ಕೊಡಗು: ಮನೆಗೆ ಬೆಂಕಿಯಿಟ್ಟು 7 ಮಂದಿ ಸಾವಿಗೆ ಕಾರಣನಾಗಿದ್ದ ಆರೋಪಿ ಇಂದು ಶವವಾಗಿ ಪತ್ತೆ!

ಕಳೆದ ಶುಕ್ರವಾರ ಗುಡೇ ಫ್ರೈಡೆಯಂದು ರಾತ್ರಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಏಳು ಮಂದಿ ಸಾವಿಗೆ ಕಾರಣನಾಗಿದ್ದ ಆರೋಪಿಯ ಮೃತದೇಹ ಇಂದು ಪತ್ತೆಯಾಗಿದೆ.

Published: 06th April 2021 04:07 PM  |   Last Updated: 06th April 2021 04:07 PM   |  A+A-


Bhoja

ಆರೋಪಿ ಬೋಜ

Posted By : Vishwanath S
Source : Online Desk

ಮಡಿಕೇರಿ: ಕಳೆದ ಶುಕ್ರವಾರ ಗುಡೇ ಫ್ರೈಡೆಯಂದು ರಾತ್ರಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಏಳು ಮಂದಿ ಸಾವಿಗೆ ಕಾರಣನಾಗಿದ್ದ ಆರೋಪಿಯ ಮೃತದೇಹ ಇಂದು ಪತ್ತೆಯಾಗಿದೆ. 

ಆರೋಪಿ 55 ವರ್ಷದ ಬೋಜ ಮೃತದೇಹ ಮುಗುಟಗೇರಿಯ ಆತನ ಮನೆಯ ಸಮೀಪದ ಕಾಫಿ ತೋಟದಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬೋಜನ ಪತ್ತೆಯಾಗಿ ಶೋಧ ಕಾರ್ಯ ನಡೆಸಿದ್ದರು. ಆದರೆ ಇಂದು ಆತನ ಮೃತದೇಹ ಪತ್ತೆಯಾಗಿದೆ.

700

ಮನೆಯಲ್ಲಿ ಮಲಗಿದ್ದಾಗ ಬೆಂಕಿ ಹಚ್ಚಿದ್ದರಿಂದ ಯಾರೂ ಉಳಿಯಲು ಸಾಧ್ಯವಾಗಿಲ್ಲ. ನಾಲ್ಕು ಪುಟ್ಟ ಮಕ್ಕಳು ಸೇರಿದಂತೆ ಒಟ್ಟಾರೆ ಏಳು ಮಂದಿ ಈ ಅವಘಡದಲ್ಲಿ ಮೃತಪಟ್ಟಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡು ಜೀನ್ಮರಣ ಹೋರಾಟ ನಡೆಸುತ್ತಿದ್ದ 28 ವರ್ಷದ ಭಾಗ್ಯ ಇಂದು ಮುಂಜಾನೆ ಮೃತಪಟ್ಟಿದ್ದಾರೆ. 

ಮನೆಗೆ ಬೆಂಕಿ ಇಟ್ಟ ನಂತರ ಬೋಜ ತನ್ನ ಇನ್ನೊಬ್ಬ ಮಗಳಿಗೆ ಕರೆ ಮಾಡಿ ಮನೆಗೆ ಬೆಂಕಿ ಹಾಕಿರುವುದಾಗಿ ಹೇಳಿದ್ದನು. ಈ ಹಿನ್ನೆಲೆಯಲ್ಲಿ ಪೊಲೀಸರು ಬೋಜನ್ನು ಹುಡುಕುತ್ತಿದ್ದರು.


Stay up to date on all the latest ರಾಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp