇಯಿ ನಗರದ ಜಯಲಕ್ಶ್ಮಿ ಹಾಗೂ ಕೃಷ್ಣ ದಂಪತಿಯ ಪುತ್ರಿ ಪ್ರಿಯಾಂಕಾ ಎಂದು ಗುರುತಿಸಲಾಗಿದೆ.
ಶನಿವಾರ, ಕುಟುಂಬವು ಶಾಪಿಂಗ್ ನಡೆಸಲು ನಗರಕ್ಕೆ ಆಗಮಿಸಿದೆ.ಆ ವೇಳೆ ಆಡುತ್ತಿದ್ದ ಮಗು ಆಕಸ್ಮಿಕವಾಗಿ ಬಾವಿಗೆ ಬಿದ್ದಿದೆ. ಪೋಷಕರು ಶಾಪಿಂಗ್ ಮಾಡುತ್ತಿದ್ದ ಅಂಗಡಿಯ ಸಮೀಪವೇ ಬಾವಿ ಇತ್ತು.
ಮೊದಲಿಗೆ ಮಗು ಕಾಣಿಯಾಗಿದ್ದನ್ನು ಗಮನಿಸಿದ ತಾಯಿ ಜಯಲಕ್ಶ್ಮಿ ತನ್ನ ಮಗುವಿನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾರೆ ಇದರಿಂದ ಯಾರಾದರೂ ತನ್ನ ಮಗುವನ್ನು ಕಂಡಲ್ಲಿ ಮಾಹಿತಿ ಲಭಿಸುತ್ತದೆಂದು ಆಕೆ ಭಾವಿಸಿದ್ದಾರೆ. ಸ್ವಲ್ಪ ಸಮಯದ ನಂತರ, ಶಿರ್ವ ಪೊಲೀಸರು ಮತ್ತು ಸ್ಥಳೀಯರು ಬಾವಿಯ ಬಳಿ ಒಂದು ಚೀಲ ಮತ್ತು ಕೆಲವು ಹೂವುಗಳನ್ನು ಕಂಡಿದ್ದಾರೆ. ಅಲ್ಲದೆ ಬಾವಿಯ ಕೆಳಭಾಗದಲ್ಲಿ ಮಗುವು ಪತ್ತೆಯಾಗಿದೆ.
ಆದರೆ ಮಗುವನ್ನು ಮೇಲೆತ್ತುವ ವೇಳೆಗಾಗಲೇ ತಡವಾಗಿದ್ದು ಬದುಕುಳಿಸಲು ಸಾಧ್ಯವಾಗಿಲ್ಲ.ಘಟನೆ ಸಂಬಂಧ ಶಿರ್ವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.