ಮಂಗಳೂರು: ನಾಪತ್ತೆಯಾಗಿದ್ದ 12 ವರ್ಷದ ಬಾಲಕನ ಮೃತದೇಹ ಉಳ್ಳಾಲ ಸಮೀಪ ಪತ್ತೆ

ನಾಪತ್ತೆಯಾಗಿದ್ದ 12 ವರ್ಷದ ಬಾಲಕನ ಶವ ಮಂಗಳೂರಿನ ಉಳ್ಳಾಲ ಸಮೀಪ ಕೆ ಸಿ ರಸ್ತೆ ಬಳಿ ಪತ್ತೆಯಾಗಿದೆ.

Published: 04th April 2021 10:26 AM  |   Last Updated: 04th April 2021 10:42 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : ANI

ಮಂಗಳೂರು: ನಾಪತ್ತೆಯಾಗಿದ್ದ 12 ವರ್ಷದ ಬಾಲಕನ ಶವ ಮಂಗಳೂರಿನ ಉಳ್ಳಾಲ ಸಮೀಪ ಕೆ ಸಿ ರಸ್ತೆ ಬಳಿ ಪತ್ತೆಯಾಗಿದೆ.

ನಿನ್ನೆ ಸಾಯಂಕಾಲ 12 ವರ್ಷದ ಬಾಲಕ ತನ್ನ ಮನೆಯಿಂದ ನಾಪತ್ತೆಯಾಗಿದ್ದ. ಆತನ ತಲೆಯನ್ನು ಬಂಡೆಯಿಂದ ಹೊಡೆದ ರೀತಿಯಲ್ಲಿ ಇಂದು ಬೆಳಗ್ಗೆ ಮೃತದೇಹ ಪತ್ತೆಯಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ. ಬಾಲಕ ಮೊಬೈಲ್ ನಲ್ಲಿ ಪಬ್ಜಿ ಆಟದ ಗೀಳಿಗೆ ತುತ್ತಾಗಿದ್ದ ಎಂದು ಹೇಳಲಾಗಿದೆ.

ಮಂಗಳೂರು ಹೊರವಲಯ ಉಳ್ಳಾಲ ಠಾಣಾ ವ್ಯಾಪ್ತಿಯ ಕೆ ಸಿ ರಸ್ತೆ ಬಳಿ ನಿನ್ನೆ ಸಂಜೆ 12 ವರ್ಷದ ಬಾಲಕ ಆಕಿಫ್ ನಾಪತ್ತೆಯಾಗಿದ್ದ. ಪ್ರತಿನಿತ್ಯ ಸಂಜೆ ಆಕಿಫ್ ಪಬ್ ಜಿ ಆಡುತ್ತಿದ್ದ. ನಿನ್ನೆ ಸಾಯಂಕಾಲ ಸ್ನೇಹಿತರು ಕರೆ ಮಾಡಿದರು ಎಂದು ಮನೆ ಹತ್ತಿರದ ಗ್ರೌಂಡ್ ಗೆ ಮೊಬೈಲ್ ಹಿಡಿದುಕೊಂಡು ಆಕಿಫ್ ಹೋಗಿದ್ದ. ಸ್ನೇಹಿತರೊಂದಿಗೆ ಪಬ್ ಜಿ ಆಡುತ್ತಿದ್ದವನು ನಾಪತ್ತೆಯಾಗಿ ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದೆ.

ಇದು ಕೊಲೆಯಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp