ಬೆಂಗಳೂರು: ಲಸಿಕೆ ಪಡೆದವರೂ ಸೇರಿದಂತೆ ಬಿಎಂಸಿಆರ್ ಐ ನ 13 ಮಂದಿ ಆರೋಗ್ಯ ಸಿಬ್ಬಂದಿಗೆ ಕೋವಿಡ್ ಸೋಂಕು!

ಬೆಂಗಳೂರಿನಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್ಐ) 13 ವೈದ್ಯಕೀಯ ಸಿಬ್ಬಂದಿಗಳು ಸೋಂಕಿಗೆ ತುತ್ತಾಗಿದ್ದಾರೆ.

Published: 05th April 2021 12:01 PM  |   Last Updated: 05th April 2021 12:01 PM   |  A+A-


COVID-19 vaccine

ಸಂಗ್ರಹ ಚಿತ್ರ

Posted By : Srinivasamurthy VN
Source : The New Indian Express

ಬೆಂಗಳೂರು: ಬೆಂಗಳೂರಿನಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್ಐ) 13 ವೈದ್ಯಕೀಯ ಸಿಬ್ಬಂದಿಗಳು ಸೋಂಕಿಗೆ ತುತ್ತಾಗಿದ್ದಾರೆ.

ಆಘಾತಕಾರಿ ವಿಚಾರ ಎಂದರೆ ಸೋಂಕಿಗೆ ತುತ್ತಾದವರ ಪೈಕಿ ಕೋವಿಡ್ ಲಸಿಕೆ ಪಡೆದವರೂ ಸೇರಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಸೋಂಕಿಗೆ ತುತ್ತಾದ 13 ಮಂದಿ ವೈದ್ಯಕೀಯ ಸಿಬ್ಬಂದಿಗಳಲ್ಲಿ ಬಹುತೇಕರು ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಸ್ತುತ ಸೋಂಕಿತರನ್ನು ಪ್ರತ್ಯೇಕ ಹಾಸ್ಟೆಲ್ ಕೋಣೆಗಳಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. ಇನ್ನು ಸೋಂಕಿಗೆ ತುತ್ತಾಗಿರುವ ಈ 13 ಮಂದಿ ಸಿಬ್ಬಂದಿಗಳಿಗೆ ಯಾವುದೇ ಪ್ರಯಾಣದ ಇತಿಹಾಸವಿಲ್ಲ ಬಿಎಂಸಿಆರ್ಐನ ಕೋವಿಡ್ -19 ನೋಡಲ್ ಅಧಿಕಾರಿ ಡಾ.ಸ್ಮಿತಾ ಸೆಗು ದೃಢ ಪಡಿಸಿದ್ದಾರೆ. ಅದಾಗ್ಯೂ ಸೋಂಕು ಹೇಗೆ ಒಕ್ಕರಿಸಿತು ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. 

ಬಿಎಂಸಿಆರ್ ಐ ನ  ಕೆಲ ಎಂಬಿಬಿಎಸ್ ವಿದ್ಯಾರ್ಥಿಗಳಲ್ಲಿ ಮೊದಲು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು. ಬಳಿಕ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳನ್ನು ಸೋಂಕು ಪರೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ 13 ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಈ 13 ಮಂದಿಯಲ್ಲಿ ಕೆಲವರು ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದಿದ್ದರು. ಲಸಿಕೆ ಪಡೆದವರಲ್ಲಿ ಸೋಂಕಿನ ತೀವ್ರತೆ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇತ್ತೀಚೆಗೆ, ಲಸಿಕೆ ಎರಡನೆಯ ಡೋಸ್ ಪಡೆದ ಶ್ರೀ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್ ಅಂಡ್ ರಿಸರ್ಚ್‌ನ ಇಬ್ಬರು ವಿದ್ಯಾರ್ಥಿಗಳು ಕೂಡ ಸೋಂಕಿಗೆ ತುತ್ತಾಗಿದ್ದರು. ಈ ಬಗ್ಗೆ ಮಾಹಿತಿ ನೀಡಿರುವ ಆಸ್ಪತ್ರೆಯ ನಿರ್ದೇಶಕ ಡಾ ಸಿ ಎನ್ ಮಂಜುನಾಥ್ ಅವರು, '"ಸುಮಾರು 14 ದಿನಗಳ ಹಿಂದೆ, ಇಬ್ಬರು ದಾದಿಯರು ವ್ಯಾಕ್ಸಿನೇಷನ್ ಪಡೆದ ನಂತರವೂ ಸೋಂಕಿಗೆ ತುತ್ತಾಗಿದ್ದರು. ಆದರೆ ಅವರಲ್ಲಿ ಸೋಂಕಿನ ತೀವ್ರತೆ ಇರಲಿಲ್ಲ ಎಂದು  ಹೇಳಿದರು.

ಇನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ಲಸಿಕೆ ಪಡೆದ  ಬಳಿಕ ಸೋಂಕಿಗೆ ತುತ್ತಾದ ಸೋಂಕಿತರ ಪ್ರಕರಣಗಳು ದಾಖಲಾಗುತ್ತಿವೆ.  ಈ ಬಗ್ಗೆ ಮಾತನಾಡಿರುವ ಮಣಿಪಾಲ್ ಆಸ್ಪತ್ರೆಯ ವೈಜ್ಞಾನಿಕ ಮಂಡಳಿಯ ಮುಖ್ಯಸ್ಥ ಮತ್ತು ಜೆರಿಯಾಟ್ರಿಕ್ ಮೆಡಿಸಿನ್ ಅಧ್ಯಕ್ಷ ಡಾ.ಅನೂಪ್ ಅಮರನಾಥ್ ಅವರು ಮೊದಲ ಡೋಸ್ ಅಥವಾ 2ನೇ ಡೋಸ್ ಲಸಿಕೆ ಪಡೆದ ಬಳಿಕ ಜನರು ತಮಗೆ ಸೋಂಕು ತಗುಲುವುದಿಲ್ಲ ಎಂದು ಧೈರ್ಯದಿಂದ ಬೇಜವಾಬ್ದಾರಿಯಾಗಿರುತ್ತಾರೆ. ಇದರಿಂದ ಅವರಿಗೆ ಮತ್ತೆ ಸೋಂಕು ಒಕ್ಕರಿಸುತ್ತದೆ. ಆದರೆ ಕೋವಿಡ್ ಲಸಿಕೆ ಪಡೆದ ಹೊರತಾಗಿಯೂ ಪ್ರಾಥಮಿಕ ಕೋವಿಡ್ ಮಾರ್ಗದರ್ಶಿ ಸೂತ್ರಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮತ್ತು ಆಗಾಗ ಕೈಗಳನ್ನು ತೊಳೆಯುವುದನ್ನು ಮುಂದುವರೆಸಬೇಕು. ಅಲ್ಲದೆ ಸ್ಯಾನಿಟೈಸರ್ ಗಳ ಬಳಕೆ ಕೂಡ ಉತ್ತಮ ಎಂದು ಹೇಳಿದ್ದಾರೆ. 

ಕೋವಿಡ್ ಲಸಿಕೆ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆಯೇ ಹೊರತು ಸೋಂಕನ್ನು ತಡೆಯುವುದಿಲ್ಲ. ಆದರೆ ಲಸಿಕೆ ಪಡೆದ ಬಳಿಕ ಸೋಂಕಿಗೆ ತುತ್ತಾದರೆ ಅದರ ತೀವ್ರ ಕಡಿಮೆ ಇರುತ್ತದೆ ಎಂದು  ಡಾ.ಅಮರ್ನಾಥ್ ಸ್ಪಷ್ಟಪಡಿಸಿದ್ದಾರೆ. 

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp