ಮಂಗಳೂರು ಸಮೀಪ ಉಳ್ಳಾಲದಲ್ಲಿ 12 ವರ್ಷದ ಬಾಲಕ ಹತ್ಯೆ: ಒಬ್ಬ ಬಂಧನ, ಪಬ್ ಜಿ ಗೇಮ್ ನಿಷೇಧಕ್ಕೆ ಒತ್ತಾಯ 

ಉಳ್ಳಾಲದ ಕೆ ಸಿ ರಸ್ತೆ ಸಮೀಪ 12 ವರ್ಷದ ಬಾಲಕ ಆಕಿಫ್ ನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. 

Published: 04th April 2021 02:04 PM  |   Last Updated: 04th April 2021 02:04 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : The New Indian Express

ಮಂಗಳೂರು: ನಗರದ ಉಳ್ಳಾಲದ ಕೆ ಸಿ ರಸ್ತೆ ಸಮೀಪ 12 ವರ್ಷದ ಬಾಲಕ ಆಕಿಫ್ ನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. 

ಬಾಲಕನ ತಂದೆ ದೂರು: ಮೃತ ಬಾಲಕನ ತಂದೆ ಉಳ್ಳಾಲ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತನ್ನ ಮಗ ನಿನ್ನೆ ರಾತ್ರಿ ಪಬ್ ಜಿ ಗೇಮ್ ಆಡಲೆಂದು ಆತನ ಸ್ನೇಹಿತ ದೀಪಕ್ ಮತ್ತು ಇತರರೊಡನೆ ಹೊರಹೋಗಿದ್ದ. ಹೋಗುವಾಗ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದ. ರಾತ್ರಿ 8.45ರ ಸುಮಾರಿಗೆ ಮನೆಬಿಟ್ಟು ಹೋಗಿದ್ದ ಮಗ ಹಿಂತಿರುಗಲಿಲ್ಲ. ಇಂದು ಬೆಳಗ್ಗೆ ಆತನ ಶಾಲೆಯ ಹಿಂದಿನ ಮೈದಾನದಲ್ಲಿ ಮೃತದೇಹ ಸಿಕ್ಕಿತು. ದೀಪಕ್ ಮತ್ತು ಅವನ ಮನೆಯವರನ್ನು ಪ್ರಶ್ನಿಸಿದಾಗ ಸರಿಯಾದ ಉತ್ತರ ಸಿಗಲಿಲ್ಲ. ಅವರೇ ನನ್ನ ಮಗನನ್ನು ಕೊಂದಿರಬೇಕು, ದೀಪಕ್ ಮತ್ತು ಇತರ ಸ್ನೇಹಿತರನ್ನು ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳಿ ಎಂದು ಆರೋಪಿಸಿದ್ದರು.

ಇಂದು ಬೆಳಗ್ಗೆ ಮೃತ ಬಾಲಕನ ಮನೆಗೆ ಭೇಟಿ ನೀಡಿದ ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿ ಕುಮಾರ್ ಕುಟುಂಬಸ್ಥರಿಂದ ಮಾಹಿತಿ ಪಡೆದರು. ಉಳ್ಳಾಲದ ಫಲ್ಹಾ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ ಬಾಲಕನ ಮೇಲೆ ತೀವ್ರ ಹಲ್ಲೆ ನಡೆಸಿ ತಡೆಗೋಡೆ ಹತ್ತಿರಕ್ಕೆ ದೇಹವನ್ನು ತೆಗೆದುಕೊಂಡು ಹೋಗಿದ್ದರು. ಪಬ್ ಜಿ ಗೇಮ್ ಆಟದಲ್ಲಿ ತನ್ನ ಮಗನನ್ನು ಕೊಂದಿರಬೇಕು, ಆ ಆಟವನ್ನು ನಿಷೇಧಿಸಿ ಎಂದು ಬಾಲಕನ ತಂದೆ ಪೊಲೀಸರಿಗೆ ಮನವಿ ಮಾಡಿದರು.

ದೀಪಕ್ ನನ್ನು ವಿಚಾರಿಸಿದಾಗ ಆಕಿಫ್ ನನ್ನು ಪಬ್ ಜಿ ಆಟದಲ್ಲಿ ದಾಳಿ ಮಾಡಿ ಕೊಂದಿರುವುದಾಗಿ ತಪ್ಪೊಪ್ಪಿಕೊಂಡನು. ಕೂಡಲೇ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp