3 ತಿಂಗಳಲ್ಲಿ 15 ಬಾರಿ ಕಾಡ್ಗಿಚ್ಚು; ಕಪ್ಪತಗುಡ್ಡದಲ್ಲಿ ಕಣ್ಗಾವಲು ಹೆಚ್ಚಿಸಿದ ಅರಣ್ಯ ಇಲಾಖೆ

ಕಪ್ಪತಗುಡ್ಡವನ್ನು ಸಂರಕ್ಷಿತಾರಣ್ಯ ಪ್ರದೇಶ ಎಂದು ಘೋಷಣೆ ಮಾಡಿದ ಕೆಲವೇ ವರ್ಷಗಳ ಅವಧಿಯಲ್ಲಿ ಇಲ್ಲಿ ಬೆಂಕಿ ಅವಘಡಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಕಳೆದ 3 ತಿಂಗಳ ಅವಧಿಯಲ್ಲಿ 15 ಪ್ರಕರಣಗಳು ದಾಖಲಾಗಿವೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

Published: 06th April 2021 01:08 PM  |   Last Updated: 06th April 2021 01:22 PM   |  A+A-


Kappatagudda Forest Fire

ಕಪ್ಪತಗುಡ್ಡದಲ್ಲಿ ಬೆಂಕಿ

The New Indian Express

ಗದಗ: ಕಪ್ಪತಗುಡ್ಡವನ್ನು ಸಂರಕ್ಷಿತಾರಣ್ಯ ಪ್ರದೇಶ ಎಂದು ಘೋಷಣೆ ಮಾಡಿದ ಕೆಲವೇ ವರ್ಷಗಳ ಅವಧಿಯಲ್ಲಿ ಇಲ್ಲಿ ಬೆಂಕಿ ಅವಘಡಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಕಳೆದ 3 ತಿಂಗಳ ಅವಧಿಯಲ್ಲಿ 15 ಪ್ರಕರಣಗಳು ದಾಖಲಾಗಿವೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಸಿಕೊಳ್ಳುವ ಕಪ್ಪತ್ತಗುಡ್ಡ ಅಪಾರ ಪ್ರಮಾಣದ ಸಸ್ಯ ಸಂಪತ್ತು ಹಾಗೂ ವನ್ಯಜೀವಿಗಳನ್ನು ಹೊಂದಿದೆ. ಹೀಗಾಗಿ ಇದನ್ನು ವನ್ಯಜೀವಿ ಧಾಮವೆಂದು ಘೋಷಣೆ ಮಾಡಲಾಗಿದೆ. ಆದರೆ, ಇಂತಹ ಅಪರೂಪದ ಸಸ್ಯ ಸಂಪತ್ತಿನ ಕಪ್ಪತಗುಡ್ಡ ಇದೀಗ ಬೆಂಕಿಯ ರುದ್ರನರ್ತನಕ್ಕೆ ತುತ್ತಾಗುತ್ತಿದ್ದು, ಕಳೆದ ಮೂರು ತಿಂಗಳ ಅವಧಿಯಲ್ಲಿ 15 ಬಾರಿ ಬೆಂಕಿ ಅವಘಡ ಸಂಭವಿಸಿದೆ. ಅಲ್ಲದೆ ಬೆಂಕಿಯಿಂದಾಗಿ 200 ಹೆಕ್ಚೇರ್ ಗಿಂತಲೂ ಅಧಿಕ ಅಮೂಲ್ಯ ಅರಣ್ಯ ಸಂಪತ್ತು ನಾಶವಾಗಿದೆ. 

ಕಳೆದ ಭಾನುವಾರ ಕೂಡ ಕಪ್ಪತಗುಡ್ಡದ ಒಂದು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಪ್ರದೇಶವು ಅಭಯಾರಣ್ಯದ ಸ್ಥಾನಮಾನವನ್ನು ಪಡೆದ ನಂತರವೇ ಇಲ್ಲಿ ಹೆಚ್ಚಾಗಿ ಬೆಂಕಿ ಪ್ರಕರಣಗಳು ವರದಿಯಾಗುತ್ತಿವೆ. ಪ್ರಮುಖವಾಗಿ ಡೋನಿ, ಮುಂಡರಗಿ, ಮತ್ತು ಶಿರಹಟ್ಟಿ ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಬೆಂಕಿ ಪ್ರಕರಣಗಳು ವರದಿಯಾಗುತ್ತಿವೆ. ಪದೇ ಪದೇ ಉಂಟಾಗುತ್ತಿರುವ ಬೆಂಕಿ ಅವಘಡ ನಿಯಂತ್ರಣಕ್ಕಾಗಿ ಅರಣ್ಯ ಇಲಾಖೆ ಇದೀಗ ಕಣ್ಗಾವಲು ಹೆಚ್ಚಿಸಲು ನಿರ್ಧರಿಸಿದ್ದು, ಇದಕ್ಕಾಗಿ ತನ್ನ ಸಿಬ್ಬಂದಿಗಳು ಮಾತ್ರವಲ್ಲದೇ ಸ್ಥಳೀಯ ಗ್ರಾಮಸ್ಥರ ನೆರವು ಪಡೆಯಲು ಯೋಜನೆ ರೂಪಿಸಿದೆ.

ಈಗಾಗಲೇ ಕಪ್ಪತಗುಡ್ಡ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ 15 ಪ್ರಕರಣಗಳ ದಾಖಲಿಸಿಕೊಂಡಿದ್ದು, ಬೆಂಕಿ ಹಚ್ಚಿದ ಆರೋಪ ಎದುರಿಸುತ್ತಿರುವ ದುಷ್ಕರ್ಮಿಗಳ ವಿರುದ್ಧ 14 ಮತ್ತು ಖಾಸಗಿ ವಿಂಡ್‌ಮಿಲ್ ಕಂಪನಿಯ ವಿರುದ್ಧ ಒಂದು ಪ್ರಕರಣ ದಾಖಲಿಸಿದೆ. ಕಪ್ಪತಗುಡ್ಡ ಬೆಂಕಿ ಅವಘಡದ ಹಿಂದೆ ಕೆಲ ಗಣಿ ಲೂಟಿಕೋರರ ಕೈವಾಡವಿದೆ ಎಂದು ವನ್ಯಜೀವಿ ಪ್ರಿಯರು ಆರೋಪಿಸಿದ್ದು, ಕೆಲವು ಗ್ರಾಮಸ್ಥರು ಮೂಢ ನಂಬಿಕೆಯನ್ನು ನಂಬಿ ಅರಣ್ಯಕ್ಕೆ ಬೆಂಕಿ ಹಚ್ಚುತ್ತಿದ್ದಾರೆ ಎಂದೂ ಹೇಳಲಾಗಿದೆ.

ಈ ಬಗ್ಗೆ ಮಾತನಾಡಿರುವ ಸ್ಥಳೀಯರಾದ ಮಂಜಪ್ಪ ದೋನಿ ಅವರು, 'ಈ ಬಾರಿ ಅನೇಕ ಭಾಗಗಳಲ್ಲಿ ಬೆಂಕಿ ಅವಘಡ ಘಟನೆಗಳು ನಡೆದಿವೆ. ಭಾನುವಾರ ಉಂಟಾಗಿರುವ ಬೆಂಕಿಯನ್ನು ನಂದಿಸಲು ಇನ್ನೂ ಹೆಚ್ಚು ಸಮಯ ಬೇಕಾಗುತ್ತದೆ. ಒಣ ಹುಲ್ಲಿಗೆ ಮಾತ್ರ ಗ್ರಾಮಸ್ಥರು ಬೆಂಕಿ ಹಚ್ಚುತ್ತಾರೆ. ಆದರೆ ಇತ್ತೀಚೆಗೆ, ಹಸಿರು ಸಸ್ಯಗಳು ಇರುವ ಪ್ರದೇಶಗಳಲ್ಲಿಯೂ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಗದಗ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ ವಿ ಸೂರ್ಯಸೇನ್ ಅವರು, ಕಪ್ಪತಗುಡ್ಡ ಅರಣ್ಯದಲ್ಲಿನ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಪ್ರಕರಣಗಳನ್ನು ದಾಖಲಿಸಿದ್ದೇವೆ ಮತ್ತು ತನಿಖೆ ನಡೆಯುತ್ತಿದೆ. ಶೀಘ್ರದಲ್ಲೇ ನಾವು ಘಟನೆಗಳ ಹಿಂದಿನ ಅಪರಾಧಿಗಳನ್ನು ಕಂಡುಹಿಡಿಯುತ್ತೇವೆ ಎಂದು ಹೇಳಿದ್ದಾರೆ.


Stay up to date on all the latest ರಾಜ್ಯ news
Poll
MoE to launch bachelor degree programme for Agniveers

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂಬ ಟೀಕೆಗಳನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp