ತುಮಕೂರು: ಮದುವೆಗೆ ನಿರಾಕರಿಸಿದ ಯುವತಿಯನ್ನು ಚೂರಿಯಿಂದ ಇರಿದು ಕೊಂದ ಭಗ್ನಪ್ರೇಮಿ!

ಶಿರಾ ತಾಲೂಕಿನ ದೊಡ್ಡಗುಳ್ಳದಲ್ಲಿ ನಡೆದ ಘಟನೆಯೊಂದರಲ್ಲಿ ಬಲವಂತವಾಗಿ ತಾಳಿ ಕಟ್ಟಿ ಮದುವೆಯಾಗಲು ನಿರಾಕರಿಸಿದ ಯುವತಿಗೆ ಪ್ರೇಮಿಯೊಬ್ಬ ಚಾಕುವಿನಿಂದ ಮಾರಣಾಂತಿಕವಾಗಿ ಇರಿದು ಹತ್ಯೆ ಮಾಡಿದ್ದಾನೆ.

Published: 05th April 2021 09:21 PM  |   Last Updated: 06th April 2021 01:17 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : The New Indian Express

ತುಮಕೂರು: ಶಿರಾ ತಾಲೂಕಿನ ದೊಡ್ಡಗುಳ್ಳದಲ್ಲಿ ನಡೆದ ಘಟನೆಯೊಂದರಲ್ಲಿ ಬಲವಂತವಾಗಿ ತಾಳಿ ಕಟ್ಟಿ ಮದುವೆಯಾಗಲು ನಿರಾಕರಿಸಿದ ಯುವತಿಗೆ ಪ್ರೇಮಿಯೊಬ್ಬ ಚಾಕುವಿನಿಂದ ಮಾರಣಾಂತಿಕವಾಗಿ ಇರಿದು ಹತ್ಯೆ ಮಾಡಿದ್ದಾನೆ.

ಮೃತಳನ್ನು ಪಾಂಡುರಂಗಪ್ಪ ಅವರ ಮೂವರು ಪುತ್ರಿಯರಲ್ಲಿ ಹಿರಿಳಾದ ಕಾವ್ಯಾ (17) ಎಂದು ಗುರುತಿಸಲಾಗಿದೆ. ಕಳ್ಳಂಬೆಳ್ಳ ಪೋಲೀಸರು ಯುವತಿಯ ಹತ್ಯೆ ಮಾಡಿದ ಈರಣ್ಣ ಅಲಿಯಾಸ್ ಮೂಟೆ ಈರಣ್ಣ (27) ನನ್ನು ಬಂಧಿಸಿದ್ದಾರೆ.

ಹುಡುಗಿ ತನ್ನನ್ನು ಮದುವೆಯಾಗಬೇಕೆಂದು ಆರೋಪಿ ಪೀಡಿಸುತ್ತಿದ್ದ ಆದರೆ ಅವಳು ಹಲವಾರು ಬಾರಿ ನಿರಾಕರಿಸಿದ್ದಳು ಪಿಯು ವ್ಯಾಸಂಗ ಮಾಡುತ್ತಿದ್ದ ಯುವತಿ ಶಿರಾಗೆ ತೆರಳಲು ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದ ವೇಳೆ ಆರೋಪಿ ತನ್ನ ಮೋಟಾರುಬೈಕಿನಲ್ಲಿ ಅವಳನ್ನು ಹಿಂಬಾಲಿಸಿದ್ದಾನೆ. ಅಲ್ಲದೆ ಆಕೆಯನ್ನು ಅಡ್ಡಗಟ್ತಿ ಬೇರೆ ದಾರಿಗೆ ಕರೆದೊಯ್ದಿದ್ದಾನೆ.

ಆತ ತಾಳಿಯನ್ನು ಕಟ್ಟಲು ಪ್ರಯತ್ನಿಸಿದಾಗ ಯುವತಿ ಕಾವ್ಯಾ ವಿರೋಧಿಸಿದ್ದಾಳೆ.  ಆಗ ಅಂತಿಮವಾಗಿ ಆರೋಪಿ ಅವಳ ಮೇಲೆ ಕುಡಗೋಲಿನಿಂದ ಹಲ್ಲೆ ಮಾಡಿ ಕುತ್ತಿಗೆಗೆ ತೀವ್ರವಾದ ಗಾಯವಾಗುವಂತೆ ಚಾಕುವಿನಿಂದ ಇರಿದಿದ್ದಾನೆ. ಆ ವೇಳೆ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಈ ಇಬ್ಬರೂ ಹಿಂದುಳಿದ ಕಾಡುಗೊಲ್ಲ ಸಮುದಾಯಕ್ಕೆ ಸೇರಿದವರಾಗಿದ್ದಾರೆ. .

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp