ಬೆಂಗಳೂರು ನಗರ ಹೊರತುಪಡಿಸಿ ಇನ್ನೂ 5 ಜಿಲ್ಲೆಗಳಲ್ಲಿ ಕೊರೋನಾ ಏರಿಕೆ: ಸಚಿವ ಸುಧಾಕರ್

ಬೆಂಗಳೂರು ನಗರ ಹೊರತುಪಡಿಸಿ ಇನ್ನೂ 5 ಜಿಲ್ಲೆಗಳಲ್ಲೂ ಮಹಾಮಾರಿ ಕೊರೋನಾ ಸೋಂಕು ಏರಿಕೆಯಾಗುತ್ತಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಅವರು ಬುಧವಾರ ಹೇಳಿದ್ದಾರೆ. 

Published: 07th April 2021 12:32 PM  |   Last Updated: 07th April 2021 01:38 PM   |  A+A-


sudhakar

ಸುಧಾಕರ್

Posted By : Manjula VN
Source : ANI

ಮೈಸೂರು: ಬೆಂಗಳೂರು ನಗರ ಹೊರತುಪಡಿಸಿ ಇನ್ನೂ 5 ಜಿಲ್ಲೆಗಳಲ್ಲೂ ಮಹಾಮಾರಿ ಕೊರೋನಾ ಸೋಂಕು ಏರಿಕೆಯಾಗುತ್ತಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಅವರು ಬುಧವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬೆಂಗಳೂರು ನಗರ ಹೊರತುಪಡಿಸಿ ಇನ್ನೂ 5 ಜಿಲ್ಲೆಗಳಲ್ಲೂ ಕೊರೋನಾ ಏರಿಕೆಯಾಗುತ್ತಿದೆ. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಜಿಲ್ಲಾ ಆಡಳಿತ ಮಂಡಳಿಯಿಂದ ಮಾಹಿತಿ ಪಡೆಯಲಾಗುತ್ತಿದೆ. ಈ ಜಿಲ್ಲೆಗಳಿಗೆ ಹೆಚ್ಚಿನ ಲಸಿಕೆಯನ್ನು ಕಳುಹಿಸಲಾಗುತ್ತಿದೆ. ಹೆಚ್ಚು ಸೋಂಕಿರುವ ಜಿಲ್ಲೆಗಳಲ್ಲಿ ಹೆಚ್ಚು ಪರೀಕ್ಷೆಗಳನ್ನು ನಡೆಸುವಂತಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ. 24 ಗಂಟೆಗಳಲ್ಲಿ ಸೋಂಕಿತರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಬೆಂಗಳೂರು ಹೊರತುಪಡಿಸಿ ಮೈಸೂರು, ಕಲಬುರಗಿ, ತುಮಕೂರು ಹಾಗೂ ಬೀದರ್ ನಲ್ಲಿಯೂ ಸೋಂಕು ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. 

ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಸುಧಾಕರ್ ಅವರು ರಾಜ್ಯದಲ್ಲಿ ಕೋವಿಡ್'ಗೆ ಮಧ್ಯ ವಯಸ್ಕರು ಸಾವಿಗೀಡಾಗುವ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಮರಣ ವಿಶ್ಲೇಷಣೆ ನಡೆಸುವಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿಗೆ ಸೂಚಿಸಿರುವುದಾಗಿ ಹೇಳಿದ್ದರು. 

ಕೋವಿಡ್'ಗೆ ರಾಜ್ಯದಲ್ಲಿ 25 ವರ್ಷ ವಯಸ್ಸಿನವರ ಸಾವು ಸಂಭವಿಸುತ್ತಿರುವುದು ಕಂಡು ಬಂದಿದೆ. ಇದು ಆತಂಕಕಾರಿ ವಿಚಾರ. ಮಧ್ಯ ವಯಸ್ಕರಲ್ಲೇ ಸಾವು ಹೆಚ್ಚಳ ಏಕೆ ಆಗುತ್ತಿದೆ ಎಂಬ ನಿಖರ ಕಾರಣ ತಿಳಿಯಲು ಮರಣ ವಿಶ್ಲೇಷಣೆಯಿಂದ ಸಾಧ್ಯ ಎಂದಿದ್ದರು. 

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp