ಪಶ್ಚಿಮ ಕರಾವಳಿಯ ಕಣ್ಗಾವಲಿಗೆ ನೌಕಾಪಡೆಯಿಂದ ವೇಗದ ನೌಕೆಗಳ ನಿಯೋಜನೆ

ಕರ್ನಾಟಕದ ಪಶ್ಚಿಮ ಕರಾವಳಿಯ ಕಣ್ಗಾವಲಿಗೆ  ಭಾರತೀಯ ನೌಕಾಪಡೆ ವೇಗದ ಕಣ್ಗಾವಲು ನೌಕೆಗಳನ್ನು ನಿಯೋಜಿಸಿದೆ.

Published: 05th April 2021 01:04 PM  |   Last Updated: 05th April 2021 01:14 PM   |  A+A-


patrol vessels In karwar

ಕಣ್ಗಾವಲು ನೌಕೆಗಳು

Posted By : Srinivasamurthy VN
Source : The New Indian Express

ಕಾರವಾರ: ಕರ್ನಾಟಕದ ಪಶ್ಚಿಮ ಕರಾವಳಿಯ ಕಣ್ಗಾವಲಿಗೆ  ಭಾರತೀಯ ನೌಕಾಪಡೆ ವೇಗದ ಕಣ್ಗಾವಲು ನೌಕೆಗಳನ್ನು ನಿಯೋಜಿಸಿದೆ.

ಹೌದು.. ಕಾರವಾರ ಜಿಲ್ಲೆಯ ಪಶ್ಚಿಮ ಕರಾವಳಿಯ ಮೇಲೆ ಕಣ್ಣಿಡಲು, ಭಾರತೀಯ ಕೋಸ್ಟ್ ಗಾರ್ಡ್ ಸರ್ವೀಸಸ್ (ಐಸಿಜಿಎಸ್) ಎರಡು ವೇಗದ ಗಸ್ತು ಹಡಗುಗಳನ್ನು ನಿಯೋಜಿಸಿದೆ. ಇವುಗಳನ್ನು ಏಪ್ರಿಲ್ 1, 2021 ರಿಂದ ಸೇವೆಗೆ ನಿಯೋಜಿಸಲಾಗಿದೆ. ಕರಾವಳಿ ಕಾವಲು ಪಡೆ ಈ ವೇಗದ ಗಸ್ತು ಹಡಗುಗಳನ್ನು ಹೆಚ್ಚುವರಿಯಾಗಿ ನಿಯೋಜಿಸಿದೆ.  

ಈ ಹಿಂದೆ ಈ ಕಣ್ಗಾವಲು ಬೋಟ್ ಗಳು ನವ ಮಂಗಳೂರಿನಲ್ಲಿ ಲಂಗರು ಹಾಕಿತ್ತು. ಈ ನೌಕೆಗಳಿಗೆ ಶೈಕ್ಷಣಿಕ ಸುಧಾರಕ ಸಾವಿತ್ರಿ ಬಾಯಿ ಫುಲೆ ಮತ್ತು ಮಹಾತ್ಮ ಗಾಂಧಿಯವರ ಪತ್ನಿ ಕಸ್ತೂರ್ಬಾ ಗಾಂಧಿ ಅವರ ಹೆಸರನ್ನು ಇಡಲಾಗಿದೆ. ಉತ್ತರದ ಕನ್ನಡ ಜಿಲ್ಲೆಯಲ್ಲಿ, ಉತ್ತರದ ಮಜಲಿಯಿಂದ ದಕ್ಷಿಣದ ಭಟ್ಕಳ ವರೆಗೆ ಗಸ್ತು ತಿರುಗಲು ಅವುಗಳನ್ನು ಬಳಸಲಾಗುತ್ತದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಕೋಸ್ಟ್ ಗಾರ್ಡ್ ಅಧಿಕಾರಿಗಳ ಪ್ರಕಾರ, ಈ ಹಡಗುಗಳನ್ನು ಗೋವಾ ಶಿಪ್ ಯಾರ್ಡ್ ಲಿಮಿಟೆಡ್ ನಿರ್ಮಿಸಿದ್ದು, ಈ ನೌಕೆಗಳು 35 ನಾಟ್ಸ್ ಗೂ ಹೆಚ್ಚಿನ ವೇಗವನ್ನು ಸಂಚರಿಸಲಿವೆ. ಇನ್ನು ಈ ನೌಕೆಗಳು 30 ಎಂಎಂ ಸಿಆರ್ಎನ್ ಗನ್ ಹೊಂದಿದ್ದು, ಅಲ್ಲದೆ ಅತ್ಯಾಧುನಿ ಉಪಗ್ರಹ ಸಂವಹನ ಮತ್ತು ಸಂಚರಣಾ ವ್ಯವಸ್ಥೆಯನ್ನು ಹೊಂದಿವೆ.

ಈ ಬಗ್ಗೆ ಮಾಹಿತಿ ನೀಡಿರುವ ನೌಕಾಪಡೆ ಅಧಿಕಾರಿಯೊಬ್ಬರು, 'ಈ ಹಡಗುಗಳನ್ನು ಕಣ್ಗಾವಲು, ಗಸ್ತಿಗಾಗಿ ವಿನ್ಯಾಸಗೊಳಿಸಲಾಗಿದೆ. ಆಳ ಸಮುದ್ರ ಮಾತ್ರವಲ್ಲದೇ, ಆಳವಿಲ್ಲದ ನೀರಿನ ಕಾರ್ಯಾಚರಣೆಗೂ ಇವು ಸಮರ್ಥವಾಗಿದೆ. ಎರಡೂ ಹಡಗುಗಳು ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆ, ಕಡಲ್ಗಳ್ಳತನ ವಿರೋಧಿ ಗಸ್ತು, ಮೀನುಗಾರಿಕಾ ರಕ್ಷಣೆ ಮತ್ತು ಶೋಧ ಮತ್ತು ಪಾರುಗಾಣಿಕಾ ಕಾರ್ಯಾಚರಣೆಗಳಿಗೆ ಈ ನೌಕೆ ಸಮರ್ಥವಾಗಿದೆ. ಈ ಹಡಗುಗಳು ಕಾರವಾರದ ಕೋಸ್ಟ್ ಗಾರ್ಡ್ ನಿಲ್ದಾಣದ ಸಾಮರ್ಥ್ಯಗಳಿಗೆ ಹೊಸ ಆಯಾಮ ಮತ್ತು ಬಲ ನೀಡಲಿದೆ ಎಂದು ಹೇಳಿದ್ದಾರೆ.

ಅಂತೆಯೇ ಶೀಘ್ರದಲ್ಲೇ ಮ್ಯಾರಿಟೈಮ್ ಥಿಯೇಟರ್ ಕಮಾಂಡ್ (ಎಂಟಿಸಿ) ಯ ಭಾಗವಾಗಲಿರುವ ಐಸಿಜಿಎಸ್, ನೌಕಾಪಡೆಯ ಪೂರ್ವ ಮತ್ತು ಪಶ್ಚಿಮ ನಿರ್ದೇಶನಗಳು ಮತ್ತು ವಾಯುಪಡೆಯನ್ನೂ ಒಳಗೊಂಡಂತೆ ಒಂದೇ ಸೂರಿನಡಿ ಕಾರ್ಯನಿರ್ವಹಿಸಲಿದೆ. 2009 ರ ನವೆಂಬರ್ 4 ರಂದು ಕಾರ್ಯಾರಂಭ ಮಾಡಿದ ದಿನದಿಂದ ಈ ವರೆಗೂ  ಐಸಿಜಿಎಸ್ ಎರಡು ಇಂಟರ್ಸೆಪ್ಟರ್ ಬೋಟ್‌ಗಳು ಮತ್ತು ಎರಡು ಇಂಟರ್‌ಸೆಪ್ಟರ್ ಕ್ರಾಫ್ಟ್‌ಗಳೊಂದಿಗೆ ಕಾರ್ಯನಿರ್ವಹಿಸಿದೆ. ಆದಾಗ್ಯೂ, ಈ ಎರಡು ನೌಕೆಗಳ ಸೇರ್ಪಡೆ ಮ್ಯಾರಿಟೈಮ್ ಥಿಯೇಟರ್ ಕಮಾಂಡ್‌ನ ಭಾಗವಾಗಿ ದೊಡ್ಡ ಕ್ರಮಕ್ಕೆ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ.

ಈ ಹಿಂದೆ, ಕಾರವಾರದ ಸೀಬರ್ಡ್ ನೌಕಾ ನೆಲೆಯಲ್ಲಿ ಮ್ಯಾರಿಟೈಮ್ ಥಿಯೇಟರ್ ಕಮಾಂಡ್ ಸ್ಥಾಪಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದು ಉತ್ತರ ಕನ್ನಡ ಜಿಲ್ಲೆಯ ನೌಕಾ ನೆಲೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ನೌಕಾಪಡೆ ಅಧಿಕಾರಿಯೊಬ್ಬರು ಹೇಳಿದ್ದಾರೆ. 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp