ಕೋವಿಡ್ ನಿಯಂತ್ರಣ ಕುರಿತು ಸರ್ವಪಕ್ಷ ನಾಯಕರ ಸಲಹೆ: ಡಾ. ಕೆ.ಸುಧಾಕರ್

ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಕುರಿತು ಸರ್ವಪಕ್ಷ ನಾಯಕರ ಸಲಹೆಗಳನ್ನು ಪಡೆಯುತ್ತೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.

Published: 07th April 2021 01:35 PM  |   Last Updated: 07th April 2021 01:39 PM   |  A+A-


Dr. K sudhakar

ಸುಧಾಕರ್

Posted By : Shilpa D
Source : UNI

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಕುರಿತು ಸರ್ವಪಕ್ಷ ನಾಯಕರ ಸಲಹೆಗಳನ್ನು ಪಡೆಯುತ್ತೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಈ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಪತ್ರ ಬರೆದಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸರ್ವಪಕ್ಷ ನಾಯಕರ ಸಲಹೆಗಳನ್ನು ಪಡೆಯುವುದಾಗಿ ತಿಳಿಸಿದ್ದಾರೆ. 

ಚುನಾವಣಾ ಪ್ರಚಾರದಲ್ಲಿ 500 ಮಂದಿ ಸೇರಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದನ್ನು ಮೀರಿ ಸಹ ಜನ ಸೇರುತ್ತಿದ್ದರೆ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಾರೆ. ಇದನ್ನು ಸಿಎಂ ಗಮನಕ್ಕೂ ಕೂಡ ಮತ್ತೊಮ್ಮೆ ತರಲಾಗುವುದು ಎಂದರು.  

ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಸೀಟು ಭರ್ತಿಗೆ ನೀಡಿರುವ ಅವಕಾಶ ಏ.7 ರವರೆಗೆ ಮಾತ್ರ ಅನ್ವಯವಾಗುತ್ತದೆ. ನಂತರ ಮಾರ್ಗಸೂಚಿಯ ಅನುಗುಣವಾಗಿಯೇ ಇರುತ್ತದೆ ಎಂದು ಸ್ಪಷ್ಟಪಡಿಸಿದರು,

ಕರ್ನಾಟಕದ ಸಮಸ್ತ ಕನ್ನಡಿಗರಿಗೆ ಆರೋಗ್ಯ ಇಲಾಖೆ ಹಾಗೂ ಸರ್ಕಾರದ ವತಿಯಿಂದ ಆರೋಗ್ಯ ದಿನಾಚರಣೆ ಶುಭಾಶಯಗಳು ಎಂದು ಡಾ. ಕೆ.ಸುಧಾಕರ್ ಶುಭಾ ಕೋರಿದರು. ಸಮಗ್ರ ಆರೋಗ್ಯ ಸಶಸ್ತ ಈ ವರ್ಷದ ಘೋಷಣೆ. ವಾಕ್ ಥಾನ್ ಬೆಳಗ್ಗೆ ಮಾಡಿದ್ದೀವಿ. ಪ್ಯಾರಾ ನರ್ಸಿಂಗ್, ಪ್ಯಾರಾ ಮೆಡಿಕಲ್ ನಲ್ಲೂ ಆಚರಣೆ ಮಾಡಲಾಗುತ್ತಿದೆ. ಕೊವಿಡ್ ನಡವಳಿಕೆ ಅನುಗುಣವಾಗಿ ಸಮಾರಂಭವನ್ನು ಸರಳವಾಗಿ ಆಚರಿಸಲಿದ್ದೇವೆ. ಮೂಲಭೂತ ಹಕ್ಕಾಗಿ ಒಳ್ಳೆಯ ಆರೋಗ್ಯವನ್ನು ಪರಿಗಣಿಸಬೇಕು. ಪ್ರತಿಯೊಬ್ಬರು ಆರೋಗ್ಯವಂತರಾಗಿರಬೇಕು. ಆಗ ರಾಜ್ಯ ಕೂಡ ಆರ್ಥಿಕವಾಗಿ ಪ್ರಗತಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Stay up to date on all the latest ರಾಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp