ಸಾರಿಗೆ ನೌಕರರ ಮುಷ್ಕರ: ವಿಶೇಷ ರೈಲು ವ್ಯವಸ್ಥೆ ಕಲ್ಪಿಸುವಂತೆ ರೈಲ್ವೆಗೆ ಸರ್ಕಾರದಿಂದ ಮನವಿ
ಸಾರಿಗೆ ನೌಕರರ ಮುಷ್ಕರದಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತಿರುವ
ರಾಜ್ಯ ಸರ್ಕಾರ ಇದೀಗ ಸಾರ್ವಜನಿಕರಿಗಾಗಿ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.
Published: 07th April 2021 05:20 PM | Last Updated: 07th April 2021 06:52 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಸಾರಿಗೆ ನೌಕರರ ಮುಷ್ಕರದಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತಿರುವ ರಾಜ್ಯ ಸರ್ಕಾರ ಇದೀಗ ಸಾರ್ವಜನಿಕರಿಗಾಗಿ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.
ಏ.9 ಮತ್ತು 10ರಿಂದ ಬೆಂಗಳೂರಿನಿಂದ ಬೆಳಗಾವಿಗೆ, ಬೆಂಗಳೂರಿನಿಂದ ಕಲಬುರುಗಿಗೆ, ಬೆಂಗಳೂರಿನಿಂದ ಕಾರವಾರಕ್ಕೆ ತಲಾ ಎರಡು, ಬೆಂಗಳೂರಿನಿಂದ ಬೀದರ್; ಬಿಜಾಪುರ, ಶಿವಮೊಗ್ಗಕ್ಕೆ ತಲಾ ಒಂದು ವಿಶೇಷ ರೈಲು ಓಡಿಸುವಂತೆ ರಾಜ್ಯ ಸರ್ಕಾರ ರೈಲ್ವೆಗೆ ಮನವಿ ಮಾಡಿದೆ.
ಅಲ್ಲದೆ ಬೆಂಗಳೂರು-ಮೈಸೂರು-ಬೆಂಗಳೂರು ಇಂಟರ್; ಸಿಟಿ ರೈಲನ್ನು ಹೆಚ್ಚಾಗಿ ಓಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ದಕ್ಷಿಣ-ಪಶ್ಷಿಮ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಗಜಾನನ ಮಲ್ಯಾಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.