ಸಾರಿಗೆ ನೌಕರರ ಮುಷ್ಕರ ಅಂತ್ಯವಾಗುವವರೆಗೂ ಬಿಎಂಟಿಸಿ ಸಿಬ್ಬಂದಿ ಸಂಬಳಕ್ಕೆ ತಡೆ

6ನೇ ವೇತನ ಶಿಫಾರಸ್ಸು ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಅಂತ್ಯವಾಗುವವರೆಗೂ ಬಿಎಂಟಿಸಿ ಸಿಬ್ಬಂದಿ ಸಂಬಳಕ್ಕೆ ತಡೆಯಾಗಲಿದ್ದು, ಕಾನೂನಿನ ಸಲಹೆ ಪಡೆದ ಬಳಿಕ ಸಂಬಳ ನೀಡುವ ಬಗ್ಗೆ ನಿರ್ಧರಿಸಲಾಗುತ್ತದೆ...

Published: 07th April 2021 03:02 PM  |   Last Updated: 07th April 2021 03:02 PM   |  A+A-


Bus Strike

ಸಂಗ್ರಹ ಚಿತ್ರ

Posted By : Srinivas Rao BV
Source : UNI

ಬೆಂಗಳೂರು: 6ನೇ ವೇತನ ಶಿಫಾರಸ್ಸು ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಅಂತ್ಯವಾಗುವವರೆಗೂ ಬಿಎಂಟಿಸಿ ಸಿಬ್ಬಂದಿ ಸಂಬಳಕ್ಕೆ ತಡೆಯಾಗಲಿದ್ದು, ಕಾನೂನಿನ ಸಲಹೆ ಪಡೆದ ಬಳಿಕ ಸಂಬಳ ನೀಡುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಬಿಎಂಟಿಸಿ ಭದ್ರತೆ ಮತ್ತು ಜಾಗೃತಿ ವಿಭಾಗದ ನಿರ್ದೇಶಕ ಡಾ. ಕೆ ಅರುಣ್ ಸ್ಪಷ್ಟಪಡಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ.ಅರುಣ್, ಸಾರಿಗೆ ಸಿಬ್ಬಂದಿಗೆ ಸಾಮಾನ್ಯವಾಗಿ 3 ಶೆಡ್ಯೂಲ್​​ಗಳಲ್ಲಿ ಸಂಬಳ ನೀಡಲಾಗುತ್ತದೆ. ಪ್ರತಿ ತಿಂಗಳ ಆರಂಭದಲ್ಲಿ 1 ರಿಂದ 7ರವರೆಗೂ ಸಂಬಳ ಆಗುತ್ತದೆ. 

ದಿನಾಂಕ ಒಂದರಂದು ಅಧಿಕಾರಿ ಸಿಬ್ಬಂದಿಗೆ ನೀಡಲಾಗುತ್ತದೆ. 3, 4ನೇ ತಾರೀಖಿನಂದು ಮೆಕಾನಿಕಲ್ ಸಿಬ್ಬಂದಿ ಹಾಗೂ 7ರಂದು ಚಾಲಕ ನಿರ್ವಾಹಕರಿಗೆ ಸಂಬಳ ನೀಡಲಾಗುತ್ತಿತ್ತು.ಆದರೆ ಸದ್ಯ ಚಾಲಕ, ನಿರ್ವಾಹಕರಿಗೆ ಆಗಬೇಕಾದ ಸಂಬಳ ತಡೆಹಿಡಿಯಲಾಗಿದೆ. ಮುಷ್ಕರಕ್ಕೆ ಕರೆ ಕಟ್ಟಿರುವ ಹಿನ್ನೆಲೆ ವೇತನ ತಡೆ ಹಿಡಿಯಲಾಗಿದ್ದು, ಮುಷ್ಕರ ಮುಗಿಯುವವರೆಗೂ ಸಂಬಳ ಕೊಡಲು ಸಾಧ್ಯವಿಲ್ಲ .ಬಿಎಂಟಿಸಿ ಚಾಲಕರು ಹಾಗೂ ನಿರ್ವಾಹಕರಿಗೆ ನೀಡಬೇಕಿದ್ದ ಮಾರ್ಚ್ ತಿಂಗಳ ಸಂಬಳವನ್ನು ತಡೆಹಿಡಿಯಲಾಗಿದೆ. 

ಮುಷ್ಕರದಿಂದಾಗಿ ಆರ್ಥಿಕತೆಗೆ ಹೊಡೆತ ಬೀಳಲಿದೆ.ಹೀಗಾಗಿ ಸಂಬಳ ನೀಡುವ ಬಗ್ಗೆ ಕಾನೂನು ಸಲಹೆ ಪಡೆದು ನಿರ್ಧರಿಸಲಾಗುವುದು ಎಂದರು.

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp