ಕೋವಿಡ್ ವಿರುದ್ಧ ಮಾರ್ಷಲ್‌ಗಳ ಹೋರಾಟಕ್ಕೆ ಹೋಮ್ ಗಾರ್ಡ್‌ಗಳ ಸಾಥ್

ಕೋವಿಡ್ -19 ಪ್ರೋಟೋಕಾಲ್ ಗಳನ್ನು ಉಲ್ಲಂಘಿಸುವವರಿಗೆ ದಂಡ ಹಾಕುತ್ತಿದ್ದ ಬಿಬಿಎಂಪಿ ಮಾರ್ಷಲ್‌ಗಳಿಗೆ ಬುಧವಾರದಿಂದ ಹೋಮ್ ಗಾರ್ಡ್‌ಗಳು ಸಹ ಸಾಥ್ ನೀಡಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ.

Published: 07th April 2021 01:41 PM  |   Last Updated: 07th April 2021 01:41 PM   |  A+A-


BBMP marshals keep a check if people are following Covid-19 guidelines

ಬಿಬಿಎಂಪಿ ಮಾರ್ಷಲ್'ಗಳು

Posted By : Lingaraj Badiger
Source : The New Indian Express

ಬೆಂಗಳೂರು: ಕೋವಿಡ್ -19 ಪ್ರೋಟೋಕಾಲ್ ಗಳನ್ನು ಉಲ್ಲಂಘಿಸುವವರಿಗೆ ದಂಡ ಹಾಕುತ್ತಿದ್ದ ಬಿಬಿಎಂಪಿ ಮಾರ್ಷಲ್‌ಗಳಿಗೆ ಬುಧವಾರದಿಂದ ಹೋಮ್ ಗಾರ್ಡ್‌ಗಳು ಸಹ ಸಾಥ್ ನೀಡಲಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರು ಹೇಳಿದ್ದಾರೆ.

ಲಸಿಕೆ ಅಭಿಯಾನ ಮತ್ತು ಹಾಸಿಗೆಗಳ ಲಭ್ಯತೆಯನ್ನು ಪರಿಶೀಲಿಸಲು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಗುಪ್ತಾ ಅವರು, “ಮಾರ್ಷಲ್ ಗಳು ಕೊರೋನಾ ನಿಯಮ ಉಲ್ಲಂಘಿಸುವವರನ್ನು ಗುರುತಿಸಿ ದಂಡ ವಿಧಿಸುತ್ತಾರೆ. ಅವರಿಗೆ ಹೋಮ್ ಗಾರ್ಡ್ ಗಳು ಸಹಾಯ ಮಾಡುತ್ತಾರೆ ಮತ್ತು ಕೊರೋನಾ ಜಾಗೃತಿ ಮೂಡಿಸಲು ಸಹ ಅವರು ಸಹಾಯ ಮಾಡುತ್ತಾರೆ” ಎಂದರು.

ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಈಗಾಗಲೇ ನಗರದ ನಿವಾಸಿಗಳ ಕಲ್ಯಾಣ ಸಂಘಗಳೊಂದಿಗೆ ಸಭೆ ನಡೆಸಲಾಗಿದ್ದು, ಇತರ ಆರ್‌ಡಬ್ಲ್ಯುಎ, ಆಶಾ ಕಾರ್ಯಕರ್ತರು ಮತ್ತು ಖಾಸಗಿ ಆಸ್ಪತ್ರೆಗಳೊಂದಿಗೆ ಮತ್ತಷ್ಟು ಸಭೆ ನಡೆಸಲಾಗುವುದು ಎಂದು ಗುಪ್ತಾ ಹೇಳಿದರು.

ಖಾಲಿ ಅಪಾರ್ಟ್‌ಮೆಂಟ್‌ಗಳು, ಹೋಟೆಲ್ ಕೊಠಡಿಗಳು ಮತ್ತು ಹಾಸ್ಟೆಲ್ ಕೊಠಡಿಗಳನ್ನು ಕೋವಿಡ್ ಕೇರ್ ಸೆಂಟರ್‌ಗಳಾಗಿ ಬಳಸಿಕೊಳ್ಳು ಅವಕಾಶ ನೀಡಲಾಗಿದೆ. ಬೆಂಗಳೂರಿಗೆ ಇಂದು ಎರಡು ಲಕ್ಷ ಲಸಿಕೆಗಳು ಬರುತ್ತಿವೆ ಎಂದು ಅವರು ಹೇಳಿದರು.

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp